Asianet Suvarna News Asianet Suvarna News

ಬಾಲಿವುಡ್‌ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸ್ತಿವೆ.. ರಿಷಬ್‌ ಶೆಟ್ಟಿ ಮಾತಿಗೆ ಯಾಕಿಷ್ಟು ಆಕ್ರೋಶ?

ಕಾಂತಾರ ಸಿನಿಮಾದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿರುವ ರಿಷಬ್‌ ಶೆಟ್ಟಿ ಮೇಲೆ ಉತ್ತರ ಭಾರತದ ಅದರಲ್ಲೂ ಬಾಲಿವುಡ್‌ ಸಿನಿಮಾದ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಅವರಾಡಿರುವ ಒಂದು ಮಾತು.
 

Kantara Director and Actor Rishab Shetty Says Bollywood Shows India In Bad Light san
Author
First Published Aug 21, 2024, 3:46 PM IST | Last Updated Aug 21, 2024, 3:49 PM IST

ಬೆಂಗಳೂರು (ಆ.21): ಕನ್ನಡದ ನಟ, ನಿರ್ಮಾಪಕ, ನಿರ್ದೇಶಕ ರಿಷಬ್‌ ಶೆಟ್ಟಿ ಇತ್ತೀಚೆಗೆ ಕಾಂತಾರ ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದರ ಬೆನ್ನಲ್ಲಿಯೇ ಅವರ ಸಾಕಷ್ಟು ಸಂದರ್ಶನಗಳು ವೈರಲ್‌ ಆಗುತ್ತಿವೆ. ಇತ್ತೀಚೆಗೆ ಅವರು ಬಾಲಿವುಡ್‌ ಸಿನಿಮಾಗಳ ಬಗ್ಗೆ ಮಾತನಾಡಿದ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ ಸಿನಿಮಾಗಳಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಬಗ್ಗೆ ಮಾತನಾಡುತ್ತಾ, ಬಾಲಿವುಡ್‌ ಸಿನಿಮಾಗಳಲ್ಲಿ ನಮ್ಮ ಆಚರಣೆ, ಸಂಪ್ರದಾಯ ಹಾಗೂ ದೇಶವನ್ನು ಕೆಟ್ಟದಾಗಿ ತೋರಿಸುವ ಸಂಸ್ಕೃತಿ ಆರಂಭವಾಗಿರುವುದಕ್ಕೆ ಬೇಸರ ವ್ಯ್ತಪಡಿಸಿದ್ದರು. ತಮ್ಮ ನಿರ್ಮಾಣದ ಮುಂದಿನ ಕನ್ನಡ ಸಿನಿಮಾ ಲಾಫಿಂಗ್‌ ಬುದ್ಧದ ಪ್ರಚಾರ ಕಾರ್ಯಕ್ರಮದ ವೇಳೆ ಅವರು ಆಡಿದ್ದ ಈ ಮಾತು ಉತ್ತರ ಭಾರತೀಯರನ್ನು ಕೆರಳಿಸಿದೆ. ಈಗ ವೈರಲ್ ಆಗಿರುವ ಸಂದರ್ಶನವೊಂದರಲ್ಲಿ, ರಿಷಬ್ ಅವರು ಯಾವಾಗಲೂ ತಮ್ಮ ರಾಷ್ಟ್ರ, ರಾಜ್ಯ ಮತ್ತು ಭಾಷೆಯನ್ನು ಸಕಾರಾತ್ಮಕವಾಗಿ ತೋರಿಸುವುದೇ ತಮಗೆ ಇಷ್ಟ. ಅದನ್ನೇ ನಾನು ಮಾಡುತ್ತೇನೆ ಎಂದು ಹೇಳಿದ್ದರು.

'ಭಾರತೀಯ ಚಲನಚಿತ್ರಗಳು, ವಿಶೇಷವಾಗಿ ಬಾಲಿವುಡ್, ಭಾರತವನ್ನು ನಕಾರಾತ್ಮಕವಾಗಿ ಚಿತ್ರಿಸುತ್ತದೆ. ಈ ಕಲಾತ್ಮಕ ಚಲನಚಿತ್ರಗಳು ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪ್ರದರ್ಶನಗೊಳ್ಳುತ್ತವೆ ಮತ್ತು ವಿಶೇಷ ಗಮನವನ್ನು ಪಡೆಯುತ್ತವೆ. ನನಗೆ, ನನ್ನ ರಾಷ್ಟ್ರ, ನನ್ನ ರಾಜ್ಯ ಮತ್ತು ನನ್ನ ಭಾಷೆ ಹೆಮ್ಮೆಯ ಮೂಲಗಳಾಗಿವೆ. ಅವುಗಳನ್ನು ಸಕಾರಾತ್ಮಕವಾಗಿ ಪ್ರಸ್ತುತಪಡಿಸುವುದನ್ನು ನಾನು ನಂಬುತ್ತೇನೆ. ಜಗತ್ತಿಗೆ ಸಕಾರಾತ್ಮಕ ಬೆಳಕಿನಲ್ಲಿ, ಮತ್ತು ಅದನ್ನೇ ನಾನು ಮಾಡಲು ಪ್ರಯತ್ನಿಸುತ್ತೇನೆ" ಎಂದು ರಿಷಬ್ ಮೆಟ್ರೋಸಾಗಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆದರೆ, ರಿಷಬ್‌ ಅವರ ಈ ಮಾತು ಉತ್ತರ ಭಾರತೀಯರು ಹಾಗೂ ಬಾಲಿವುಡ್‌ ಸಿನಿಮಾ ಪ್ರಿಯರಿಗೆ ಇಷ್ಟವಾಗಿಲ್ಲ. ಕಾಂತಾರ ಸಿನಿಮಾದಲ್ಲಿಯೇ ಹೀರೋಯಿನ್‌ ಸೊಂಟಕ್ಕೆ ಚಿವುಟುವ ದೃಶ್ಯವನ್ನು ರಿಷಬ್‌ಗೆ ನೆನಪಿಸಿ ಟೀಕೆ ಮಾಡಿದ್ದಾರೆ. ಇದೇ ಕಾರಣಕ್ಕಾಗಿಯೇ ನಾನು ದಕ್ಷಿಣ ಭಾರತದ ಹಲವು ನಾಯಕರನ್ನು ಕಪಟಿಗಳು ಎಂದು ಕರೆಯುತ್ತೇನೆ.  ಅವರು ತಮ್ಮ ಭಾಷೆಯ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ" ಎಂದು ಬರೆದಿದ್ದಾರೆ.

"ಲಗಾನ್ ಮತ್ತು ಮದರ್ ಇಂಡಿಯಾ ಚಲನಚಿತ್ರಗಳು ಪಶ್ಚಿಮದಲ್ಲಿ ಭಾರಿ ವಿಮರ್ಶಾತ್ಮಕ ಯಶಸ್ಸನ್ನು ಗಳಿಸಿದವು. ಆದರೆ, ಅವು ಭಾರತೀಯ ಹೆಮ್ಮೆಯನ್ನು ಎಂದಿಗೂ ಹಾಳು ಮಾಡಿಲ್ಲ..' ಎಂದು ರಿಷಬ್‌ ಶೆಟ್ಟಿಗೆ ಟ್ಯಾಂಗ್‌ ಮಾಡಿದ್ದಾರೆ. ಸಕ್ಸಸ್‌ಅನ್ನೋದು ತಾತ್ಕಾಲಿಕ ಆದರೆ, ಹೀರೋಯಿನ್‌ಗಳ ಸೊಂಟ ಚಿವುಟುವುದು ಹಾಗೂ ಬಾಲಿವುಡ್‌ ಬಗ್ಗೆ ಮಾತನಾಡೋದು ಪರ್ಮನೆಂಟ್‌ ಎಂದು ಮತ್ತೊಬ್ಬರು ಬರೆದಿದ್ದಾರೆ.

ತಂಗಿಗೆ ಕಾಲ್ಗೆಜ್ಜೆ ಕೊಟ್ಟಿದ ರಣ್ವಿತ್; ರಿಷಬ್ ಶೆಟ್ಟಿ ಮಕ್ಕಳ ರಕ್ಷಾ ಬಂಧನ ಫೋಟೋ ವೈರಲ್

"ನಾನು ಹೈಪ್‌ನ ಕಾರಣದಿಂದ ಕಾಂತಾರವನ್ನು ವೀಕ್ಷಿಸಿದೆ. ಆದರೆ, ಸಿನಿಮಾದ ದೃಶ್ಯವೊಂದರಲ್ಲಿ ನಾಯಕ ಪಾತ್ರಧಾರಿ ಹೀರೋಯಿನ್‌ನ ಸೊಂಟ ಚಿವುಟಿದಾಗ, ನಾನು ಸ್ಕಿಪ್‌ ಮಾಡಲು ಆರಂಭಿಸಿದೆ. ಈಗ ಇವರು ಸಂತನಾಗಲು ಪ್ರಯತ್ನ ಪಡುವ ರೀತಿಇದೆ' ಎಂದಿದ್ದಾರೆ. 2022ರ ಸೆಪ್ಟೆಂಬರ್‌ನಲ್ಲಿ ತೆರೆಗೆ ಬಂದಿದ್ದ ಕಾಂತಾರ ಸಿನಿಮಾ 2022ರಲ್ಲಿ ಅತಿದೊಡ್ಡ ಹಿಟ್‌ ಸಿನಿಮಾಗಳಲ್ಲಿ ಒಂದಾಗಿತ್ತು. ಆ ಮೂಲಕ ಕನ್ನಡ ಸಿನಿಮಾರಂಗದಲ್ಲಿ ರಿಷಬ್‌ ಶೆಟ್ಟಿ ದೊಡ್ಡನಟನಾಗಿಯೂ ರೂಪುಗೊಂಡಿದದರು. ಈ ನಡುವೆ, ಬಹುನಿರೀಕ್ಷಿತ ಕಾಂತಾರದ ಮುಂದಿನ ಭಾಗಕ್ಕೆ ರಿಷಬ್ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ, ಕಾಂತಾರ ಅಧ್ಯಾಯ 1, ಇದು ಪ್ರೀಕ್ವೆಲ್ ಆಗಲಿದೆ.

ನಾನಿನ್ನು ಫೆಸ್ಟಿವಲ್‌ ಟೈಪ್ ಸಿನಿಮಾ ಮಾಡಲ್ಲ: ನಟ ರಿಷಬ್ ಶೆಟ್ಟಿ

Latest Videos
Follow Us:
Download App:
  • android
  • ios