Asianet Suvarna News Asianet Suvarna News

ಮದುವೆ ಬೆನ್ನಲ್ಲೇ ಕಾರು ಮಾರಿದ ಯೂಟ್ಯೂಬರ್ ಮಧು ಗೌಡ; ಶೋಕಿಗೆ ಎಲ್ಲನೂ ಮಾರಬೇಕು ಎಂದ ನೆಟ್ಟಿಗರು!

ಇದ್ದಕ್ಕಿದ್ದಂತೆ ಕಾರು ಮಾರಲು ಮುಂದಾದ ಯೂಟ್ಯೂಬರ್ ಮಧು ಗೌಡ. ಮಿಸ್ ಯು ವಿಡಿಯೋ ಸಖತ್ ವೈರಲ್....

Kannada vlogger Madhu Gowda sells her old blue car before wedding preparation vcs
Author
First Published Aug 24, 2024, 8:50 PM IST | Last Updated Aug 24, 2024, 8:50 PM IST

ಕನ್ನಡ ಜನಪ್ರಿಯ ಯೂಟ್ಯೂಬರ್ ಮಧು ಗೌಡ ಮತ್ತು ಸಹೋದರ ಮದನ್ ಗೌಡ ಕೆಲವು ದಿನಗಳ ಹಿಂದೆ ಮಹೇಂದ್ರ ಎಸ್‌ಯುವಿ ಕಾರನ್ನು ಬುಕ್ ಮಾಡಿದ್ದಾರೆ. ಮದುವೆ ತಯಾರಿಯಲ್ಲಿ ಸಾಕಷ್ಟು ಖರ್ಚುಗಳು ಇರುತ್ತದೆ ಈ ನಡುವೆ ನಿಮಗೆ ಕಾರು ಬೇಕಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಯಾವುದಕ್ಕೂ ಕೇರ್ ಮಾಡಿದ ವ್ಲಾಗರ್‌ ಹೊಸ ಕಾರನ್ನು ಬುಕ್ ಮಾಡಿದ್ದರು, ಇದೊಂದು ಬಿಗ್ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. 

ಇಷ್ಟು ದಿನ ಮದನ್ ಗೌಡ ಬಳಸುತ್ತಿದ್ದ ನೀಲಿ ಬಣ್ಣದ ಬಲಿನೋ ಕಾರನ್ನು ಮಾರುತ್ತಿದ್ದಾರೆ. ಹೌದು! ಹಳೆಯ ಕಾರನ್ನು ಮಾರಿ ಅದರಿಂದ ಬಂದ ಹಣದ ಜೊತೆ ಒಂದಿಷ್ಟು ಹಣವನ್ನು ಸೇರಿಸಿ ಹೊಸ ಕಾರು ಖರೀದಿಸುತ್ತಿದ್ದಾರೆ. ಅಲ್ಲದೆ ಭಾವಿ ಪತಿ ನಿಖಿಲ್ ರವೀಂದ್ರ ಇದೀಗ ಮಹೇಂದ್ರ ಹೊಸ ಥಾರ್‌ನ ಬುಕ್ ಮಾಡುತ್ತಿದ್ದಾರೆ. ಈ ವರ್ಷ ಅಂದುಕೊಂಡಿದ್ದು ನೆರವೇರುತ್ತಿದೆ ಅನ್ನೋ ಖುಷಿಯಲ್ಲಿ ಮಧು ಗೌಡ ಇದ್ದರೆ.... 'ಮದುವೆ ಸಾಲ ತಡೆಯಲಾಗದೆ ಕಾರನ್ನು ಮಾರಲು ಮುಂದಾಗಿದ್ದಾರೆ' ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. 

ಮದುವೆಗೂ ಮುನ್ನವೇ ನಾದಿನಿಗೆ 13 ಸಾವಿರ ರೂ. ಚಪ್ಪಲಿ ಕೊಡಿಸಿದ ಮಧು ಗೌಡ;ಜನರಿಂದ ನಿಮ್ಮ ದುಡಿಮೆ, ಈ ಶೋಕಿ ಎಂದ ನೆಟ್ಟಿಗರು!

ಅಕ್ಟೋಬರ್‌ ತಿಂಗಳಿಗೆ ಮಧು ಗೌಡ ಮತ್ತು ನಿಖಿಲ್ ರವೀಂದ್ರ ಮದುವೆಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ಈ ಜೋಡಿ ಪ್ರತಿನಿತ್ಯ ವಿಡಿಯೋಗಳನ್ನು ಅಪ್ಲೋಡ್ ಜನರಿಗೆ ತಮ್ಮ ಜೀವನದ ಬಗ್ಗೆ ತಿಳಿಸುತ್ತಾರೆ. ಕೆಲವು ದಿನಗಳ ಹಿಂದೆ ನಿಖಿಲ್ ರವೀಂದ್ರ ಮತ್ತು ನಿಶಾ ಯೂಟ್ಯೂಬ್ ಚಾನೆಲ್ ಸುಮಾರು 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ವರ ಮಹಾಲಕ್ಷ್ಮಿ ಹಬ್ಬದ ದಿನವೇ ಮಧು ಗೌಡ ಯೂಟ್ಯೂಬ್ ಚಾನೆಲ್ 4 ಲಕ್ಷ ಫಾಲೋವರ್ಸ್‌ ಪಡೆದಿದ್ದಾರೆ. ವಿದ್ಯಾಭ್ಯಾಸ ಮುಗಿಸಿದ್ದರೂ ಯೂಟ್ಯೂಬ್ ಚಾನೆಲ್ ಮತ್ತು ಖಾಸಗಿ ಬ್ರ್ಯಾಂಡ್‌ಗಳ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ ಮಧು ಮತ್ತು ನಿಖಿಲ್. 

ಅಣ್ಣನಿಗೆ SUV ಕಾರು ಗಿಫ್ಟ್‌ ಮಾಡಿದ ಯೂಟ್ಯೂಬರ್ ಮಧು ಗೌಡ; ಥಾರ್ ಬುಕ್‌ ಮಾಡಿ ಸರ್ಪ್ರೈಸ್‌ ಕೊಟ್ಟ ಭಾವಿ ಪತಿ ನಿಖಿಲ್!

Latest Videos
Follow Us:
Download App:
  • android
  • ios