ಅಣ್ಣನಿಗೆ SUV ಕಾರು ಗಿಫ್ಟ್‌ ಮಾಡಿದ ಯೂಟ್ಯೂಬರ್ ಮಧು ಗೌಡ; ಥಾರ್ ಬುಕ್‌ ಮಾಡಿ ಸರ್ಪ್ರೈಸ್‌ ಕೊಟ್ಟ ಭಾವಿ ಪತಿ ನಿಖಿಲ್!

ಮದುವೆಗೂ ಮುನ್ನ ಒಂದಾದ ಮೇಲೊಂದು ದುಬಾರಿ ವಸ್ತುಗಳನ್ನು ಖರೀದಿಸುತ್ತಿರುವ ಯೂಟ್ಯೂಬರ್‌ಗಳು....ವ್ಲಾಗ್ ವೈರಲ್....
 

Kannada youtuber Madhu gowda gifts SUV to brother as fiance Nisha Nikhil Ravindra book Mahindra Thar vcs

ಕನ್ನಡದ ಯೂಟ್ಯೂಬರ್ ಮಧು ಗೌಡ ಮತ್ತು ನಿಖಿಲ್ ರವೀಂದ್ರ ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಶಾಪಿಂಗ್ ಛತ್ರ ಬುಕ್ಕಿಂತ ಅಂತ ಬ್ಯುಸಿಯಾಗಿರುವ ಈ ಪ್ರೇಮ ಪಕ್ಷಿಗಳು ಈಗ ದುಬಾರಿ ವಸ್ತುಗಳನ್ನು ಗಿಫ್ಟ್ ಮಾಡಿಕೊಂಡಿದ್ದಾರೆ. ಬೆಂಳೂರಿನಲ್ಲಿ ವಾಸಿಸುತ್ತಿರುವ ಮಧು ಗೌಡ ಲಾಂಗ್‌ಡ್ರೈವ್ ಹೋಗಬೇಕು ಎಂದು ಅಣ್ಣನಿಗೆ ಹೇಳಿ ಭಾವಿ ಪತಿ ನಿಖಿಲ್ ರವೀಂದ್ರ ನಿವಾಸಕ್ಕೆ ಸರ್ಪ್ರೈಸ್‌ ಎಂಟ್ರಿ ಕೊಡುತ್ತಾರೆ. ಕಾಫಿ ಡೇ ಅಂತೆಲ್ಲಾ ಹೇಳಿ ಅಲ್ಲೇ ಸುತ್ತಾಡಿಕೊಂಡು ಎಂಜಾಯ್ ಮಾಡಿ ಮರು ದಿನ ಅಣ್ಣನಿಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ. 

ಸುಮಾರು ನಾಲ್ಕು ವರ್ಷಗಳಿಂದ ಒಂದೇ ಕಾರು ಓಡಿಸುತ್ತಿರುವ ಅಣ್ಣ ಮದನ್ ಗೌಡಗೆ ಹೊಸ ಕಾರು ಕೊಡಿಸಲು ತಂಗಿ ಮಧು ಗೌಡ ಆಲೋಚನೆ ಮಾಡುತ್ತಾರೆ. ಭಾವಿ ಪತಿ ಜೊತೆ ಮೈಸೂರಿನಲ್ಲಿ ಇರುವ ಎಲ್ಲಾ ಕಾರು ಶೋರೂಮ್‌ಗಳಿಗೂ ಭೇಟಿ ನೀಡಿ ಟೆಸ್ಟ್ ಡ್ರೈವ್ ಮಾಡುತ್ತಾರೆ. ಈ ವೇಳೆ ಮಹೇಂದ್ರ SUV ಕಾರು ಇಷ್ಟ ಪಟ್ಟ ಕಾರಣ ತಕ್ಷಣವೇ ಬುಕ್ ಮಾಡಿಬಿಡುತ್ತಾರೆ. ಸಂತೋಷದಲ್ಲಿ ಇರುವ ಸಹೋದರನನ್ನು ನೋಡಿ ಮಧು ಗೌಡ ಯೂಟ್ಯೂಬ್ ವ್ಲಾಗ್ ಮಾಡಿದ್ದಾರೆ. ಅಲ್ಲದೆ ಭಾವಿ ಪತಿ ನಿಖಿಲ್ ರವೀಂದ್ರ ಬೆಂಗಳೂರಿನಲ್ಲಿ ಜಿಮ್ ತೆರೆಯುತ್ತಿದ್ದು ಓಪನಿಂಗ್ ಕಾರ್ಯಕ್ರಮಕ್ಕೆ ಎಲ್ಲರೂ ಬೆಂಗಳೂರಿಗೆ ಆಗಮಿಸುತ್ತಾರೆ. 

ನಾರಾಯಣಾಚಾರ್ ಸೊಸೆ ಬ್ಲೌಸ್‌ ತುಂಬಾ ಡೀಪ್ ಆಯ್ತು; ಆಗ್ತಿರೋ ಎಡವಟ್ಟಿಗೆ ತುಪ್ಪ ಸುರಿದ ನೆಟ್ಟಿಗರು!

'ಮಹೇಂದ್ರ 5 ಡೋರ್‌ ಇರುವ ಥಾರ್ ರಿಲೀಸ್ ಆಗುವ ಮುನ್ನವೇ ನಿಖಿಲ್ ರವೀಂದ್ರ ಬುಕ್ ಮಾಡಿದ್ದಾರೆ. ಮದುವೆಗೂ ಮುನ್ನ ಹೊಸ ಗಾಡಿ ಬರಲಿದೆ' ಎಂದು ಭಾವಿ ಪತಿ ನಿಖಿಲ್ ರವೀಂದ್ರ ಬುಕ್‌ ಮಾಡಿರುವುದರ ಬಗ್ಗೆನೂ ಮಧು ಗೌಡ ರಿವೀಲ್ ಮಾಡುತ್ತಾರೆ. ಭಾವಿ ಪತಿ ಕೊಡುತ್ತಿರುವ ಸರ್ಪ್ರೈಸ್‌ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಇದೇನಪ್ಪ ಮದುವೆ ಖರ್ಚು ಹೆಚ್ಚಿರುತ್ತದೆ ಹೇಗೆ ದುಡಿಯುತ್ತಾರೆ ಎಂದು ನಾವು ಯೋಚನೆ ಮಾಡುತ್ತಿದ್ದರೆ ಇವ್ರು ಒಡವೆ, ಮನೆ, ದುಬಾರಿ ಬ್ಯಾಗ್‌ಗಳು ಮತ್ತು ಕಾರು ಅಂತ ಖರೀದಿ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

2027ರಲ್ಲಿ ನಾಗ ಚೈತನ್ಯ- ಶೋಭಿತಾ ವಿಚ್ಛೇದನ ಪಡೆಯೋದು ಗ್ಯಾರಂಟಿ ಎಂದ ಜ್ಯೋತಿಷಿ ವಿರುದ್ಧ ದೂರು ದಾಖಲು

Latest Videos
Follow Us:
Download App:
  • android
  • ios