Asianet Suvarna News Asianet Suvarna News

ಮದುವೆಗೂ ಮುನ್ನವೇ ನಾದಿನಿಗೆ 13 ಸಾವಿರ ರೂ. ಚಪ್ಪಲಿ ಕೊಡಿಸಿದ ಮಧು ಗೌಡ;ಜನರಿಂದ ನಿಮ್ಮ ದುಡಿಮೆ, ಈ ಶೋಕಿ ಎಂದ ನೆಟ್ಟಿಗರು!

 ಒಂದು ಲಕ್ಷ್ಯೂರಿ ವಸ್ತು ಖರೀದಿಸಿದರೆ ಮತ್ತೊಂದು ದೊಡ್ಡ ಬ್ರ್ಯಾಂಡ್ ಖರೀದಿಸಬೇಕು ಅನಿಸುತ್ತದೆ..ನಮ್ಮ ಕನಸು ನನಸು ಮಾಡಿಕೊಳ್ಳಬೇಕು ಎಂದ ಮಧು.

Kannada vlogger Madhu gowda buys 13 thousand worth birkenstock vcs
Author
First Published Aug 15, 2024, 4:02 PM IST | Last Updated Sep 11, 2024, 5:19 PM IST

ಕನ್ನಡದ ಯೂಟ್ಯೂಬ್ ಮದುವೆ ಗೌಡ ಮತ್ತು ನಿಖಿಲ್ ರವೀಂದ್ರ ತಮ್ಮ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಈ ಜೋಡಿ ತಮ್ಮ ಜೀವನದ ಪ್ರತಿಯೊಂದು ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಮದುವೆ, ಹೊಸ ಸೈಟ್ ಖರೀದಿ, ಚಿನ್ನ ಅಷ್ಟೇ ಯಾಕೆ ಹೊಸ ಕಾರು ಬುಕ್ ಮಾಡಿದರೂ ವ್ಲಾಗ್ ಮಾಡುತ್ತಾರೆ. ಬೆಂಗಳೂರಿನಲ್ಲಿ ತಮ್ಮ ಭಾವಿ ಪತಿ ಓಪನ್ ಮಾಡುತ್ತಿರುವ ಜಿಮ್‌ ಓಪನಿಂಗ್‌ ದಿನವೇ ನಾದಿನಿಗೆ ದುಬಾರಿ ಗಿಫ್ಟ್‌ ನೀಡಿದ್ದಾರೆ ಮಧು. 

ಹೌದು! ಬೆಂಗಳೂರಿನ ಮಾಲ್‌ವೊಂದಲ್ಲಿ ಬರ್ಕಿನ್‌ಸ್ಟಾಕ್‌ ಎನ್ನುವ ಬ್ರ್ಯಾಂಡ್‌ನ ಚಪ್ಪಲಿಯನ್ನು ಮಧು ಗೌಡ ಖರೀದಿಸಿದ್ದಾರೆ.  ಎರಡು ಮೂರು ಬಣ್ಣದ ಚಪ್ಪಲಿಯಲ್ಲಿ ಗೊಂದಲ ಇರುವುದಾಗಿಯೂ ಹೇಳಿಕೊಂಡು ಕೊನೆಗೆ ಕಪ್ಪು ಬಣ್ಣದ ಚಪ್ಪಲಿ ಖರೀದಿಸಿದ್ದಾರೆ. ಈ ಚಪ್ಪಲಿಯ ಬೆಲೆ ಬರೋಬ್ಬರ 13 ಸಾವಿರ ರೂಪಾಯಿ ಎಂದು ಭಾವಿ ಪತಿ ಹೇಳುತ್ತಾ ಶಾಕ್ ಆಗುತ್ತಾರೆ. 

ಅಣ್ಣನಿಗೆ SUV ಕಾರು ಗಿಫ್ಟ್‌ ಮಾಡಿದ ಯೂಟ್ಯೂಬರ್ ಮಧು ಗೌಡ; ಥಾರ್ ಬುಕ್‌ ಮಾಡಿ ಸರ್ಪ್ರೈಸ್‌ ಕೊಟ್ಟ ಭಾವಿ ಪತಿ ನಿಖಿಲ್!

'ನನ್ನ ನಾದಿನಿಗೂ ಈ ಬ್ರ್ಯಾಂಡ್‌ನ ಚಪ್ಪಲಿ ಅಂದ್ರೆ ತುಂಬಾನೇ ಇಷ್ಟ. ನಾನು ಖರೀದಿಸಿದೆ ಎಂದು ಸ್ನ್ಯಾಪ್ ಚಾಟ್‌ನಲ್ಲಿ ಪೋಸ್ಟ್‌ ಮಾಡಿದಾಗ ನೋಡಿ ನನ್ನನ್ನು ಬಿಟ್ಟು ತೆಗೆದುಕೊಂಡೆ ಎಂದು ಹೇಳಿದರು. ಹೀಗಾಗಿ ಆಕೆಗೂ ಒಂದು ಚಪ್ಪಲಿ ಕೊಡಿಸಬೇಕು ಅನಿಸಿತ್ತು ಅದಿಕ್ಕೆ ಫೋಟೋಗಳನ್ನು ಕಳುಹಿಸಿರುವೆ ಆಕೆಗೆ ಇಷ್ಟವಾದದ್ದು ಸೆಲೆಕ್ಟ್ ಮಾಡಿಕೊಳ್ಳಲಿ...ನನ್ನ ನಾದಿನಿ ಫುಲ್ ಖುಷಿಯಲ್ಲಿ ತೇಲಾಗುತ್ತಿದ್ದಾಳೆ ಅಂತೆ. ಖುಷಿಯಲ್ಲಿ ನಾನು ಒಬ್ಬಳೇ ನಗುತ್ತಿದ್ದೀನಿ ಎಂದಳು' ಎಂದು ಮಧು ವ್ಲಾಗ್‌ನಲ್ಲಿ ಮಾತನಾಡಿದ್ದಾರೆ.

ಮದುವೆ ಸೀರೆ ಸಿಕ್ತು, ಛತ್ರ ಬುಕ್ ಆಯ್ತು; ಫಸ್ಟ್‌ ನೈಟ್‌ನೂ ತೋರ್ಸಮ್ಮ ಎಂದು ಮಧು ಗೌಡ ಕಾಲೆಳೆದ ನೆಟ್ಟಿಗರು!

'ಒಂದು ತೆಗೆದುಕೊಳ್ಳುವವರೆಗೂ ಆಸೆ ಆಮೇಲೆ ಮತ್ತೊಂದು ದುಬಾರಿ ವಸ್ತು ಖರೀದಿಸಬೇಕು ಅನ್ನೋ ಆಸೆ ಹಾಗೆ ಬಂದು ಬಿಡುತ್ತದೆ. ಒಂದೊಂದೆ ತೆಗೆದುಕೊಂಡು ಆಸೆಗಳನ್ನು ಫುಲ್ ಫಿಲ್ ಮಾಡಿಕೊಳ್ಳಬೇಕು' ಎಂದು ಮಧು ಹೇಳಿರುವ ಮಾತನ್ನು ಕೇಳಿ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. 'ಜನರು ನಿಮ್ಮ ವಿಡಿಯೋ ನೋಡುತ್ತಿರುವುದಕ್ಕೆ ನಿಮಗೆ ದುಡ್ಡು ಬರುತ್ತಿರುವುದು ಇಲ್ಲದಿದ್ದರೆ ಎಲ್ಲಿಂದ ನಿಮ್ಮ ದುಡಿಮೆ ಮತ್ತು ಜೀವನ ನಡೆಯುತ್ತಿತ್ತು. ಈ ನೀವು ಏನೇ ಶೋಕಿ ಮಾಡಿದರೂ ಅದು ಜನರು ನಿಮಗೆ ನೀಡುತ್ತಿರುವುದು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos
Follow Us:
Download App:
  • android
  • ios