ಗೋಲ್ಡನ್‌ ಸ್ಟಾರ್ ಗಣೇಶ್ ಹಾಗೂ ವಿಕಟಕವಿ ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ 'ಗಾಳಿಪಟ 2' ಸಿನಿಮಾ ಬರುತ್ತಿದ್ದು, ಹಿರಿಯ ನಟ ಅನಂತ್‌ನಾಗ್‌ ಅವರು ಕನ್ನಡ ಮೇಷ್ಟ್ರಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇದೀಗ ತಮ್ಮ ಭಾಗದ ಡಬ್ಬಿಂಗ್‌ನ್ನು ಪೂರ್ಣಗೊಳಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಪೋಸ್ಟರ್‌ನಿಂದಲೇ ಸಖತ್ ಸದ್ದು ಮಾಡಿರುವ ಚಿತ್ರ 'ಗಾಳಿಪಟ 2' (Galipata 2). ಮುಗುಳು ನಗೆ' ಸಿನಿಮಾ ಬಳಿಕ ನಿರ್ದೇಶಕ ವಿಕಟಕವಿ ಯೋಗರಾಜ್ ಭಟ್ (Yogaraj Bhat) ಹಾಗೂ ಗಣೇಶ್ (Ganesh) ಕಾಂಬಿನೇಷನ್‌ನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಸೂರಜ್‌ ಪ್ರೊಡ​ಕ್ಷ​ನ್‌​ನಲ್ಲಿ ರಮೇಶ್‌ ರೆಡ್ಡಿ ನಂಗ್ಲಿ ನಿರ್ಮಾಣ ಮಾಡು​ತ್ತಿ​ರುವ 'ಗಾಳಿ​ಪಟ 2' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಚಿತ್ರದ ಡಬ್ಬಿಂಗ್ (Dubbing) ಕೆಲಸಗಳು ನಡೆಯುತ್ತಿದ್ದು, ಇತ್ತೀಚೆಗೆ ಗೋಲ್ಡನ್‌ ಸ್ಟಾರ್ ಗಣೇಶ್ ತಮ್ಮ ಭಾಗದ ಡಬ್ಬಿಂಗ್‌ನ್ನು (Dubbing) ಪೂರ್ಣಗೊಳಿಸಿದ್ದರು. ಇದೀಗ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ ಅನಂತ್‌ನಾಗ್ (Anant Nag) ಅವರು ತಮ್ಮ ಪಾತ್ರದ ಡಬ್ಬಿಂಗ್‌ನ್ನು ಪೂರ್ಣಗೊಳಿಸಿದ್ದಾರೆ.

ಈ ಬಗ್ಗೆ ಯೋಗರಾಜ್ ಭಟ್ ತಮ್ಮ ಸಾಮಾಜಿಕ ಜಾಲತಾಣ (Sociaal Media) ಖಾತೆಯಲ್ಲಿ, ನಮಸ್ತೆ. ಸಿನಿ ರಂಗದ ದಂತಕಥೆ, 'ಗಾಳಿಪಟ 2' ಚಿತ್ರದ ಡಬ್ಬಿಂಗ್ ಮುಗಿಸಿದ ಘಳಿಗೆ. ಒಂದು ಅತ್ಯದ್ಭುತ ಅನುಭವ. ಅನಂತ್ ಸರ್‌ಗೆ ದೀರ್ಘದಂಡ ನಮನ. ಜೈ ಗಾಳಿಪಟ 2 ಎಂದು ಬರೆದುಕೊಂಡು ಸ್ಟುಡಿಯೋದಲ್ಲಿ ಅನಂತ್‌ನಾಗ್ ಅವರು ಡಬ್ಬಿಂಗ್ ಮಾಡುತ್ತಿರುವ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ (Facebook) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಹಿಂದೆ 'ನಮಸ್ತೆ.. ನಲ್ಮೆಯ ಗೆಳೆಯನ ಡಬ್ಬಿಂಗ್ ಮುಕ್ತಾಯ. ಜೈ ಗಣಪ. ಜೈ ಗಾಳಿಪಟ 2 ಎಂದು ಕ್ಯಾಪ್ಷನ್ ಬರೆದು ಸ್ಟುಡಿಯೋದಲ್ಲಿ ಗಣೇಶ್ ಡಬ್ಬಿಂಗ್ ಮಾಡುತ್ತಿರುವ ಫೋಟೋಗಳನ್ನು ಯೋಗರಾಜ್‌ ಭಟ್ ಹಂಚಿಕೊಂಡಿದ್ದರು.

Yogaraj Bhat: 'ಗಾಳಿಪಟ 2' ಚಿತ್ರದ ಡಬ್ಬಿಂಗ್ ಮುಗಿಸಿದ ಗೋಲ್ಡನ್‌ ಸ್ಟಾರ್ ಗಣೇಶ್

ಅನಂತ್‌ನಾಗ್ ಅವರು ಇತ್ತೀಚೆಗೆ ಬಿಡುಗಡೆಯಾದ ಕ್ರೇಜಿಸ್ಟಾರ್ ವಿ.ರವಿಚಂದ್ರನ್ (V.Ravichandran) ಅಭಿನಯದ 'ದೃಶ್ಯ 2' (Drishya 2) ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,ಸಿನಿಮಂದಿಯ ಮೆಚ್ಚುಗೆಗೆ ಪಾತ್ರರಾಗಿದ್ದರು. ಕೆಲ ತಿಂಗಳ ಹಿಂದಷ್ಟೇ ಅನಂತ್ ನಾಗ್ ಅವರಿಗೆ ಪದ್ಮ ಪುರಸ್ಕಾರ ಪ್ರದಾನ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದ್ದು, ಟ್ವಿಟರ್‌ನಲ್ಲಿ (Twitter) #AnanthnagForPadma ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು. ಈ ಕುರಿತು ಟ್ವಿಟರ್‌ನಲ್ಲಿ #AnanthnagForPadma ಹ್ಯಾಷ್‌ಟ್ಯಾಗ್ ಮೂಲಕ ಅಭಿಯಾನವನ್ನೇ ಕೈಗೊಳ್ಳಲಾಗಿತ್ತು. ಈ ಅಭಿಯಾನಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಸಂಪೂರ್ಣವಾಗಿ ಬೆಂಬಲ ನೀಡಿದ್ದರು.



'ಗಾಳಿಪಟ 2' ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ (Diganth) ಹಾಗೂ ನಿರ್ದೇಶಕ ಪವನ್ ಕುಮಾರ್ (Pavan Kumar) ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು 'ಗಾಳಿಪಟ' ಚಿತ್ರದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಬದಲು 'ಲೂಸಿಯ' ನಿರ್ದೇಶಕ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ 'ಮನಸಾರೆ' ಮತ್ತು 'ಪಂಚರಂಗಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ.

Drishya 2 ಹುಟ್ಟುಹಾಕಿದ ಪ್ರಶ್ನೆಗಳು, ಹಿರಿಯ ನಟ ಅನಂಗ್‌ನಾಗ್ ಲೇಖನ!

ಇನ್ನು 'ಗಾಳಿಪಟ 2' ಚಿತ್ರದಲ್ಲಿ ಗಣೇಶ್‌ ಅವರ ಪುತ್ರ ವಿಹಾನ್‌ (Vihaan) ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ವಿಹಾನ್‌ರ ಸೀನ್‌ಗಳನ್ನು ಬೆಂಗಳೂರಿನಲ್ಲಿ ಹಾಗೂ ಕಝಕಿಸ್ಥಾನದಲ್ಲಿಯೂ ಶೂಟಿಂಗ್‌ ಮಾಡಲಾಗಿದೆ. ಅನಂತ್‌ನಾಗ್‌ ಅವರು ಕನ್ನಡ ಮೇಷ್ಟ್ರಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷ್‌ ರೈ ಪಾತಾಜೆ ಸಿನಿಮಾಟೋಗ್ರಫಿ, ಮ್ಯಾಜಿಕಲ್ ಕಂಪೋಸರ್ ಅರ್ಜುನ್‌ ಜನ್ಯ (Arjun Janya) ಸಂಗೀತ ಸಂಯೋಜನೆಯಿರುವ ಈ ಚಿತ್ರದಲ್ಲಿ ಪದ್ಮಜಾ ರಾವ್‌, ಸುಧಾ​ ಬೆ​ಳ​ವಾಡಿ, ರಂಗಾ​ಯಣ ರಘು ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ.