90 ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಮುದ್ದು ಮುಖದ ಚೆಲುವೆ ಸುಧಾರಾಣಿ 120ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 12ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು ಈಗಲೂ ಅಭಿನಯಿಸುತ್ತಿದ್ದಾರೆ. ಹೆಚ್ಚಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಇನ್‌ಸ್ಟಾಗ್ರಾಂನಲ್ಲಿ ತುಂಬಾನೇ ಸಕ್ರಿಯರಾಗಿರುತ್ತಾರೆ. ಲಾಕ್‌ಡೌನ್‌ ಪ್ರಾರಂಭದಿಂದಲೂ ದಿನವನ್ನು ಹೇಗೆ ಕಳೆಯುತ್ತಿದ್ದಾರೆ ಎಂದು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.  ಈ ನಡುವೆ ತಮ್ಮ ಮಗಳ ನೃತ್ಯ ಮತ್ತು ಸಂಗೀತ ಅಭ್ಯಾಸದ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.

LockDown ಇದ್ದರೂ ಮನೆಯಿಂದ ಹೊರ ಬಂದು ಕಾರು ಚಲಾಯಿಸಿದ ನಟಿಯ ಪುತ್ರಿ?

ಪುತ್ರಿ ವಿಡಿಯೋ:
ಮಗಳು ನೃತ್ಯ ಮತ್ತು ಸಂಗೀತ ಅಭ್ಯಾಸ ಮಾಡುತ್ತಿರುವ ವಿಡಿಯೋ, ಸಾಕು ನಾಯಿಗಳ ತುಂಟಾಟದ ವಿಡಿಯೋ ಹಾಗೂ ಮನೆಯಲ್ಲಿ ಟ್ರೈ ಮಾಡುವ ಡಿಫರೆಂಟ್ ರೆಸಿಪಿಗಳನ್ನು ಅಪ್ಲೋಡ್‌ ಮಾಡುತ್ತಿರುತ್ತಾರೆ, 'ಆನಂದ್' ನಟಿ.

 

ಪುತ್ರಿ ಶಾಸ್ತ್ರೀಯ ಸಂಗೀತ ಅಭ್ಯಾಸ  ಮಾಡುತ್ತಿರುವ ವಿಡಿಯೋವನ್ನು ಕದ್ದು ರೆಕಾರ್ಡ್ ಮಾಡಿದ್ದಾರೆ. ' ಶಬ್ದ ಮಾಡದೇ ರೆಕಾರ್ಡ್‌ ಮಾಡುತ್ತಿರುವೆ. ಆಕೆಗೆ ತಿಳಿಯದಂತೆ ಮಾಡುತ್ತಿರುವೆ. ಸಂಜೆ ಇರುವ ಸಂಗೀತ ಕ್ಲಾಸ್‌ಗೆ ಅಭ್ಯಾಸ ಮಾಡುತ್ತಿದ್ದಾಳೆ,' ಎಂದು ಬರೆದಿದ್ದಾರೆ.

ಸದಾ ಮಗಳ ಫೋಟೋ ಶೇರ್ ಮಾಡಿಕೊಳ್ಳುವ ಈ ನಟಿ, ಒಮ್ಮೆ ತಂದೆ ಎತ್ತರಕ್ಕೆ ಬೆಳೆದು ನಿಂತಿರುವ ಮಗಳ ಫೋಟೋ ಶೇರ್ ಮಾಡಿದ್ದರು. 'ನಮ್ಮ ಮನೆಯ ಪುಟ್ಟ ಮಗು, ತಂದೆ ಎತ್ತರಕ್ಕೆ ಬೆಳೆದಿದ್ದಾಳೆ. ತಂದೆಗಿಂತಲೂ ಎತ್ತರವಾಗಿದ್ದಾರೆ.  ವಿರೋಧಿಸದೇ ಒಪ್ಪಿಕೊಂಡ ಬೆಸ್ಟ್‌ ತಂದೆ,' ಎಂದು ಬರೆದಿದ್ದರು.

CBSE ಪರೀಕ್ಷೆಯಲ್ಲಿ ಸುಧಾರಾಣಿ ಮಗಳು ಟಾಪರ್! 

ಕಳೆದ ವರ್ಷ ಸುಧಾರಾಣಿ ಪುತ್ರಿ ನಿಧಿ 12ನೇ ತರಗತಿ  ಬೋರ್ಡ್‌ ಪರೀಕ್ಷೆಯಲ್ಲಿ 96.4% ಅಂಕ ಪಡೆದುಕೊಂಡಿದ್ದರು. ಈ ಪ್ರತಿಭಾನ್ವಿತ ಮಗಳ ವಿಡಿಯೋ ಶೇರ್ ಮಾಡುತ್ತಿರುತ್ತಾರೆ ಹೆಮ್ಮೆಯ ಅಮ್ಮ ಸುಧಾರಾಣಿ. ಕೆಲವು ದಿನಗಳ ಹಿಂದೆಯೂ ಮಗಳು ಕೀಬೋರ್ಡ್ ಅಭ್ಯಾಸ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದರು. ಲಾಕ್‌ಡೌನ್‌ ನಡುವೆ ದಿನದ ಅಗತ್ಯ ಸಾಮಾಗ್ರಿ ಖರೀದಿಸಲು ಮಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಈ ಸಮಯದಲ್ಲಿ ಮಗಳೇ ಕಾರ್ ಡ್ರೈವ್ ಮಾಡುತ್ತಿದ್ದ ವಿಡಿಯೋ ಶೇರ್ ಮಾಡಿ, ಹೆಮ್ಮೆ ವ್ಯಕ್ತಪಡಿಸಿದ್ದರು.

 

ಒಟ್ಟಿನಲ್ಲಿ ಸುಧಾರಾಣಿ ತಮ್ಮ ಅಭಿಮಾನಿಗಳಿಗೆ ಏನಾದರೂ ಅಪ್‌ಡೇಟ್‌ ಕೊಡುತ್ತಲೇ ಇರುತ್ತಾರೆ, ತಮ್ಮ ವೈಯಕ್ತಿಕ ಜೀವನದ ಅದ್ಭುತ ಘಟನೆಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ನೆಟ್ಟಿಗರ ಮನಸ್ಸಿಗೆ ಹತ್ತಿರವಾಗುತ್ತಿದ್ದಾರೆ.