ನಟಿ ಸುಧಾರಾಣಿ ಮಗಳು ನಿಧಿ ಈ ಬಾರಿ CBSC 12ನೇ ತರಗತಿಯ ಪರೀಕ್ಷೆ ಬರೆದಿದ್ದು ಅದರಲ್ಲಿ 96.4% ಅಂಕ ಪಡೆದಿರುವುದಾಗಿ ಸ್ವತಃ ಸುಧಾರಾಣಿ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದು ಫೋಟೋವೊಂದಿಗೆ ಸಿಹಿ ಸುದ್ಧಿಯನ್ನು ಹಂಚಿಕೊಂಡಿದ್ದಾರೆ.

ಸ್ಯಾಂಟೋರಿನಿಯಲ್ಲಿ ಸುಧಾರಾಣಿ ಹಾಲಿಡೇ ಮಜಾ; ಇಲ್ಲಿವೆ ಫೋಟೋಗಳು!

‘ನಮ್ಮ ಜೀವನದ ಸಂತೋಷದ ಕ್ಷಣ ಇದಾಗಿದ್ದು ನಮ್ಮ ಸುಬ್ಬಿಕುಟ್ಟಿ 12ನೇ ಬೋರ್ಡ್ ಕಾಮರ್ಸ್ ಪರೀಕ್ಷೆಯಲ್ಲಿ 96.4% ಅಂಕ ಪಡೆದುಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಶಾಲೆಗೆ 2 ನೇ ಟಾಪರ್ ಆಗಿದ್ದಾಳೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಹೀಗೆ ಇರಲಿ. ಥ್ಯಾಂಕ್ಸ್’ ಎಂದು ಬರೆದುಕೊಂಡಿದ್ದಾರೆ.