ಮಹಾಮಾರಿ ಕೊರೋನಾ ವೈರಸ್‌‌ ತನ್ನ ಅಟ್ಟಹಾಸ ಮುಂದುವರಿಸುತ್ತಲೇ ಇದೆ. ಭಾರತ ಸರ್ಕಾರ ಏಪ್ರಿಲ್‌ 14ವರೆಗೂ ಲಾಕ್‌ಡೌನ್‌ ಘೋಷಣೆ ಮಾಡಿದೆ.  ಜನ ಸಾಮಾನ್ಯರು ಅಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರ ಅವಕಾಶ ನೀಡಿದೆ. ಅನಿವಾರ್ಯವಾಗಿ ಹೊರ ಬರುವ ಜನರು ಸುರಕ್ಷಿತವಾಗಿ ಮಾಸ್ಕ್‌ ಹಾಗೂ ಗ್ಲೌಸ್‌ ಧರಿಸಿಯೇ ಹೊ ಬರಬೇಕು ಎಂದು ಕಡ್ಡಾಯ ನಿಯಮಗಳನ್ನು ಹಾಕಿದೆ.

ಸುಧಾರಾಣಿ ಹೆಸರಿಗೆ ತಕ್ಕಂತೆ ರಾಣಿಯಂತೆಯೇ ಇದ್ದಾರೆ ನೋಡಿ! ..

ಈ ಸಮಯದಲ್ಲಿ ಕನ್ನಡ ಚಿತ್ರರಂಗ ಖ್ಯಾತ ನಟಿ ಸುಧಾರಾಣಿ ತಮ್ಮ ಪುತ್ರಿ ಜೊತೆ ಅಗತ್ಯ ವಸ್ತುಗಳನ್ನು ಕೊಳ್ಳಲು ಹೊರ ಬಂದಿದ್ದಾರೆ. ಈ ವೇಳೆ ತನ್ನ ಪುತ್ರಿ ಕಾರು ಚಲಾಯಿಸುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ನಿಮ್ಮೆಲ್ಲಾ ಕನ್ಸರ್ನ್‌ಗೆ ತುಂಬಾ ಥ್ಯಾಂಕ್ಸ್. ಲಾಕ್‌ಡೌನ್‌ ಘೋಷಣೆ ಮಾಡಿದ ದಿನದಂದಲೂ ನಾವು ಹೊರಗಡೆ ಕಾಲಿಟ್ಟಿಲ್ಲ. ತರಕಾರಿ ಹಾಗೂ ದಿನಸಿ ಸಾಮಾನು ಖಾಲಿಯಾಗಿರುವ ಕಾರಣಕ್ಕೆ ಹೊರಗೆ ಬರುವ ಅನಿವಾರ್ಯತೆ ಬಂದಿದೆ.  ನನ್ನ ಮಗಳಿಗೆ License ಇದೆ. ಹಾಗಂತ ಈ ಫೋಟೋ ನೋಡಿ ನೀವು ಹೊರ ಹೋಗಬೇಕು ಎಂದೇನೂ ಇಲ್ಲ, ' ಎಂದು ಬರೆದುಕೊಂಡಿದ್ದಾರೆ. 

 

ಲಾಕ್‌ಡೌನ್‌ನಿಂದ ಮನೆಯಲ್ಲೇ ತಮ್ಮ ಮಗಳು, ಪತಿ ಹಾಗೂ ಮುದ್ದಿನ ನಾಯಿಗಳ ಜೊತೆ ಕಾಲ ಕಳೆಯುತ್ತಿರುವ ಸುಧಾರಾಣೆ.  ಕೆಲವು ದಿನಗಳ ಹಿಂದೆ ಲ್ಯಾಪ್‌ಟಾಪ್‌ ಮುಂದೆ ಕುಳಿತು ಯಾವ ವಿಭಿನ್ನ ರೆಸಿಪಿ ಮಾಡಬೇಕೆಂದು ಹುಡುಕುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು.  ಅಷ್ಟೇ ಅಲ್ಲದೆ ತಮ್ಮ ಆಲೋಚನೆಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

CBSE ಪರೀಕ್ಷೆಯಲ್ಲಿ ಸುಧಾರಾಣಿ ಮಗಳು ಟಾಪರ್!