Asianet Suvarna News Asianet Suvarna News

ನಟಿ ಶ್ರೀಲೀಲಾಗೆ 3 ದೊಡ್ಡ ಪ್ರಾಜೆಕ್ಟ್ ಆಫರ್ ನೀಡಿದ ಅಲ್ಲು ಅರ್ಜುನ್ ಬ್ಯಾನರ್ಸ್?

ಒಂದು ತೆಲುಗು ಸಿನಿಮಾ ನಂತರ ಒಂದು ದೊಡ್ಡ controversy, ಮೂರು ಸಿನಿಮಾಗಳಿಗೆ ಸಹಿ ಮಾಡಿದ ಕಿಸ್ ಸುಂದರಿ... 

Kannada Sreeleela signs new 3 film projects with Allu Arjun geetha arts banner vcs
Author
Bangalore, First Published Oct 28, 2021, 1:12 PM IST
  • Facebook
  • Twitter
  • Whatsapp

'ಕಿಸ್' (Kiss) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ (Sandalwood) ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ (SreeLeela) ಇದೀಗ  ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಶ್ರೀಮುರಳಿ (Sri Murali)  ಜೊತೆ ಭರಾಟೆ ನಂತರ ಧನ್ವೀರ್‌ಗೆ (Dhanveer) ಜೋಡಿಯಾಗಿ By two love ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಶ್ರೀಲೀಲಾ ಪೆಳ್ಳಿ ಸಂದಡಿ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ಟಾಲಿವುಡ್‌ನ ರೊಮ್ಯಾಂಟಿಕ್ ಲವ್‌ಸ್ಟೋರಿಯಲ್ಲಿ ಶ್ರೀಲೀಲಾ..!

ಹೌದು! ಪೆಳ್ಳಿ ಸಂದಡಿ (Pelli Sandadi) ಚಿತ್ರ ಇದೇ ತಿಂಗಳು ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಸಿನಿಮಾ ನೀಡಿದ್ದ ಹೈಪ್‌ಗೆ ತಕ್ಕಂತೆ ಹಿಟ್ ಆಗದಿದ್ದರೂ, ಈ ಚಿತ್ರದ ಮೂಲಕ ತೆಲುಗು (Tollywood) ಮತ್ತು ತಮಿಳು (Kollywood) ಚಿತ್ರರಂಗದಿಂದ ದೊಡ್ಡ ದೊಡ್ಡ ಆಫರ್‌ಗಳನ್ನು ಪಡೆದುಕೊಂಡಿದ್ದಾರೆ. ಅಲ್ಲು ಅರ್ಜುನ್ (Allu Arjun) ಮತ್ತು ಅವರ ತಂದೆ ನಡೆಸುವ ಗೀತಾ ಆರ್ಟ್ಸ್ (Geeta Arts) ಬ್ಯಾನರ್‌ನವರು ಶ್ರೀಲೀಲಾ ಮುಂದೆ ಮೂರು ಬಿಗ್ ಬಜೆಟ್ ಸಿನಿಮಾಗಳ ಪ್ರಾಜೆಕ್ಟ್‌ ಇಟ್ಟಿದ್ದಾರೆ. ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಗೀತಾ ಆರ್ಟ್ಸ್ ಜೊತೆ ಲೀಲಾ ಅವರು ಮೂರು ಸಿನಿಮಾಗಳಿಗೆ ಒಪ್ಪಂದ ಮಾಡಿಕೊಂಡಿದ್ದಾರಂತೆ. 

Kannada Sreeleela signs new 3 film projects with Allu Arjun geetha arts banner vcs

ಶ್ರೀಲೀಲಾ ಕನ್ನಡ ಚಿತ್ರರಂಗದಲ್ಲಿದ್ದಾಗ ಯಾವುದೇ ವಿವಾದಗಳನ್ನು ಮಾಡಿಕೊಳ್ಳದೆ, ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ಆದರೆ ತೆಲುಗು ಸಿನಿಮಾ ಬಿಡುಗಡೆಗೂ ಒಂದು ದಿನ ಮುನ್ನವೇ ವೈಯಕ್ತಿಕ ಬದುಕಿನ (Personal life) ವಿಚಾರವೊಂದು ಬಹಿರಂಗವಾಗಿತ್ತು. ಶ್ರೀಲೀಲಾ ಅವರ ತಂದೆ ನಾವು ಲೀಲಾ ಅವರ ತಂದೆಯಲ್ಲ, ಅವರು ವಿಚ್ಛೇದನದ (Divorce) ಬಳಿಕ ಶ್ರೀಲೀಲಾ ತಾಯಿಗೆ ಹುಟ್ಟಿರೋದು. ನನ್ನ ಆಸ್ತಿಯನ್ನು ಕಬಳಿಸಲು ಈ ರೀತಿ ಮಾಡುತ್ತಿದ್ದಾರೆ, ಎಂದು ಹೈದರಾಬಾದ್‌ನಲ್ಲಿ (Hyderabad) ಪ್ರೆಸ್‌ಮೀಟ್ ನಡೆಸಿ ಆರೋಪ ಮಾಡಿದ್ದರು. ಈ ವಿಚಾರವನ್ನು ಪೊಲೀಸ್ ಮತ್ತು ಕೋರ್ಟ್ ಸಹಾಯದಿಂದ ಬಗೆಹರಸಿಕೊಳ್ಳುತ್ತೀವಿ ಎಂದು ಅವರ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ತಾಯಿ ಜೊತೆ ಭರತನಾಟ್ಯವಾಡುತ್ತಿರುವ ನಟಿ ಶ್ರೀಲೀಲಾ ಪೋಟೋ ವೈರಲ್!

ನಟಿ ರಶ್ಮಿಕಾ ಮಂದಣ್ಣ (Rashmika Madanna), ನಭಾ ನಟೇಶ್ (Nabha Natesh) ಸೇರಿದಂತೆ ಹಲವು ಕನ್ನಡ ಕಿರುತೆರೆ ನಟಿಯರು ತೆಲುಗು ಚಿತ್ರರಂಗಕ್ಕೆ ಹಾರಿದ್ದಾರೆ. ಆದರೆ ಶ್ರೀಲೀಲಾ ಮಾದಿದ್ದು ಎರಡೇ ಸಿನಿಮಾ.  ಮೂರನೇ ಸಿನಿಮಾ ಇನ್ನೂ ಬಿಡುಗಡೆ ಆಗಬೇಕಿದೆ. ಅಷ್ಟರಲ್ಲಿ ಮೂರು ತೆಲುಗು ಸಿನಿಮಾಗಳಿಗೆ ಸಹಿ ಮಾಡಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದೇ ಸಮಯವನ್ನು ಕೆಲವು ಕಿಡಿಗೆಡಿಗಳು ಉಪಯೋಗಿಸಿಕೊಂಡು, ಶ್ರೀಲೀಲಾ ಅವರ ವೈಯಕ್ತಿಕ ವಿಚಾರವನ್ನು ಬೀದಿಗೆಳೆದಿದ್ದಾರೆ. 

ಶ್ರೀಲೀಲಾ 10ನೇ ತರಗತಿ ವ್ಯಾಸಂಗ ಮಾಡುವಾಗ ಕಿಸ್ ಸಿನಿಮಾ ಪ್ರಾಜೆಕ್ಟ್‌ ಶುರು ಮಾಡಿದ್ದರು. ಇದೀಗ ಮೆಡಿಕಲ್ ವಿದ್ಯಾರ್ಥಿನಿಯಾಗಿ (Medical Student) ಸಿನಿಮಾ, ವಿದ್ಯಾಭ್ಯಾಸ ಮತ್ತು ವೈಯಕ್ತಿಕ ಜೀವನ ಎರಡನ್ನೂ ಸಮಾನವಾಗಿ ಮ್ಯಾನೇಜ್ ಮಾಡುತ್ತಿದ್ದಾರೆ. ಶ್ರೀಲೀಲಾ ಅವರ ತಾಯಿ gynocologist, ರಾಧಿಕಾ ಪಂಡಿತ್ (Radhika Pandit) ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ಹೆರಿಗೆ ಮಾಡಿಸಿದ್ದಾರೆ. ಲೀಲಾ ಅವರಿಗೆ ಇಬ್ಬರು ಸಹೋದರರಿದ್ದಾರೆ. ಅವರಿಬ್ಬರೂ ಕೂಡ ವೈದ್ಯರು.

Follow Us:
Download App:
  • android
  • ios