ತಾಯಿ ಜೊತೆ ಭರತನಾಟ್ಯವಾಡುತ್ತಿರುವ ನಟಿ ಶ್ರೀಲೀಲಾ ಪೋಟೋ ವೈರಲ್!
ನಟಿ ಶ್ರೀಲೀಲಾ ಬಾಲ್ಯದ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ತಾಯಿ ಸ್ವರ್ಣಲತಾ ಜೊತೆ ಭರತನಾಟ್ಯ ಮಾಡುತ್ತಿರುವುದನ್ನು ನೋಡಿ ನೆಟ್ಟಿಗರಲ್ಲಿ ಹಲವು ಪ್ರಶ್ನೆಗಳು ಮೂಡಿವೆ...
ನೀಲಿ ಬಣ್ಣದ ಭರತನಾಟ್ಯ ವಸ್ತ್ರ ಧರಿಸಿ ವಿಭಿನ್ನ ಭಂಗಿಗಳಲ್ಲಿ ಫೋಸ್ ಕೊಟ್ಟ ಶ್ರೀಲೀಲಾ ಹಾಗೂ ಸ್ವರ್ಣಲತಾ.
ಬಾಲ್ಯದಿಂದಲೂ ಭರ್ತನಾಟ್ಯ ಕಲಿಯುತ್ತಿರುವ ಶ್ರೀಲೀಲಾ.
ಸ್ವರ್ಣಲತಾ ವೃತ್ತಿಯಲ್ಲಿ ಡಾಕ್ಟರ್, ಅವರಂತೆ ಪುತ್ರಿ ಲೀಲಾ ಕೂಡ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ.
'ಮೇಡಂ ನೀವು ಡ್ಯಾನ್ಸರ್ ಆಗಿರುವುದಕ್ಕೆನೇ ಶ್ರೀಲೀಲಾಗೂ ಕಲೆ ಬಗ್ಗೆ ಆಸಕ್ತಿ ಇರುವುದು,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕಿಸ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶ್ರೀಲೀಲಾ.
ಸಿನಿಮಾ ವೃತ್ತಿ ಆರಂಭದಿಂದಲೂ ಅನೇಕ ಖಾಸಗಿ ಕಾರ್ಯಕ್ರಮಗಳಲ್ಲಿ ಲೀಲಾಳಿಗೆ ಜೊತೆಯಾಗಿ ತಾಯಿ ಸ್ವರ್ಣ ಭಾಗಿಯಾಗುತ್ತಾರೆ.
ಧನ್ವೀರ್ ಜೊತೆ ಬೈ ಟು ಲವ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಡಿಮ್ಯಾಂಡ್ ಹೆಚ್ಚಾಗುತ್ತಿದ್ದಂತೆ ಲೀಲಾ ತೆಲುಗು ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ.