ಕನ್ನಡ ಚಿತ್ರರಂಗದ ಫಾರ್‌ಎವರ್‌ ಎಂಗ್ ಮ್ಯಾನ್‌, ಹ್ಯಾಟ್ರಿಕ್ ಹೀರೋ ಶಿವರಾಜ್‌ಕಕುಮಾರ್‌ 58ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶಿವಣ್ಣ ಜನ್ಮ ದಿನದ ಪ್ರಯುಕ್ತ ನಿರ್ದೇಶಕ ಎ.ಹರ್ಷ 'ಭಜರಂಗಿ-2' ಚಿತ್ರ ಪೋಸ್ಟರ್‌ ಮತ್ತು ಟೀಸರ್ ಬಿಡುಗಡೆ ಮಾಡಿದ್ದಾರೆ. ಈಗಾಗಲೇ  ಸಾಮಾಜಿಕ ಜಾಲತಾಣದಲ್ಲಿ #HappyBirthdayShivanna ಟ್ರೆಂಡ್‌ ಆಗುತ್ತಿದ್ದು #Bhajarangi2 ಕೂಡ ಟ್ರೆಂಡಿಂಗ್ ಲಿಸ್ಟ್‌ಗೆ ಸೇರಿಕೊಂಡಿದೆ.

ಇಂದು ಬೆಳಗ್ಗೆ 11.30ಗೆ A2 ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾದ ಟೀಸರ್‌ ಈಗಾಗಲೇ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಟೀಸರ್‌ನಲ್ಲಿ ಹಿರಿಯ ನಟಿ ಶ್ರುತಿ ಮತ್ತು ಭಾವನ ಪಾತ್ರ ವಿಭಿನ್ನವಾಗಿದ್ದು ಎಲ್ಲರ ಗಮನ ಸೆಳೆದಿದೆ. 2013ರಲ್ಲಿ ರಿಲೀಸ್‌ ಆದ ಭಜರಂಗಿ ಸಿನಿಮಾ ಬ್ಲಾಕ್‌ ಬಸ್ಟರ್ ಹಿಟ್ ಆಗಿದ್ದು ಭಾಗ ಎರಡು ಕೂಡ ಅಷ್ಟೇ ಕುತೂಹಲ ಹುಟ್ಟಿಸಿದೆ. ಭಜರಂಗಿ- 2 ಚಿತ್ರದ ನಂತರ ಡಾಲಿ ಧನಂಜಯ್ ಜೊತೆ 'ಆರ್‌ಡಿಎಕ್ಸ್‌' ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

 

 
 
 
 
 
 
 
 
 
 
 
 
 

Tomorrow. 11:30 am.

A post shared by DrShivaRajkumar (@nimmashivarajkumar) on Jul 11, 2020 at 6:54am PDT

ಸೆಂಚುರಿ ಸ್ಟಾರ್ ಬರ್ತಡೇ ಇನ್ನಷ್ಟು ಸ್ಪೆಷಲ್ ಮಾಡಬೇಕೆಂದು ಅಭಿಮಾನಿಗಳು ಕಾಮನ್ ಡಿಪಿ ಕ್ರಿಯೇಟ್‌ ಮಾಡಿದ್ದಾರೆ. ಎಲ್ಲರೂ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಫೋಟೋ ಬದಲಾಯಿಸಿಕೊಂಡಿದ್ದಾರೆ. ವಿಶೇಷವಂದ್ರೆ ಈ ಫೋಸ್ಟರ್‌ ಬಿಡುಗಡೆ ಮಾಡಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌. 

ಶಿವರಾಜ್‌ಕುಮಾರ್ ಕಂಚಿನ ಪ್ರತಿಮೆಯಂತ ಪೋಸ್ಟರ್‌ ಬಿಡುಗಡೆ ಮಾಡಿದ ಕಿಚ್ಚ!

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಶಿವರಾಜ್‌ಕುಮಾರ್‌ ತಮ್ಮ ಅಭಿಮಾನಿಗಳಲ್ಲಿ ಮನೆಯ ಬಳಿ ಬರದಂತೆ ಮನೆಯಲ್ಲಿ ಇದ್ದು ಹರಸಿ ಹಾರೈಸಿ ಮನವಿ ಮಾಡಿಕೊಂಡಿದ್ದರು.ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಮುಖ್ಯ ತನ್ನಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು ಎಂದು ಶಿವಣ್ಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ.