ಹಿರಿಯ ನಟಿ ಪಂಕಜಾ ತಮ್ಮ ಸಾಧನೆಗೆ ಗಂಡನೇ ಕಾರಣ ಎಂದು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ. 

90ರ ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ಹಿರಿಯ ನಟಿ ಪಂಕಜಾ ತಮ್ಮ ಸಾಧನೆಯ ಕ್ರೆಡಿಟ್‌ನ ಪತಿಗೆ ನೀಡಿದ್ದಾರೆ. ಗಂಡನ ಸಹಾಯವಿಲ್ಲ ಬಣ್ಣದ ಪ್ರಪಂಚದಲ್ಲಿದ್ದು ನೂರಾರು ಪ್ರಶಸ್ತಿಗಳು ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. 

'ಪ್ರತಿಯೊಬ್ಬ ಹೆಣ್ಣಿಗೂ ಕೈ ಮುಗಿದು ಕೇಳಿಕೊಳ್ಳುವೆ. ಗಂಡಸರಿಗೆ ಸೋತು ಬದುಕಿ ಜೀವನ ನಡೆಸಬೇಕು ಯಾಕಂದ್ರೆ ಒಂದು ಹೆಣ್ಣು ಸಮಾಜದಲ್ಲಿ ಏನೂ ಸಾಧನೆ ಮಾಡುವುದಿಲ್ಲ. ಗಂಡ ಇದ್ರೆನೇ ಪ್ರಪಂಚದಲ್ಲಿ ಸಾಧನೆ ಮಾಡಲು ಸಾಧ್ಯ. ಒಂದು ಕೈತಯಲ್ಲಿ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ ಎರಡು ಕೈ ಬೇಕೇ ಬೇಕು. ತುಂಬಾ ಒಳ್ಳೆಯ ವ್ಯಕ್ತಿತ್ವದ ಗಂಡ ಸಿಕ್ಕಿದ್ದರು. ನನ್ನ ತಾಯಿ ದೇವರಿಗೆ ಒಂದು ಹೂವು ಜಾಸ್ತಿ ಹಾಕಿದ್ದರು ಅದಿಕ್ಕೆ ಒಳ್ಳೆಯ ವ್ಯಕ್ತಿಯನ್ನು ಅಳಿಯನಾಗಿ ಪಡೆದರು. ಕುಡಿಯೋನು, ಹೊಡೆಯೋನು ಅಥವಾ ಅನುಮಾನ ಪಡುವ ವ್ಯಕ್ತಿ ಆಗಿದ್ದರೆ ಎಲ್ಲೂ ಹೋಗಬೇಡ ಬಾಯಿ ಮುಚ್ಚಿಕೊಂಡು ಮನೆಯಲ್ಲಿ ಇರು ಎನ್ನುವ ಗಂಡ ಸಿಕ್ಕಿದ್ದರೆ ನಾನು ಸಾಧನೆ ಮಾಡಲು ಆಗುತ್ತಿರಲಿಲ್ಲ' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಪಂಕಜ ಮಾತನಾಡಿದ್ದಾರೆ.

ಯಾವ್ದೋ ದೊಡ್ಡ ಕಾಯಿಲೆ ಬಂದು ಕರೀನಾಗೆ ಮಗು ಆಗ್ಬಾರ್ದಿತ್ತು; ಕಿರಾತಕನ ಕಾಮೆಂಟ್‌ಗೆ ಶರ್ಮಿಳಾ ಬೇಸರ

'ತುಂಬಾ ವರ್ಷಗಳ ಹಿಂದೆ ನನಗೆ ರಾಜ್ಯೋತ್ಸವ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಸಮಾಜ ಸೇವಾ ರತ್ನ ಮತ್ತು ಡಾಕ್ಟರೇಟ್ ಸೇರಿ ಹಲವು ಪ್ರಶಸ್ತಿಗಳು ಸಿಕ್ಕಿದೆ. ಎಷ್ಟೇ ಅವಾರ್ಡ್‌ ಬಂದ್ರೂ ನಾನು ನನ್ನದು ಎನ್ನುವ ರೀತಿ ಬದುಕಬೇಡ ಎಂದು ನನ್ನ ಗುರುಗಳು ಕಿವಿ ಮಾತು ಹೇಳುತ್ತಿದ್ದರು. ಸಿನಿಮಾ ರಂಗ ಒಂದು ಸಮುದ್ರ ರೀತಿ ಒಂದು ಬೊಗಸೆ ನೀರು ಎತ್ತಿಕೊಂಡು ಕುಡಿದರೂ ಏನೂ ಕಡಿಮೆ ಆಗುವುದಿಲ್ಲ ಅಂತ ಬುದ್ಧಿ ಮಾತುಗ ಹೇಳಿದಕ್ಕೆ ನನ್ನ ಯಜಮಾನರಿಗೆ ತಗ್ಗಿ ಬಗ್ಗಿ ಬದುಕಿ ಜೀವನ ನಡೆಸಿರುವೆ. ನನ್ನ ಗಂಡನಿಗೋಸ್ಕರ ನನ್ನ ಜೀವನ ತ್ಯಾಗ ಮಾಡಿದೆ. ಕೈ ಕಾಲುಗಳ ಸ್ವಾಧೀನ ಕಳೆದುಕೊಂಡು ಮಲಗಿದ ಜಾಗದಲ್ಲಿ ನನ್ನ ಗಂಡ ಒಂದು ಎರಡು ಮಾಡಿಕೊಳ್ಳುತ್ತಿದ್ದರು. ಎರಡು ವರ್ಷಗಳ ಕಾಲ ಕೈಯಲ್ಲಿ ತೆಗೆದು ಕ್ಲೀನ್ ಮಾಡಿ ನನ್ನ ಆರೋಗ್ಯ ಕೆಟ್ಟಿತ್ತು. ಆಗ ನೆನಪಾಯ್ತು ನಗುವಾಗ ಎಲ್ಲರೂ ನೆಂಟರು ಅಳುವಾಗ ಯಾರೂ ಇಲ್ಲ. ನನ್ನ ಕೈಯಲ್ಲಿ ಮಾಡಲಾಗದೆ ಇಬ್ಬರು ಹುಡುಗರನ್ನು ನೇಮಕ ಮಾಡಿ ಸುಮಾರು 85 ಲಕ್ಷ ಖರ್ಚು ಮಾಡಿದೆ. ಒಂದು ಆಸ್ಪತ್ರೆಗೂ ಬಿಟ್ಟಿಲ್ಲ ಎಲ್ಲಾ ಕಡೆ ಚೆಕ್ ಮಾಡಿಸಿರುವೆ. ಯಾವ ಹೆಣ್ಣು ತನ್ನ ಗಂಡನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅವರಿಗೆ ದೇವರು ಖಂಡಿತಾ ಆಶೀರ್ವಾದ ಮಾಡುತ್ತಾರೆ. ಮನೆಯಲ್ಲಿ ಗಂಡನನ್ನು ನೋಡಿಕೊಂಡಿಲ್ಲ ಅಂದ್ಮೇಲೆ ನಾವಿದ್ದೂ ಸಾರ್ಥಕವಿಲ್ಲ' ಎಂದು ಹೇಳಿದ್ದಾರೆ. 

ಎಷ್ಟು ಸುತ್ತಿನ ಕಾಲುಂಗುರ ಧರಿಸಬೇಕು?; ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಕಾಲುಂಗುರದ ಮಹತ್ವ

'ಹಣ ಇಲ್ಲದೆ ಕಷ್ಟ ಪಟ್ಟು ಜೀವನ ಮಾಡಿದೆ. ಜೀವನದಲ್ಲಿ ಮರೆಯಲಾಗದ ವ್ಯಕ್ತಿ ಅಂದ್ರೆ ಶಾಮನೂರು ಶಿವಶಂಕರಪ್ಪ ಅಪ್ಪಾಜಿ ಅವರು 3 ಲಕ್ಷ, ಮುರುಗೇಶ್ ನಿರಾಣಿ ಅವರು ನಮ್ಮ ಮನೆ ಮಗಳು ನೀನು ಕಲಾವಿದೆ ನಿನ್ನ ಗಂಡನಿಗೆ ಕಷ್ಟ ಪಡುತ್ತಿರುವೆ ಎಂದು ಹಣ ಸಹಾಯ ಮಾಡಿದರು. ನರೇಂದ್ರ ಬಾಬು ಅಣ್ಣ ಸಹಾಯ ಮಾಡಿದರು. ಮಾಸ್ಟರ್ ಆನಂದ್ ಅವರು ಮನೆಗೆ ಬಂದು ಅವಕಾಶ ಕೊಟ್ಟರು ಅಷ್ಟೇ ಅಲ್ಲ ಹಣ ಕೊಟ್ಟು ಕಿಟ್‌ ಕೂಡ ಕೊಟ್ಟರು. ಆನಂದ್ ಚಿಕ್ಕ ಹುಡುಗನಾದರೂ ದೊಡ್ಡ ಮನಸ್ಸಿನ ವ್ಯಕ್ತಿ' ಎಂದು ಸಹಕಲಾವಿದರ ಸಹಾಯ ನೆನಪಿಸಿಕೊಂಡಿದ್ದಾರೆ. 

'ಹಳೆ ಸಿನಿಮಾಗಳಲ್ಲಿ ನನಗೆ ಪ್ರತಿಯೊಂದು ಸಿನಿಮಾಗಳಲ್ಲಿ ಒಳ್ಳೆ ಒಳ್ಳೆ ಪಾತ್ರಗಳಲ್ಲಿ ನಟಿಸಿರುವೆ. ಜಗ್ಗೇಶ್ ಅವರು 7-8 ಸಿನಿಮಾಗಳಲ್ಲಿ ನಾನು ಅಭಿನಯಿಸಿರುವೆ. ಶಿವಣ್ಣ ಚಿತ್ರದಲ್ಲಿ ನರ್ಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದಕ್ಕೆ ಕರೆದು ಪಾತ್ರ ಕೊಡುತ್ತಿದ್ದರು. ರಾಘಣ್ಣ ಅವರ ಸಿನಿಮಾದಲ್ಲಿ ಅಭಿನಯಿಸಿರುವೆ. ಎಷ್ಟೇ ಸಿನಿಮಾ ಮಾಡಿದ್ದರೂ ರಂಗಭೂಮಿ ನನಗೆ ಖುಷಿ ಕೊಡುತ್ತಿತ್ತು' ಎಂದಿದ್ದಾರೆ.