ಸ್ಯಾಂಡಲ್‌ವುಡ್‌ 'ಕಿರಿಕ್' ಬೆಡಗಿ, ಬೋಲ್ಡ್‌ ನಟಿ ಸಂಯುಕ್ತಾ ಹೆಗ್ಡೆ ಬಗ್ಗೆ ನೆಟ್ಟಿಗರಲ್ಲಿ ಎಂದಿಗೂ ಕುತೂಹಲ ಹೆಚ್ಚು. ಇಷ್ಟೊಂದು ಫಿಟ್ ಆ್ಯಂಡ್ ಬ್ಯೂಟಿಫುಲ್ ಆಗಿರಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

ಸಂಯುಕ್ತಾ ಡ್ಯಾನ್ಸ್: ಆ ಥರದ್ದೇ ಡ್ಯಾನ್ಸ್ ಯಾಕಮ್ಮಾ ಅಂದ್ರು ನೆಟ್ಟಿಗರು 

ಇನ್‌ಸ್ಟಾಗ್ರಾಂ ಸ್ಟೋರಿ:

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರುವ ವಿಚಾರಗಳನ್ನು ಫಾಲೋವರ್ಸ್‌ಗಳು ಕೇವಲ 24 ಗಂಟೆ ಒಳಗೆ ನೋಡಬೇಕು. ಈ ಕಾರಣ ಅವರ ಸಲಹೆಯನ್ನು ಇಲ್ಲಿಯೇ ಶೇರ್ ಮಾಡಲಾಗಿದೆ.

'ಎಲ್ಲರೂ ನಮ್ಮ ಸ್ಕಿನ್ ಕೇರ್ ಬಗ್ಗೆ ಕೇಳುತ್ತಲೇ ಇದ್ದೀರಾ. ನಾನು ಪಾಲಿಸುವ 5 ಸ್ಟೆಪ್ಸ್ ಇಲ್ಲಿವೆ. ಮೊದಲನೇ ವಿಚಾರ ನೀವು ಹೆಚ್ಚಾಗಿ ನೀರು ಕುಡಿಯ ಬೇಕು. ದಿನಕ್ಕೆ ಎರಡು ಬಾರಿ ಆದರೂ ಬಿಸಿ ನೀರು ಸೇವಿಸಬೇಕು.  ಎರಡನೇ ವಿಚಾರ ತುಂಬಾ ಚೆನ್ನಾಗಿ ಟೈಂ ಟು ಟೈಂ ಪೌಷ್ಟಿಕ ಆಹಾರ ಸೇವಿಸಬೇಕು. ನಾನು ತುಂಬಾ ತಿನ್ನುತ್ತೇನೆ. ಆದರೆ ಅದು ನಿಮಗೆ ಕಾಣಿಸಿಕೊಳ್ಳುವುದಿಲ್ಲ.  ನಾನು ಹೆಚ್ಚಾಗಿ ಸಸ್ಯಹಾರಿ ಆಹಾರ ತಿನ್ನುವುದು. ಕೆಲವೊಮ್ಮೆ ಚೀಸ್‌ ಜಾಸ್ತಿ ಸೇವಿಸುತ್ತೇನೆ. ಮೂರನೇ ವಿಚಾರ ನಾನು ಸಕ್ಕರೆ ಅಂಶ ಇರುವ ಪದಾರ್ಥಗಳನ್ನು ಸೇವಿಸುವುದಿಲ್ಲ. ಹಾಗಂತ ಡಯಟ್ ಮಾಡುತ್ತೇನೆ ಎಂದಲ್ಲ, ಆದರೆ ನನಗೆ ಹೈಸ್ಕೂಲ್‌ನಿಂದಲೂ ಚಾಕೊಲೇಟ್‌ ಹಾಗೂ ಸ್ವೀಟ್‌ ಅಂದ್ರೆ ಅಷ್ಟಕ್ಕಷ್ಟೆ.  ಅದಕ್ಕೂ ಈಗಲೂ ತಿನ್ನಬೇಕು ಎನಿಸುವುದಿಲ್ಲ. ನಾಲ್ಕನೇ ವಿಚಾರ ನಾನು ತುಂಬಾ ಎಕ್ಸಸೈಸ್ ಮಾಡುತ್ತೇನೆ. ತುಂಬಾ ಬೆವರುತ್ತೇನೆ. ಇದರಿಂದ ನನ್ನ ದೇಹದಲ್ಲಿರುವ ವಿಷಕಾರಿ ಅಂಶ ಹೊರ ಬರುತ್ತದೆ. ಸ್ಕಿನ್ ಮತ್ತು ಆರೋಗ್ಯ ಚೆನ್ನಾಗಿರುತ್ತದೆ. ಐದನೇ ವಿಚಾರ ನಾನು ಯಾವುದೇ ಕ್ರೀಮ್‌ಗಳನ್ನು ಬಳಸುವುದಿಲ್ಲ. ನನ್ನ ಚರ್ಮ ಹೇಗಿದೆ ಹಾಗೆಯೇ ಬಿಡುತ್ತೇನೆ. ಅಬ್ಬಬ್ಬಾ ಅಂದ್ರೆ ಆಲೋವೇರಾ ಜೆಲ್ ಬಳಸಬಹುದು ಅಷ್ಟೆ,' ಎಂದು ಹೇಳಿದ್ದಾರೆ.

ಬೈಕ್‌ ರೈಡ್‌ಗೂ ಸೈ, ಮನೆ ಮುಂದೆ ರಂಗೋಲಿ ಇಡಲೂ ಜೈ: ಸಂಯುಕ್ತಾ ಹೆಗ್ಡೆ 

ಹಣ ಎಲ್ಲಿ ಖರ್ಚು ಮಾಡಬೇಕು?
ಚರ್ಮದ ಕಾಂತಿ ಹೆಚ್ಚಿಸಲು ಹಲವರು ಹೆಚ್ಚಿನ ಹಣವನ್ನು ಸೌಂದರ್ಯ ವರ್ಧಕಗಳ ಮೇಲೆ ಹಾಕುತ್ತಾರೆ. ಇದರ ಬಗ್ಗೆ ಸಂಯುಕ್ತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ನೀವೆಲ್ಲರೂ ಹಣವನ್ನು ನಿಮ್ಮ ದೇಹಕ್ಕೆ ಖರ್ಚು ಮಾಡಿ. ಬೇರೆಯವರ ಮಾತುಗಳನ್ನು ಕೇಳಿ ಬ್ಯೂಟಿ ಪ್ರಾಡೆಕ್ಟ್ಸ್‌ಗೆ ಹಾಕಬೇಡಿ. ನಾವು ಏನು ಸೇವಿಸುತ್ತೇವೆ ಅದು ನಮ್ಮ ಮುಖದ ಮೇಲೆ ಪ್ರತಿಫಲಿಸುತ್ತದೆ. ಸುಮ್ಮನೆ ಮುಖದಲ್ಲಿ ದುಬಾರಿ ಕ್ರೀಮ್ ಹಾಕುವುದರಿಂದ ಅಲ್ಲ. ಬದಲಿಗೆ ಅದೇ ಹಣವನ್ನು ತರಕಾರಿ, ಹಣ್ಣುಗಳ ಮೇಲೆ ಖರ್ಚು ಮಾಡಿ' ಎನ್ನುವ ಮೂಲಕ ಆರ್ಥಿಕ ಸಲಹೆಯನ್ನೂ ನೀಡಿದ್ದಾರೆ.