ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಸಂಯುಕ್ತಾ ಹೆಗ್ಡೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್. ತಮ್ಮ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ಕೊಡುತ್ತಲೇ ಇರುತ್ತಾರೆ. ಆದರೆ ಶೇರ್ ಮಾಡುತ್ತಿದ್ದ ಫೋಟೋಗಳಿಗೆ ಬರುತ್ತಿರುವ ಕಾಮೆಂಟ್‌ ಬಗ್ಗೆ ಇದೀಗ ಸ್ಪಷ್ಟನೆ ನೀಡಿದ್ದಾರೆ.

ಕ್ರೇಜಿ ಬೈಕ್‌ ಸಾಹಸ ಮಾಡಿದ ಸಂಯುಕ್ತಾ; ಬೆಚ್ಚಿಬಿದ್ದ ನೆಟ್ಟಿಗರು!

ಪಿಯುಸಿ ಮುಗಿಸಿದ ನಂತರ ಸಂಯುಕ್ತಾ ವಿಭಿನ್ನ ಕ್ಷೇತ್ರಗಳಲ್ಲಿ ಬ್ಯುಸಿಯಾದರು. ಬ್ಯಾಲೆ ಡ್ಯಾನ್ಸಿಂಗ್, ರಿಯಾಲಿಟಿ ಶೋ ಮತ್ತು ಸಿನಿಮಾ ಲೈಫ್‌ ಸೇರಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅದರಲ್ಲೂ ಕಳೆದ ವರ್ಷ ವಿಯೆಟ್ನಾಂ  ಮತ್ತು ಯುರೋಪ್‌ ಟ್ರಿಪ್‌ನಲ್ಲಿ ಹೆಚ್ಚಿನ ಸಮಯ ಕಳೆದಿದ್ದಾರೆ. ಆದರೀಗ ಲಾಕ್‌ಡೌನ್‌ನಿಂದ ಕುಟುಂಬದವರ ಜೊತೆಗಿರಲು ಹೆಚ್ಚಿನ ಸಮಯ ಸಿಕ್ಕಿತ್ತಂತೆ. 

ಲಾಕ್‌ಡೌನ್‌ ಸಡಿಲಿಕೆ ನಂತರ ಗೆಳೆಯರ ಜೊತೆ ಬೈಕ್‌ ರೈಡ್‌ಗೆ ತೆರೆಳಿದ ನಟಿಯ ಫೋಟೋಗಳು ವೈರಲ್ ಆಗುತ್ತಿದ್ದವು. ನೆಟ್ಟಿಗರಿಂದ ನಟಿಯ ಸಾಹಸಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದವು.  ಕಿರಿಕ್ ಪಾರ್ಟಿ ಚಿತ್ರದಲ್ಲಿ ಸಂಯುಕ್ತಾರನ್ನು ಟಾಮ್‌ಬಾಯ್‌ ಪಾತ್ರದಲ್ಲಿ ನೋಡಿ, ವೀಕ್ಷಕರು ಆಕೆ ರಿಯಲ್ ಲೈಫ್‌ನಲ್ಲೂ ಹಾಗೇ ಇದ್ದಾರೆ ಎಂದು ಭಾವಿಸಿದ್ದಾರೆ.  ಚಿತ್ರ ತೆರೆ ಕಂಡು ಮೂರು ವರ್ಷಗಳೇ ಕಳೆದಿವೆ. ನನ್ನ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಟಾಮ್‌ಬಾಯ್‌ ಪಾತ್ರಗಳು ಮಾತ್ರವಲ್ಲ, ಟಿಪಿಕಲ್ ಹೆಣ್ಣು ಮಗಳ ಪಾತ್ರವನ್ನೂ ಮಾಡಬಲ್ಲೆ. ನನಗೆ ಬೈಕ್‌ ರೈಡ್‌ ಮಾಡಲೂ ಬರುತ್ತದೆ ಹಾಗೂ ಮನೆಯ ಮುಂದೆ ರಂಗೋಲಿ ಹಾಕುವುದಕ್ಕೂ ಬರುತ್ತದೆ ಎಂದು, ಪ್ರತಿಕ್ರಿಯೆ ನೀಡಿದ್ದಾರೆ.

ಸಂಯುಕ್ತಾ ಹೆಗ್ಡೆ ವಿಚಿತ್ರ ಫೋಟೋ; 10 ಲಕ್ಷ ಜನರ ಪ್ರೀತಿ ಪಡೆದ ತುಂಟಿ!

ಟಾಮ್‌ಬಾಯ್‌ ರೀತಿಯಲ್ಲಿ ನೋಡಿದ ಜನರು ಸಂಯುಕ್ತಾ ಲೇಡಿಲೈಕ್‌ ಪಾತ್ರಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಪಪ್ಪಿ ಹಾಗೂ ಕೋಮಾಲಿ ಸಿನಿಮಾಗಳನ್ನು ಸಂಯುಕ್ತಾ ವಿಭಿನ್ನವಾಗಿ ಅಭಿನಯಿಸಿದ್ದಾರೆ. ಈಗಾಗಲೇ ಪ್ರಭುದೇವ್‌ ಜೊತೆ ಹೊಸ ಪ್ರಾಜೆಕ್ಟ್‌ಗೆ ಸಹಿ ಮಾಡಿರುವ ಸಂಯುಕ್ತಾ, ಕನ್ನಡ ಸಿನಿಮಾಗಳನ್ನು ಮಾಡಬೇಕೆಂದು ಬಯಸುತ್ತಿದ್ದಾರೆ. ಸ್ಪಷ್ಟವಾಗಿ ಕನ್ನಡ ಮಾತನಾಡಿದ್ದರೂ ನನಗೆ ಅವಕಾಶಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ರಕ್ಷಿತ್ ಶೆಟ್ಟಿ ಚಿತ್ರ ಕಿರಿಕ್ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ಅವರೊಂದಿಗೆ ತೆರೆ ಹಂಚಿ ಕೊಂಡ ಸಂಯುಕ್ತಾಗೆ ಆಗಿನ್ನೂ 17 ವರ್ಷವಾಗಿದ್ದು, ಇದೀಗ ಎಂಥದ್ದೇ ಪಾತ್ರ ಮಾಡಲು ಬೇಕಾದರೂ ಸೈ ಎನ್ನುವ ಮನಸ್ಥಿತಿಗೆ ಬಂದಿದ್ದಾರೆ ನಟಿ. ಸದಾ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ, ಸಂಯುಕ್ತಾ ಈಗೀಗ ಟಿಪಿಕಲ್ ಟ್ರೆಡಿಷನಲ್‌ ಉಡುಗೆಯಲ್ಲಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಕೊಳ್ಳುತ್ತಿದ್ದು, ನೆಟ್ಟಿಗರ ಉಬ್ಬೇರಿಸುವಂತೆ ಮಾಡಿದ್ದಾರೆ.