Samyuktha Hegde on Body Shaming: ಸಣ್ಣಗಿರುವುದು ನನ್ನ ಅದೃಷ್ಟ, 40 ರಿಂದ 50 ಕೆಜಿ ಆಗಿರುವೆ!

ಬಿಕಿನಿ ಫೋಟೋ ಅಪ್ಲೋಡ್ ಮಾಡುವ ಮೂಲಕ ತಮ್ಮ ದೇಹದಲ್ಲಿ ಆಗುವ ಬದಲಾವಣೆ ಮತ್ತು ಅದನ್ನು ಒಪ್ಪಿಕೊಳ್ಳುವ ಮನೋಭಾವದ ಬಗ್ಗೆ ಪೋಸ್ಟ್‌ ಮಾಡಿದ ನಟಿ ಸಂಯುಕ್ತಾ. 

Kannada Samyuktha Hegde answers back to Netizens for Body Shaming  vcs

ಕಿರಿಕ್ ಪಾರ್ಟಿ (Kirik Party) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಾಲೇಜ್ ಹುಡುಗಿ ಸಂಯುಕ್ತಾ (Samyuktha Hegde) ಸಿನಿಮಾ ಕೆಲಸಗಳಿಗಿಂತ ಕಾಂಟ್ರೋವರ್ಸಿಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ನೆಟ್ಟಿಗರು ಕಾಮೆಂಟ್‌ಗಳು ಕೆಲವೊಮ್ಮೆ ವೈರಲ್ ಆಗುತ್ತವೆ. ಅದರಲ್ಲೊಬ್ಬರು ಹೇಳಿದ್ದರು ಕಿರಿಕ್ ಪಾರ್ಟಿ ಸಾನ್ವಿ ಟೈಟಲ್‌ನ ಸಂಯುಕ್ತಾಗೆ ನೀಡಬೇಕಿತ್ತು. ಏಕೆಂದರೆ ಆಕೆ ಪರಭಾಷೆಯಲ್ಲಿ ನಟಿಸುತ್ತಿದ್ದರೂ, ಆ ಕಾರ್ಯಕ್ರಮದಲ್ಲೂ ಕನ್ನಡ ಸಿನಿಮಾ ಬೇಕು ಎಂದು ಮಾತನಾಡುತ್ತಾರೆ. ಕನ್ನಡ ಅಭಿಮಾನವಿದೆ. ಆಕೆಯನ್ನು ಬೆಳೆಸಿ ಒಳ್ಳೆಯ ಸ್ಥಾನ ಕೊಡಿ ಎಂದು, ಬರೆದಿದ್ದರು. ಇರ್ಲಿ ಬಿಡಿ ಇದರ ಬಗ್ಗೆ ಆಮೇಲೆ ಮಾತಾಡೋಣ.

ಸಂಯುಕ್ತಾ ಸೋಷಿಯಲ್ ಮೀಡಿಯಾದಲ್ಲಿ (Social Media) ಆಗಾಗ ಬೋಲ್ಡ್‌ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಈ ಸಲ ಅದರ ಹಿಂದಿರುವ ಶ್ರಮದ ಬಗ್ಗೆ ಬರೆದುಕೊಂಡಿದ್ದಾರೆ. ಪದೇ ಪದೇ ದೇಹದ ಬಗ್ಗೆ ಕಾಮೆಂಟ್ ಮಾಡುವವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Samyuktha Hegde: ರಾಣಾ ಚಿತ್ರಕ್ಕೆ ಸಂಯುಕ್ತ ಹೆಗ್ಡೆ

ಸಂಯುಕ್ತಾ ಮಾತುಗಳು:
'ವಿಭಿನ್ನ ದೇಹದ ಆಕಾರ ಹೊಂದಿರುವ ಸ್ನೇಹಿತರೇ ಹಾಯ್...ನಾನು ತೆಳ್ಳಗಾಗಲು ಎಷ್ಟು ಅದೃಷ್ಟಶಾಲಿ ಎಂದು ನಿರಂತರವಾಗಿ ಒಪ್ಪಿಕೊಂಡಿದ್ದಕ್ಕಾಗಿ ಧನ್ಯವಾದಗಳು.ನನ್ನ ದೇಹದ ಕಾಳಜಿಯನ್ನು ಪರಿಗಣಿಸದಿದ್ದಕ್ಕಾಗಿ ಧನ್ಯವಾದಗಳು. ನಾನು ಫಿಟ್ ಆಗಿರುವುದಕ್ಕೆ ಹಾಕಿರುವ ಪರಿಶ್ರಮವನ್ನು ನಿರ್ಲಕ್ಷಿಸಿ, ದೇಹ ಹೀಗಿರುವುದಕ್ಕೆ ನೀನು Blessed ಎಂದವರಿಗೆ ಧನ್ಯವಾದಗಳು. ನನ್ನ ದೇಹ 45 ಕೆಜಿಯಿಂದ 50 ಕೆಜಿ ಹೆಚ್ಚಾಗಿದೆ ಈ ನನ್ನ ಟ್ರಾನ್ಸ್‌ಫಾರ್ಮೇಷನ್‌ನ  ಪ್ರಶಂಸಿಸಿದ್ದಕ್ಕಾಗಿ ಧನ್ಯವಾದಗಳು. ನೀನು ಏನು ಬೇಕಿದ್ದರೂ ತಿನ್ನಬಹುದು, ದಪ್ಪ ಆಗುವುದಿಲ್ಲ ಎಂದು ಕೊಂಕು ಹೇಳಿಕೆ ನೀಡುವವರಿಗೆ ಧನ್ಯವಾದಗಳು. ಸಣ್ಣಗಿರುವವರು ಫಿಟ್ ಆಗಿರಬೇಕು ಎನ್ನುವ ನನ್ನ ನಂಬಿಕೆಗೆ, ಇಲ್ಲ ದಪ್ಪಗಾಗಿ ಫಿಟ್ ಆಗಬೇಕು, ಎಂದು ಬದಲಾಯಿಸಿದವರಿಗೆ ಧನ್ಯವಾದಗಳು. ಇಂತಿ ನಿಮ್ಮ Skinny ಸ್ನೇಹಿತೆ,' ಎಂದು ಬರೆದುಕೊಂಡಿದ್ದಾರೆ. 

Kannada Samyuktha Hegde answers back to Netizens for Body Shaming  vcs

ಯಾರೂ ಅದೃಷ್ಟವಂತರಲ್ಲ:
'ಪ್ರತಿಯೊಬ್ಬರೂ ತಮ್ಮ ತಮ್ಮಲ್ಲಿಯೇ ಮೌನ ಯುದ್ಧಗಳನ್ನು ನಡೆಸುತ್ತಿರುತ್ತಾರೆ. ನೀವು ನೋಡಿದ್ದಂಗೇ ಎಲ್ಲವೂ ಇಲ್ಲ ಎನ್ನುವ ರೀತಿಯಲ್ಲಿ ಕಾಮೆಂಟ್ ಮಾಡಬೇಡಿ. ಕೆಲವರು ದೇಹದ ತೂಕ ಇಳಿಸಿ ಕೊಳ್ಳುವುದಕ್ಕೆ ಶ್ರಮಿಸುತ್ತಿರುತ್ತಾರೆ. ಕೆಲವರು ದಪ್ಪಗಾಗಲು, ಇನ್ನೂ ಕೆಲವರು ಇದೇ ದೇಹವನ್ನು ಕಾಪಾಡಿಕೊಂಡು ಹೋಗಲು ಹೆಚ್ಚಿನ ಶ್ರಮ ವಹಿಸುತ್ತಾರೆ. ಇಲ್ಲಿ ಯಾರೂ ಅದೃಷ್ಟವಂತರಲ್ಲ. ಯಾರೂ ಪರ್ಫೆಕ್ಟ್ ಆಗಿ ಹುಟ್ಟಿಲ್ಲ ಮತ್ತು ಪರ್ಫೆಕ್ಷನ್‌ನ ಪಡೆಯಲು ಯಾವುದೇ ದಾರಿ ಇಲ್ಲ. ಏಕೆಂದರೆ ಪರ್ಫೆಕ್ಟ್‌ ಅನ್ನೋದು ಈ ಭೂಮಿ ಮೇಲೆ ಅಸ್ತಿತ್ವದಲ್ಲಿ ಇಲ್ಲ. ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರುವುದು ಮುಖ್ಯ,ನಿಮ್ಮ ದೇಹಕ್ಕೆ ಟ್ರೈನಿಂಗ್ ಮತ್ತು ಪೋಷಣೆ ನೀಡುವುದು ಮುಖ್ಯ, ನೀವು ಹುಟ್ಟಿದ ಒಂದು ವಿಷಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಮುಖ್ಯವಾಗಿದೆ!' ಎಂದಿದ್ದಾರೆ ಸಂಯುಕ್ತಾ.

'ಯಾರೋ ಇವ್ಳು ದೆವ್ವ ಇದ್ದಂಗೆ ಇದ್ದಾಳೆ'; ನಟಿ ಸಂಯುಕ್ತಾ ಹೆಗ್ಡೆ ಫೋಟೋಗೆ ನೆಟ್ಟಿಗರ ಕಮೆಂಟ್?

ಸಂಯುಕ್ತಾ ಪೋಸ್ಟ್‌ ನೋಡಿ ನೆಟ್ಟಿಗರು (Netizens) ಹಾಗೂ ಸಿನಿ ಆಪ್ತರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಒಂದು ಹೆಣ್ಣು ಮತ್ತೊಬ್ಬ ಹೆಣ್ಣಿನ ವಿರುದ್ಧ ಕೊಂಕು ಮಾತನಾಡುವ ಕಾಲದಲ್ಲಿಲ್ಲ ನಾವು. ಬದಲಾಗಿದ್ದೀವಿ. ನಾನು ಒಬ್ಬರನ್ನು ಹೊಗಳಬೇಕು, ಅವರ ಪರಿಶ್ರಮವನ್ನು ಮೆಚ್ಚಬೇಕು ಎನ್ನುವ ಮನಸ್ಥಿತಿಗೆ ಬಂದಿದ್ದೀವಿ, ಎಂದು ಕಾಮೆಂಟ್ ಮಾಡಿದ್ದಾರೆ. 

ಕನ್ನಡದ ಕಿರಿಕ್ ಪಾರ್ಟಿ, ಕಾಲೇಜ್ ಕುಮಾರ (College Kumara) ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಸಂಯುಕ್ತಾ ತೆಲುಗು ಕಿರಿಕ್ ಪಾರ್ಟಿ ಮತ್ತು ತಮಿಳಿನಲ್ಲಿ ವಾಚ್‌ಮ್ಯಾನ್ (Watchman) ಸಿನಿಮಾದಲ್ಲಿ ನಟಿಸುವ ಮೂಲಕ ಪರಭಾಷೆಗೆ ಎಂಟ್ರಿ ಕೊಟ್ಟರು. ಆನಂತರ ಕಿವುಡು ಹುಡುಗಿ ಪಾತ್ರದ ಮೂಲಕ ಮತ್ತೆ ಕನ್ನಡದ 'ಮ್ಮೆ ನಿಶಬ್ಧ ಒಮ್ಮೆ ಯುದ್ಧ' ಸಿನಿಮಾದಲ್ಲಿ ನಟಿಸಿದ್ದರು. ತಮಿಳಿನ ಕೋಮಲಿ ಮತ್ತು ಪಪ್ಪಿ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದಂತೆ, ಕನ್ನಡ ತುರ್ತು ನಿರ್ಗಮನ ಮತ್ತು ರಾಣಾ (Rana) ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

 

Latest Videos
Follow Us:
Download App:
  • android
  • ios