Samyuktha Hegde: ರಾಣಾ ಚಿತ್ರಕ್ಕೆ ಸಂಯುಕ್ತ ಹೆಗ್ಡೆ
ಶ್ರೇಯಸ್ ನಟನೆಯ ‘ರಾಣ’ ಚಿತ್ರಕ್ಕೆ ನಟಿ ಸಂಯುಕ್ತ ಹೆಗ್ಡೆ(Samyuktha Hegde) ಜತೆಯಾಗುತ್ತಿದ್ದಾರೆ. ನಟಿ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶ್ರೇಯಸ್ ನಟನೆಯ ‘ರಾಣ’ ಚಿತ್ರಕ್ಕೆ ನಟಿ ಸಂಯುಕ್ತ ಹೆಗ್ಡೆ ಜತೆಯಾಗುತ್ತಿದ್ದಾರೆ. ಈಗಾಗಲೇ ಚಿತ್ರದ ನಾಯಕಿಯರಾಗಿ ರಜನಿ ಭಾರದ್ವಾಜ್ ಹಾಗೂ ರೀಷ್ಮ ನಾಣಯ್ಯ ಇದ್ದಾರೆ.
ಈಗಷ್ಟೆ ಚಿತ್ರತಂಡಕ್ಕೆ ಸೇರಿಕೊಂಡಿರುವ ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತ ಹೆಗ್ಡೆ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ. ಇದೊಂದು ವಿಶೇಷ ಹಾಡಾಗಿದ್ದು, ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಶಿವು ಅವರ ಸಾಥ್ಯದಲ್ಲಿ ಕಲರ್‌ಫುಲ್ ಸೆಟ್ ಹಾಕಲಾಗಿದೆ.
ಈ ಅದ್ದೂರಿ ಸೆಟ್‌ನಲ್ಲಿ ಸಂಯುಕ್ತ ಹೆಗ್ಡೆ ಹೆಜ್ಜೆ ಹಾಕಲಿರುವ ಹಾಡಿನ ಚಿತ್ರೀಕರಣ ನಡೆಯಲಿದೆ. ಶಿವು ಭೇರ್ಗಿ ಈ ಹಾಡನ್ನು ಬರೆದಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.
ನಂದಕಿಶೋರ್ ನಿರ್ದೇಶನದ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಚಿತ್ರಕ್ಕಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.
ಒಟ್ಟಿನಲ್ಲಿ ತುಂಬಾ ದಿನಗಳ ನಂತರ ಸಂಯುಕ್ತ ಹೆಗ್ಡೆ ಅವರು ಕನ್ನಡ ಚಿತ್ರದ ಸ್ಕ್ರೀನ್‌ಗೆ ಹಾಡಿನ ಮೂಲಕ ಎಂಟ್ರಿ ಆಗಿದ್ದಾರೆ.