ನೃತ್ಯ ಪ್ರಧಾನ ಚಿತ್ರದಲ್ಲಿ ಕಾಳಿ ಮಠದ ರಿಷಿಕುಮಾರ ಸ್ವಾಮಿ ನಟನೆ, ಅದ್ಧೂರಿಯಾಗಿ ಆಡಿಯೋ ಬಿಡುಗಡೆ ಕಾರ್ಯಕ್ರಮ. 

ವಿಜಯನಗರ ಮಂಜು ನಿರ್ದೇಶನದ ‘ಸರ್ವಸ್ಯ ನಾಟ್ಯಂ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಬಿಗ್‌ಬಾಸ್‌ ಸ್ಪರ್ಧಿ ಆಗಿದ್ದ ಕಾಳಿ ಮಠದ ಯೋಗೇಶ್ವರ ರಿಷಿಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ರಿಷಿಕುಮಾರ ಸ್ವಾಮಿ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕುಂಚಿಘಟ್ಟಮಹಾಸಂಸ್ಥಾನದ ಹನುಮಂತನಾಥ ಮಹಾಸ್ವಾಮಿಗಳು, ಕುಣಿಗಲ್‌ನ ಹರೇಶಂಕರ ಮಹಾಸಂಸ್ಥಾನದ ಸಿದ್ಧಲಿಂಗ ಮಹಾಸ್ವಾಮಿಗಳು ಸೇರಿ ಹಲವರು ಆಡಿಯೋ ಬಿಡುಗಡೆಗೆ ಆಗಮಿಸಿದ್ದರು.

Janardhana Reddy ಪುತ್ರ ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಆಗಮನ!

ಚಿಕ್ಕಣ್ಣ ಅವರ ಸಿರಿ ಮ್ಯೂಸಿಕ್‌ ಸಂಸ್ಥೆ ಆಡಿಯೋ ಹಕ್ಕುಗಳನ್ನು ತಮ್ಮದಾಗಿಸಿಕೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ವಿಜಯನಗರ ಮಂಜು, ‘ನಾನು ಮೂಲತಃ ನೃತ್ಯ ನಿರ್ದೇಶಕ. ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಸಂಘದ ಕಾರ್ಯದರ್ಶಿ ಆಗಿಯೂ ಕೆಲಸ ಮಾಡುತ್ತಿದ್ದೇನೆ. ಡ್ಯಾನ್ಸ್‌ ಎಂದರೆ ಪ್ರಾಣ.

ನಾನು ತಪ್ಪು ಮಾಡಿದ್ದು ಹೌದು, ಅದಕ್ಕೆ ಜನರೂ ದುರ್ವರ್ತನೆ ತೋರಿದ್ರು: Huchcha Venkat

ಹೀಗಾಗಿ ನೃತ್ಯ ಪ್ರಧಾನ ಸಿನಿಮಾ ಮಾಡುವ ಆಸೆ ನನ್ನಲ್ಲಿತ್ತು. ಈ ಆಸೆಯನ್ನು ನನ್ನ ನೃತ್ಯ ವಿದ್ಯಾರ್ಥಿ ಮನೋಜ್‌ ಕುಮಾರ್‌ ಈ ಚಿತ್ರ ನಿರ್ಮಿಸುವ ಮೂಲಕ ಈಡೇರಿಸಿದ್ದಾರೆ’ ಎಂದರು. ಅನಾಥ ಮಕ್ಕಳಿಗೆ ನೃತ್ಯ ಹೇಳಿಕೊಡುವ ಶಿಕ್ಷಕನ ಪಾತ್ರದಲ್ಲಿ ರಿಷಿಕುಮಾರಸ್ವಾಮಿ ಅಭಿನಯಿಸಿದ್ದಾರೆ. ರಿಯಾಲಿಟಿ ಶೋನಲ್ಲಿ ನಡೆಯುವ ವಾಸ್ತವಾಂಶಗಳು ಈ ಚಿತ್ರಕ್ಕೆ ಸ್ಫೂರ್ತಿಯಾಗಿದೆ. ಮನೋಜ್‌ ವರ್ಮ ಈ ಚಿತ್ರದ ನಿರ್ಮಾಪಕ. ಚಿತ್ರಕ್ಕೆ ಎ ಟಿ ರವೀಶ್‌ ಸಂಗೀತ, ಲೋಕಿ ಗೀತ ರಚನೆ, ಎಂ ಬಿ ಅಳಿಕಟ್ಟಿಕ್ಯಾಮೆರಾ ಚಿತ್ರಕ್ಕಿದೆ.

YouTube video player