Asianet Suvarna News Asianet Suvarna News

Janardhana Reddy ಪುತ್ರ ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಆಗಮನ!

ಉದ್ಯಮಿ, ರಾಜಕಾರಣಿ ಜನಾರ್ದನ್‌ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಬರುವುದು ಖಚಿತವಾಗಿದೆ. ಈ ಹಿಂದೆ ಪಿಆರ್‌ಕೆ ಬ್ಯಾನರ್‌ನಲ್ಲಿ ಮೂಡಿ ಬಂದಿದ್ದ ‘ಮಾಯಾ ಬಜಾರ್‌’ ಚಿತ್ರ ನಿರ್ದೇಶಿಸಿದ್ದ ರಾಧಾಕೃಷ್ಣ ರೆಡ್ಡಿ ಅವರೇ ಕಿರೀಟಿ ರೆಡ್ಡಿಯ ಮೊದಲ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ರಾಧಾಕೃಷ್ಣ ರೆಡ್ಡಿ ಮಾತುಗಳು ಇಲ್ಲಿವೆ.

Gali Janardhana Reddy son Kireeti Reddy to debut in kannada film industry vcs
Author
Bangalore, First Published Jan 14, 2022, 9:07 AM IST

ಆರ್‌. ಕೇಶವಮೂರ್ತಿ

1. ಯಾವ ರೀತಿಯ ಸಿನಿಮಾ?

ಇದು ಸಂಪೂರ್ಣ ಕೌಟುಂಬಿಕ ಮನರಂಜನೆಯ ಸಿನಿಮಾ. ಹೊಸ ಹುಡುಗನ ಚಿತ್ರಕ್ಕೆ ಏನೆಲ್ಲ ಅಂಶಗಳು ಇರಬೇಕೋ ಅದನ್ನು ನಾನು ಇಲ್ಲಿ ಜತೆ ಮಾಡಿದ್ದೇನೆ. ತುಂಬಾ ಪ್ರಯೋಗ ಅಂತೇನು ಇರಲ್ಲ. ಕಮರ್ಷಿಯಲ್‌ ಸಿನಿಮಾ ಇದಾಗಿರುತ್ತದೆ.

2. ಯಾವಾಗಿನಿಂದ ಚಿತ್ರೀಕರಣ ಆರಂಭ?

ಇದೇ ತಿಂಗಳು 20ಕ್ಕೆ ಚಿತ್ರಕ್ಕೆ ಮುಹೂರ್ತ ಆಗಬೇಕಿತ್ತು. ಆದರೆ, ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಹೂರ್ತ ಸಮಾರಂಭವನ್ನು ಮುಂದೂಡಲಾಯಿತು. ಹೀಗಾಗಿ ಚಿತ್ರೀಕರಣ ತಡವಾಗುತ್ತಿದೆ. ಮಾಚ್‌ರ್‍ ಅಥವಾ ಏಪ್ರಿಲ್‌ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ.

Meghana Raj Gets Emotional: ಚಿರು ತೋಳು ಬಳಸಿ ನನ್ನ ಮದ್ವೆ ಆಗ್ಲೇ ಬೇಕು ಎಂದಿದ್ದ ಮೇಘನಾ..!

ನನ್ನ ಪುತ್ರನ ಚಿತ್ರಕ್ಕೆ ರಾಧಾಕೃಷ್ಣ ರೆಡ್ಡಿ ಅವರೇ ನಿರ್ದೇಶಕರು. ಇವರು ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ಸಿನಿಮಾ ಮಾಡಿದವರು. ಈಗ ನನ್ನ ಮಗನಿಗಾಗಿ ಸಿನಿಮಾ ಮಾಡುತ್ತಿದ್ದಾರೆ. ವಾರಾಹಿ ಸಂಸ್ಥೆಯ ಮಾಲೀಕರಾದ ಸಾಯಿ ನನ್ನ ಸ್ನೇಹಿತರು. ಹೀಗಾಗಿ ನನ್ನ ಮಗನ ಚಿತ್ರವನ್ನು ವಾರಾಹಿ ಸಂಸ್ಥೆ ನಿರ್ಮಾಣ ಮಾಡುತ್ತಿದೆ.- ಜನಾರ್ದನ್‌ ರೆಡ್ಡಿ

3. ಉದ್ಯಮಿ, ರಾಜಕಾರಣಿಯ ಮಗನ ಲಾಂಚ್‌ ಸಿನಿಮಾ ಆಗಿರುವುದರಿಂದ ಯಾವ ರೀತಿ ಒತ್ತಡ, ಸವಾಲುಗಳು ಇವೆ?

ಜನಾರ್ದನ್‌ ರೆಡ್ಡಿ ಅವರ ಕಡೆಯಿಂದ ಆಗಲಿ, ನಿರ್ಮಾಣ ಸಂಸ್ಥೆಯಿಂದಾಗಲಿ ಯಾವುದೇ ರೀತಿಯ ಒತ್ತಡಗಳು ಇಲ್ಲ. ಬಾಹ್ಯ ಒತ್ತಡಗಳು ಇಲ್ಲದೆ ಈ ಸಿನಿಮಾ ಮಾಡುತ್ತಿದ್ದೇನೆ. ರೆಡ್ಡಿ ಅವರು ಕೂಡ, ‘ನನ್ನ ಮಗ ಎನ್ನುವ ಯೋಚನೆಯಲ್ಲಿ ಸಿನಿಮಾ ಮಾಡಬೇಡಿ. ಒಳ್ಳೆಯ ಕತೆ, ಅದಕ್ಕೆ ತಕ್ಕಂತೆ ಅವನನ್ನು ದುಡಿಸಿಕೊಳ್ಳಿ’ ಎಂದಷ್ಟೇ ಹೇಳಿದ್ದಾರೆ. ಸವಾಲು ಎಂದರೆ ಹೊಸ ನಟನಿಗೆ ಏನೆಲ್ಲ ಸೂಕ್ತ ಎನ್ನುವ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದನ್ನು ಈಗ ಶುರು ಮಾಡಿದ್ದೇನೆ.

4. ಕಿರೀಟಿ ರೆಡ್ಡಿ ಏನೆಲ್ಲ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ?

ನಾನು ಸಿನಿಮಾ ಮಾಡುತ್ತೇನೆ ಎಂದು ಗೊತ್ತುಪಡಿಸುವ ಮೊದಲೇ ಅವರು ಚಿತ್ರರಂಗಕ್ಕೆ ಬರಲು ತಯಾರಿ ಮಾಡಿಕೊಳ್ಳುತ್ತಿದ್ದರು. ಈಗ ನನ್ನ ಕತೆಗೆ ಬೇಕಾಗುವಂತಹ ಡ್ಯಾನ್ಸ್‌, ಫೈಟ್‌ ವಿಚಾರದಲ್ಲಿ ತರಬೇತಿ ನೀಡಬೇಕಿದೆ.

Rashmika Mandanna About Pushpa: ಪುಷ್ಪಾ 2 ಇನ್ನೂ ಚೆನ್ನಾಗಿ ಮಾಡ್ತೀವಿ ಎಂದ ರಶ್ಮಿಕಾ

5. ಇದು ಬರೀ ಕನ್ನಡ ಚಿತ್ರನಾ?

ಹೌದು. ಕನ್ನಡದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ತೆಲುಗಿಗೂ ಡಬ್‌ ಮಾಡುವ ಪ್ಲಾನ್‌ ಇದೆ. ಯಾಕೆಂದರೆ ನಿರ್ಮಾಪಕರು ಕೂಡ ಟಾಲಿವುಡ್‌ ಮೂಲದವರು. ಹೀಗಾಗಿ ಅವರು ಈ ಚಿತ್ರವನ್ನು ತೆಲುಗಿಗೆ ಡಬ್‌ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.

6. ಜನಾರ್ದನ್‌ ರೆಡ್ಡಿ ಪುತ್ರನ ಮೊದಲ ಚಿತ್ರ ನಿಮಗೆ ಕನೆಕ್ಟ್ ಆಗಿದ್ದು ಹೇಗೆ?

ಇದಕ್ಕೆ ನಾನು ಥ್ಯಾಂಕ್ಸ್‌ ಹೇಳಬೇಕಿರುವುದು ನಟ ಪುನೀತ್‌ ರಾಜ್‌ಕುಮಾರ್‌ ಹಾಗೂ ಅವರ ಪಿಆರ್‌ಕೆ ಸಂಸ್ಥೆಗೆ. ಯಾಕೆಂದರೆ ಅಪ್ಪುಗಾಗಿಯೇ ಅವರು ಮಾಯಾಬಜಾರ್‌ ಸಿನಿಮಾ ನೋಡಿದ್ದಾರೆ. ಆ ಸಿನಿಮಾ ನೋಡಿದ ಮೇಲೆ ನನಗೆ ನಿರ್ಮಾಪಕ ಸಾಯಿ ಹಾಗೂ ಜನಾರ್ದನ್‌ ರೆಡ್ಡಿ ಅವರ ಕಡೆಯಿಂದ ಫೋನ್‌ ಬಂತು. ಏನಾದರೂ ಹೊಸ ರೀತಿಯ ಕತೆ ಇದ್ದರೆ ಹೇಳಿ ಅಂದರು. ಆ ರೀತಿ ನಾನು ಈ ಚಿತ್ರಕ್ಕೆ ಕನೆಕ್ಟ್ ಆದೆ.

7. ನಟ ನಿಖಿಲ್‌ ಕುಮಾರ್‌ ಅವರಿಗೂ ನೀವು ಸಿನಿಮಾ ಮಾಡುವ ಪ್ಲಾನ್‌ ಇತ್ತಲ್ಲ?

ಖಂಡಿತಾ ಇದೆ. ಅದರ ಕತೆ ಫೈನಲ್‌ ಆಗಬೇಕಿದೆ. ವಿರಾಮದ ನಂತರ ಬರುವ ಕತೆಯಲ್ಲಿ ಸಾಕಷ್ಟುಬದಲಾವಣೆಗಳನ್ನು ಮಾಡುತ್ತಿದ್ದೇವೆ. ಹೀಗಾಗಿ ಅದು ತಡವಾಗಿ ಸೆಟ್ಟೇರಲಿದೆ. ಅದರ ನಡುವೆ ಕಿರೀಟಿ ರೆಡ್ಡಿ ನಟನೆಯ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದೇನೆ.

8. ನಿಖಿಲ್‌ ಕುಮಾರ್‌ ಅವರಿಗೆ ಯಾವ ರೀತಿಯ ಸಿನಿಮಾ ಮಾಡುತ್ತಿದ್ದೀರಿ?

ಆ್ಯಕ್ಷನ್‌ ಚಿತ್ರ. ಅಂದರೆ ‘ಕೆಜಿಎಫ್‌’ರೀತಿಯ ಸಿನಿಮಾ ಮಾಡುತ್ತಿದ್ದೇವೆ. ಹೀಗಾಗಿ ಹೆಚ್ಚಿನ ತಯಾರಿ ಬೇಕಿದೆ.

Follow Us:
Download App:
  • android
  • ios