ಕುಚುಕು ಗೆಳೆಯನಿಗೆ ಸ್ಪೆಷಲ್ ಕೇಕ್ ತಯಾರಿಸಿದ ಕಿಚ್ಚ ಸುದೀಪ್. ಕೇಕ್ ಮೇಲೆ ಬರೆದ ಸಾಲುಗಳನ್ನು ಓದಿ ಭಾವರಪರವಶರಾಗಿ, ಥ್ಯಾಂಕ್ಸ್ ಎಂದ ಡಾಕ್ಟರ್....
ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕುಕ್ಕಿಂಗ್ ಹಾಗೂ ಬೇಕಿಂಗ್‌ನಲ್ಲಿ ಪರಿಣಿತರು ಎಂಬುದು ಎಲ್ಲಿರಿಗೂ ಗೊತ್ತಿರುವ ವಿಚಾರ. ಅದರೆ ಅವರೇ ಕೈಯಾರೇ ತಯಾರಿಸಿರುವ ಅಡುಗೆ ಸವಿಯುವುದು ಭಾಗ್ಯ ಎನ್ನುತ್ತಾರೆ ಅವರ ಆಪ್ತರು ಹಾಗೂ ಅಭಿಮಾನಿಗಳು. ಕಿಚ್ಚ ಸುದೀಪ್ ಆಪ್ತ ಗೆಳೆಯ ರವಿಶಂಕರ್ ಗೌಡ ಅವರಿಗೆ ಹುಟ್ಟುಹಬ್ಬಕ್ಕೆ ವಿಶೇಷ ಕೇಕ್ ಮಾಡಿ ಕಳುಹಿಸಿದ್ದಾರೆ.
ಡಾ.ವಿಠ್ಠಲ್ ರಾವ್ ಫ್ಯಾಮಿಲಿಗೆ ಹೋಂ ಕ್ವಾರಂಟೈನ್; ಎದುರು ಮನೆ ಅವ್ರಿಗೆ ಕೊರೋನಾ!
ಹೈದರಾಬಾದ್‌ನಲ್ಲಿ ಫ್ಯಾಂಟಮ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್ ಬೆಂಗಳೂರಿನ ನಿವಾಸಿಯಾಗಿರುವ ಡಾಕ್ಟರ್ ವಿಠ್ಠಲ್ ರಾವ್ ಅಲಿಯಸ್ ರವಿಶಂಕರ್ ಅವರ ಹುಟ್ಟುಹಬ್ಬಕ್ಕೆ ಸ್ಪೆಷಲ್ ಮೆಜೇಸ್ ಬರೆದು ಕೇಕ್ ಕಳುಹಿಸಿದ್ದಾರೆ. 'No matter what the situation will be for you, Kiccha' ಎಂದು ಬರೆಯಲಾಗಿದೆ.
'ಸ್ನೇಹದ ಸಲುಗೆ ಎಷ್ಟೆ ಇದ್ದರೂ ಕಿಚ್ಚನ ದೊಡ್ಡ ಗುಣವನ್ನು ಗೌರವಿಸಲೆಬೇಕು. ಕಿಚ್ಚನಿಂದ ಕುಚೇಲನ ಮನೆಗೆ ಸ್ನೇಹದ ಪ್ರತೀಕ ಸಿಹಿ ಹೂರಣದ ಉಡುಗೊರೆ ರವಾನೆ. ಈ ಅಸೀಮ ಪ್ರೀತಿಗೆ ಧನ್ಯವಾದಗಳು ದೀಪು,' ಎಂದು ರವಿಶಂಕರ್ ಗೌಡ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ ರವಿಶಂಕರ್ ಗೌಡ ವಾಸವಿರುವ ಅಪಾರ್ಟ್‌ಮೆಂಟ್‌ನ ಎದುರು ಮನೆ ಅವರಿಗೆ ಕೊರೋನಾ ಸೋಂಕು ಇದ್ದ ಕಾರಣ ಫ್ಲೋರ್ ಸೀಲ್‌ಡೌನ್ ಮಾಡಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಆತಂಕ ವ್ಯಕ್ತ ಪಡಿಸಿದ ನಂತರ ಕಿಚ್ಚ ಸುದೀಪ್ ರವಿಶಂಕರ್ ಅವರ ಕುಟುಂಬವನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಕಿಚ್ಚನ ಉದಾರ ಗುಣದ ಬಗ್ಗೆ ರವಿಶಂಕರ್ ಮಾತನಾಡಿದ್ದರು.
ಡಾಕ್ಟರ್ ವಿಠಲ್ ರಾವ್ ಕೈಯಲ್ಲಿ ಕತ್ತರಿ; ಮಗನಿಗೆ ಮಾಡಿದ ಹೇರ್‌ಕಟ್ ನೋಡಿ!
ಸಿಲ್ಲಿ ಲಲ್ಲಿ ಎಂಬ ಹಾಸ್ಯ ಧಾರಾವಾಹಿಯಲ್ಲಿ ಡಾ.ವಿಠಲ್ ರಾವ್ ಪಾತ್ರ ಮಾಡಿದ ರವಿಶಂಕರ್ ಗೌಡ ಅವರನ್ನು ಅದೇ ಪಾತ್ರದ ಹೆಸರಿನಿಂದ ಗುರುತಿಸಲಾಗುತ್ತದೆ. ಡಾ.ವಿಠಲ ರಾವ್, ಫೇಮಸ್ ಇನ್ ಸರ್ಜರಿ ಆ್ಯಂಡ್ ಭರ್ಜರಿ ಎನ್ನುವ ಡೈಲಾಗ್ ಸರ್ವಕಾಲಕ್ಕೂ ಫೇಮಸ್ ಆಗುವಂತೆ ಮಾಡಿತ್ತು. ಕೊರೋನಾ ವೈರಸ್ ಕಾರಣದಿಂದ ಲಾಕ್‌ಡೌನ್ ಆದ ಸಂದರ್ಭದಲ್ಲಿ ಈ ಧಾರಾವಾಹಿ ಮರು ಪ್ರಸಾರವಾಗಿದ್ದು, ಜನರನ್ನು ಮತ್ತೆ ನಗೆಗಡಲಲ್ಲಿ ತೇಲಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು.
ರಂಗಿ ತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಫ್ಯಾಂಟಮ್ ಚಿತ್ರದ ಮೊದಲ ಲುಕ್ ರಿಲೀಸ್ ಆದಾಗ, ಕಿಚ್ಚನಿಗೆ ಶುಭ ಹಾರೈಸಿಯೂ ರವಿ ಶಂಕರ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು. ಅದ್ಭುತ ಲುಕ್ ಎಂದು ಹೇಳಿದ್ದರು.
