ಡಾಕ್ಟರ್ ವಿಠಲ್ ರಾವ್ ಕೈಯಲ್ಲಿ ಕತ್ತರಿ; ಮಗನಿಗೆ ಮಾಡಿದ ಹೇರ್‌ಕಟ್ ನೋಡಿ!
ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಮನೆಯಲ್ಲೇ ಮಕ್ಕಳಿಗೆ ಹೇರ್ ಕಟ್ ಮಾಡಿದ ನಟ ರವಿಶಂಕರ್, ಹೀಗಿದೆ ಲುಕ್ ?
'ಸಿಲ್ಲಿ ಲಲ್ಲಿ' ಧಾರಾವಾಹಿ ಮೂಲಕ ಸಾವಿರಕ್ಕೂ ಹೆಚ್ಚು ಎಪಿಸೋಡ್‌ನಲ್ಲಿ ಮಿಂಚಿರುವ ನಟ ವಿಠಲ್ ರಾವ್ ಅಲಿಯಾಸ್ ರವಿಶಂಕರ್ ಗೌಡ ಲಾಕ್‌ಡೌನ್ ವೇಳೆ ಹೊಸ ಪ್ರಯತ್ನ ಮಾಡಿದ್ದಾರೆ.
ರವಿಶಂಕರ್ ಅವರ ದೊಡ್ಡ ಮಗ ಸೂರ್ಯ ತೇಜಸ್ವಿ ಹಾಗೂ ಚಿಕ್ಕ ಮಗ ಶೌರ್ಯ ಯಶಸ್ವಿಗೆ ಮನೆಯಲ್ಲಿಯೇ ಹೇರ್ ಕಟ್ ಮಾಡಿದ್ದಾರೆ. 'ಸ್ಟೇ ಹೋಂ ಸ್ಟೇ ಸೇಫ್. ಮನುಷ್ಯನಿಗೆ ಜೀವನ ಎಲ್ಲವೂ ಕಲಿಸುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ' ಎಂದು ರವಿಶಂಕರ್ ಗೌಡ ಹೇಳಿದ್ದಾರೆ.
ಫೇಮಸ್ ಇನ್ ಸರ್ಜರಿ ಆ್ಯಂಡ್ ಭರ್ಜರಿಯ ಡಾ.ವಿಠ್ಠಲ್ ರಾವ್ ಮನ ಕದ್ದವರು ಇವರು...!
ಕೊರೋನಾ ವೈರಸ್‌ನಿಂದ ಮನೆಯಲ್ಲಿಯೇ ಲಾಕ್ ಆಗಿರುವ ಸಾರ್ವಜನಿಕರು ಹಾಗೂ ಸಿನಿಮಾ ತಾರೆಯರು ಮನೆಯಲ್ಲಿಯೇ ಮಕ್ಕಳೊಟ್ಟಿಗೆ ಸಮಯ ಕಳೆಯುತ್ತಿದ್ದಾರೆ ಹಾಗೂ ವಿಭಿನ್ನ ಕೆಲಸಗಳನ್ನು ಕಲಿಯುತ್ತಿದ್ದಾರೆ. ಈ ಹಿಂದೆಯೂ ರವಿಶಂಕರ್ ಅವರ ಪುತ್ರ ಹಾಗೂ ಪತ್ನಿ ಸಂಗೀತಾ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ಇನ್ನು ಲಾಕ್‌ಡೌನ್‌ನಲ್ಲಿ ಕಿರುತೆರೆ ಪ್ರೇಕ್ಷಕರನ್ನು ಮನರಂಜಿಸಲು 'ಸಿಲ್ಲಿ ಲಲ್ಲಿ' ಧಾರಾವಾಹಿ ಮರು ಪ್ರಸಾರವಾಗುತ್ತಿದ್ದು ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಳ್ಳುವುದರಲ್ಲಿ ಅನುಮಾವಿಲ್ಲ.