ವೆರಿ ಫೇಮಸ್‌ ಇನ್ ಸರ್ಜರಿ ಆಂಡ್ ಭರ್ಜರಿ ಅಂದ್ರೆ ಸಾಕು ಮೊದಲು ಜ್ಞಾಪಕ ಬರುವುದು ಡಾ.ವಿಠ್ಠಲ್ ರಾವ್‌ ಅಲಿಯಾಸ್  ರವಿಶಂಕರ್ ಗೌಡ. ತಮ್ಮದೇ ಶೈಲಿಯ ಹಾಸ್ಯ ಚಟಾಕಿಯಿಂದ ಪ್ರೇಕ್ಷಕರನ್ನು ಮನೋರಂಜಿಸುತ್ತಿರುವ ರವಿಶಂಕರ್ ಅವರ ಕುಟುಂಬಕ್ಕೆ ಕೊರೋನಾದಿಂದ ಸಂಕಷ್ಟ ಎದುರಾಗಿದೆ. 

ಡಾಕ್ಟರ್‌ ವಿಠಲ್‌ ರಾವ್‌ ಕೈಯಲ್ಲಿ ಕತ್ತರಿ; ಮಗನಿಗೆ ಮಾಡಿದ ಹೇರ್‌ಕಟ್ ನೋಡಿ!

ಅಪಾರ್ಟ್‌ಮೆಂಟ್‌ನಲ್ಲಿ ಕ್ವಾರಂಟೈನ್:

ಬೆಂಗಳೂರಿನ ಹೊಸಕೆರೆಹಳ್ಳಿಯ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ರವಿಶಂಕರ್‌ ಕುಟುಂಬ ಈಗ ಆತಂಕದಲ್ಲಿದೆ. ನಿನ್ನೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಇಬ್ಬರಿಗೆ  ಕೊರೋನಾ ಇರುವುದಾಗಿ ತಿಳಿದು ಬಂದಿದೆ.  ಮನೆಯ ಮುಂಬಾಗದಲ್ಲೇ ಅವರು ವಾಸ ಮಾಡುತ್ತಿರುವ ಕಾರಣ ರವಿಶಂಕರ್‌ ಕುಟುಂಬದವರು ಕೂಡ 14 ದಿನಗಳ ಕಾಲ ಮನೆಯಿಂದ ಹೊರ ಬಾರದಂತೆ ಸೆಲ್ಫ್‌ ಕ್ವಾರಂಟೈನ್‌ ಪಾಲಿಸಲಿದ್ದಾರಂತೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು.

'ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನನ್ನ ಎದುರುಗಡೆಯ ಮನೆಗೆ  ವಕ್ಕರಿಸಿತು ಕೊರೋನಾ. ನನ್ನ ಮಕ್ಕಳಿರುವ ಮನೆಯನ್ನು ದೇವರೆ ಕಾಪಾಡಬೇಕು. ಎಚ್ಚರ ಸ್ನೇಹಿತರೆ ಎಚ್ಚರ. ನಾವೀಗ ನಮ್ಮನೆ ಬಾಗಿಲನ್ನು 14 ದಿನಗಳ ಕಾಲ ತೆಗೆಯವಂತಿಲ್ಲ. ನಾವೀಗ ದಿಗ್ಭಂಧನದಲ್ಲಿದ್ದೇವೆ. ಸುದೀಪ್‌, ಗಣಪ, ಸೃಜನ್‌ ಎಲ್ಲರೂ ಮಕ್ಕಳನ್ನು ಕರೆದುಕೊಂಡು ನಮ್ಮ ಮನೆಗೆ ಬಂದುಬಿಡು ಅಂದರು  ಆದರೆ ಈ ಸಮಯದಲ್ಲಿ ನಾವು ಹೋಗುವುದು ಸರಿಯಲ್ಲ. ವಾವ್‌!!! ಇದಲ್ಲವೆ ಗೆಳೆತನ ಅಂದರೆ..ಹಾಗೆ ನಮ್ಮ ಕುಟುಂಬದ ಕ್ಷೇಮ  ವಿಚಾರಿಸಿದ ಸಂತೋಷ್‌ ಆನಂದ್ ರಾಮ್‌, ರಘುರಾಮ್‌ ಅವರಿಗೂ  ಧನ್ಯವಾದಗಳು.' ಎಂದು ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 

ನಮ್ಮ Apartment ನಲ್ಲಿ ನನ್ನ ಎದುರುಗಡೆಯ ಮನೆಗೆ ವಕ್ಕರಿಸಿತು ಕರೋನಾ.... ನನ್ನ ಮಕ್ಕಳಿರುವ ಮನೆಯನ್ನು ದೇವರೆ ಕಾಪಾಡಬೇಕು.. ಎಚ್ಚರ ಸ್ನೇಹಿತರೆ ಎಚ್ಚರ.... ನಾವೀಗ ನಮ್ಮನೆ ಬಾಗಿಲನ್ನು 14 ದಿನ ತೆಗೆಯವಂತೆಯೆ ಇಲ್ಲಾ.. ದಿಗ್ಬಂಧನ ( Quarantin ) ಸುದೀಪ , ಗಣಪ , ಸೃಜಾನ್ , ಮಕ್ಕಳನ್ನು ಕರೆದುಕೊಂಡು ನಮ್ಮ ಮನೆಗೆ ಬಂದುಬಿಡು ಅಂದರು. ವಾವ್!!!!! ಇದಲ್ಲವೆ ಗೆಳೆತನ ಅಂದರೆ... ಹಾಗೆ ಕುಟುಂಬವನ್ನು ವಿಚಾರಿಸಿದ , ಸಂತೋಷ್ ಆನಂದ್ ರಾಮ್ , ರಘುರಾಮ್ , ಕಾರ್ತಿಕ್ ಗೌಡ ಧನ್ಯವಾದಗಳು. 😥 ರಾಜೇಶ್ ನಟರಂಗ , ಅಲಾಕಾನಂದ , ಚಂದ್ರ ಮಯೂರ. ಶ್ರೀಕಾಂತ್ ಹೆಬ್ಳಿಕರ್..🙏🙏🙏🙏🙏,

A post shared by RaviShankar Gowda (@ravishankar.gowda) on Jun 24, 2020 at 9:02am PDT

ಸ್ಟಾರ್‌ಗಳ ಅಪಾರ್ಟ್‌ಮೆಂಟ್‌:

ಇದೆ ಅಪಾರ್ಟ್‌ಮೆಂಟ್‌ನಲ್ಲಿ ನಟಿ ಪೂಜಾ ಗಾಂಧಿ, ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ವಾಸವಿರುವುದು ಎನ್ನಲಾಗಿದೆ. ಕೆಲ ದಿನಗಳಿಂದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರಿಗೂ ಕೊರೋನಾ ಪಾಸಿಟಿವ್ ಬಂದಿದೆ ಎಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತು. ಆದರೆ ವಿಜಯಲಕ್ಷ್ಮೀಅ ವರು  ಟ್ಟೀಟರ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಗಾಳಿ ಮಾತುಗಳಿಗೆ ಬ್ರೇಕ್ ಹಾಕಿದ್ದಾರೆ.

 

'ನೀವೆಲ್ಲರೂ ನನಗೆ ಕೋವಿಡ್‌ ಪಾಸಿಟಿವ್‌ ಬಂದಿದೆ ಎಂದು ಕೇಳಿಪಟ್ಟಿದ್ದೀರಿ ಇದು ನಿಮ್ಮ ಗಮನಕ್ಕೆ ಕೂಡ ಬಂದಿದೆ ಆದರೆ ನಾನು ಆರೋಗ್ಯವಾಗಿದ್ದೇನೆ, ಯಾವ ಸಮಸ್ಯೆಯೂ ಇಲ್ಲ.  ನೀವು ಆರೋಗ್ಯವಾಗಿರಿ' ಎಂದು ಟ್ಟೀಟ್ ಮಾಡಿದ್ದಾರೆ.