ದಕ್ಷಿಣ ಭಾರತದ ಮೋಸ್ಟ್‌ ಡಿಮ್ಯಾಂಡ್‌ ನಟಿ ರಶ್ಮಿಕಾ ಮಂದಣ್ಣ ಕೊರೋನಾ ವೈರಸ್‌ ಹಾವಳಿಯಿಂದ ಕುಟುಂಬಸ್ಥರ ಜೊತೆ ಮನೆಯಲ್ಲಿ ಲಾಕ್‌ಡೌನ್‌ ಟೈಂ ಪಾಸ್‌ ಮಾಡುತ್ತಿದ್ದಾರೆ. ಮನೆಯಲ್ಲೇ  ಇದ್ದು  ಏನಾದರೋ ಡಿಫರೆಂಟ್‌ ಆಗಿ ಪ್ರಯತ್ನ ಮಾಡಬೇಕೆಂದು ಇನ್ನಿತರ ತಾರೆಯರು ಫೇಸ್‌ಬುಕ್‌ ಲೈವ್‌, ಇನ್‌ಸ್ಟಾಗ್ರಾಂ ಲೈವ್‌ ಹಾಗೂ ಹಳೇ  ನೆನಪುಗಳನ್ನು ಮೆಲಕು ಹಾಕುತ್ತಾ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ ಆದರೆ ರಶ್ಮಿಕಾ ಅಲ್ಲೊಮ್ಮೆ  ಇಲ್ಲೊಮ್ಮೆ  ಫೋಟೋ ಶೇರ್ ಮಾಡುತ್ತಿದ್ದಾರೆ. ಅಷ್ಟೊಂದು ಬ್ಯುಸಿ ಇರುವಂಥ ಕೆಲಸ ಏನು ಮಾಡುತ್ತಿದ್ದಾರೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. 

ದೇವರಕೊಂಡ-ರಶ್ಮಿಕಾರದ್ದು ಬೆಸ್ಟ್ ಜೋಡಿ, ನಿಮಗೂ ಹಾಗೆ ಅನಿಸಿದ್ಯಾ?

ಟಾಲಿವುಡ್‌ ಸೈಲ್‌ ಕಿಂಗ್ ಅಲ್ಲು ಅರ್ಜುನ್‌ ಹುಟ್ಟು ಹಬ್ಬದ ಪ್ರಯುಕ್ತ 'ಪುಷ್ಪ' ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ  ವಿಭಿನ್ನ ರೀತಿಯಲ್ಲಿ ಹೆಸರು ಮಾಡುತ್ತಿರುವ ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು!ಲಾಕ್‌ಡೌನ್‌ನಲ್ಲಿ ರಶ್ಮಿಕಾ ಮಂದಣ್ಣ ಪಾತ್ರದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಸುಕುಮಾರ್‌ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಚಿತ್ತೂರು ಹುಡುಗಿಯಾಗಿ ಪ್ರೇಕ್ಷಕರ ಕಣ್ಸೆಳೆಯಲ್ಲಿದ್ದಾರೆ. ಯಾವುದೇ ಚಿತ್ರರಂಗಕ್ಕೆ ಕಾಲಿಟ್ಟರೂ ಅಲ್ಲಿನ ಭಾಷೆಯನ್ನು ಸುಲಭವಾಗಿ ಕಲಿಯುವುದು ರಶ್ಮಿಕಾ ಟ್ಯಾಲೆಂಟ್‌, ಪಕ್ಕಾ ಲೋಕಲ್‌ ಚಿತ್ತೂರಿನ  ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿರುವ ಕಾರಣ ಚಿತ್ತೂರಿನ  ಭಾಷೆ ಕಲಿಯುತ್ತಿದ್ದಾರಂತೆ. 

ಕರುನಾಡ ಕ್ರಶ್ ರಶ್ಮಿಕಾಗೆ ಟ್ವಿಟರ್‌ನಲ್ಲಿ 1 ಮಿಲಿಯನ್ ಫಾಲೋಯರ್ಸ್

ಇತ್ತೀಚಿಗೆ ರಶ್ಮಿಕಾ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಸಾಕು ನಾಯಿಗಳ ಜೊತೆ ಫೋಟೋ ಶೇರ್ ಮಾಡಿಕೊಂಡು 'StayHomeStaySafe' ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

 

 
 
 
 
 
 
 
 
 
 
 
 
 

When someone asks “How’s quarantine treating you?”

A post shared by Rashmika Mandanna (@rashmika_mandanna) on Apr 18, 2020 at 8:35am PDT