ಕನ್ನಡದ ಖ್ಯಾತ ರ್ಯಾಪರ್‌ಗಳಾದ ಆಲ್ ಓಕೆ ಮತ್ತು ರಾಹುಲ್ ಡಿಟೋ ಬಹಿರಂಗವಾಗಿಯೇ ಕಿತ್ತಾಡಿಕೊಳ್ಳುತ್ತಿದ್ದಾರೆ. ಆಲ್ ಓಕೆ ವಿರುದ್ಧ ರಾಹುಲ್ ಡಿಟೋ ಹೊಸ ರ್ಯಾಪ್ ಸಾಂಗ್ ಮಾಡಿದ್ದು ಆಲ್ ಓಕೆ ಬಣ್ಣ ಬಯಲು ಮಾಡಿದ್ದಾರೆ.
ಕನ್ನಡದ ಇಬ್ಬರೂ ಖ್ಯಾತ ರ್ಯಾಪರ್‌ಗಳು ಇದೀಗ ಬಹಿರಂಗವಾಗಿಯೇ ಕಿತ್ತಾಡುತ್ತಿದ್ದಾರೆ. ಕನ್ನಡದ ರ್ಯಾಪರ್ ಅಂದಾಗ ನೆನಪಾಗುವುದು ಆಲ್ ಓಕೆ, ಚಂದನ್ ಶೆಟ್ಟಿ, ರಾಹುಲ್ ಡಿಟೋ, ಎಂ ಸಿ ಬಿಜ್ಜು ಹೀಗೆ ಅನೇಕರ ಹೆಸರು ಬರುತ್ತೆ. ಎಲ್ಲರೂ ತಮ್ಮದೆ ಆದ ಅಭಿಮಾನಿಗಳನ್ನು ಹೊಂದಿದ್ದು ತಮ್ಮದೇ ಶೈಲಿಯ ರ್ಯಾಪ್ ಮೂಲಕ ಖ್ಯಾತಿಗಳಿಸಿದ್ದಾರೆ. ಪ್ರಾರಂಭದ ದಿನಗಳಲ್ಲಿ ಆಲ್ ಓಕೆ ಮತ್ತು ಚಂದನ್ ಶೆಟ್ಟಿ ನಡುವೆ ಕಿತ್ತಾಟ ಶುರುವಾಗಿತ್ತು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ಹಾವು ಮುಂಗುಸಿಯ ಹಾಗಿದ್ದ ಇಬ್ಬರೂ ನಿಧಾನಕ್ಕೆ ಮುನಿಸು ಮರೆತು ಒಂದಾಗಿದ್ದು ಇತಿಹಾಸ. ಇದೀಗ ಆಲ್ ಓಕೆ ಟೀಂನಲ್ಲೇ ಇದ್ದ ಮತ್ತೋರ್ವ ಖ್ಯಾತ ರ್ಯಾಪರ್ ರಾಹುಲ್ ಡಿಟೋ ಆಲ್ ಓಕೆ ವಿರುದ್ದ ಸಿಡಿದೆದ್ದಿದ್ದಾರೆ.
ಆಲ್ ಓಕೆ ವಿರುದ್ದ ಸಿಟ್ಟಿಗೆದ್ದಿರುವ ರಾಹುಲ್ ಡಿಟೋ ರ್ಯಾಪ್ ಮೂಲಕವೇ ಸರಿಯಾಗಿ ತರಾಟೆ ತೆಗೆದುಕೊಂಡಿದ್ದಾರೆ. 'ನಂಗನ್ಸಿದ್ದು' ಎನ್ನುವ ಟೈಟಲ್ ನಲ್ಲಿ ಹೊಸ ರ್ಯಾಪ್ ಮಾಡಿರುವ ರಾಹುಲ್ ಹಾಡಿನ ಮೂಲಕವೇ ಆಲ್ ಓಕೆಯ ಬಣ್ಣ ಬಟಾ ಬಯಲು ಮಾಡಿದ್ದಾರೆ. 'ಆಲ್ ಈಸ್ ನಾಟ್ ಓಕೆ' ಎಂದಿರುವ ರಾಹುಲ್, ' ಇದು ಕಥೆ ಅಲ್ಲ ಅವ್ನ್ ಜೀವ್ನ. ನಂಗನ್ಸಿದ್ದು, ನಾನ್ ಅನುಭವಿಸಿದ್ದು, ನಂಗೊತ್ತಿತು ALL NOT OK'ಎಂದು ಕ್ಯಾಪ್ಷನ್ ನೀಡಿ ಹಾಡನ್ನು ರಿಲೀಸ್ ಮಾಡಿದ್ದಾರೆ. ಸದ್ಯ ಈ ರ್ಯಾಪ್ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಪರ್ ಈಗ ಪಾಪರ್... ಕಂಡವರ ದುಡ್ಡಲ್ಲಿ ಜಾಲಿ ಮಾಡಿದವನಿಗೀಗ ಜೈಲೇ ಗತಿ
ರ್ಯಾಪ್ ಸಾಂಗ್ ನಲ್ಲಿ ಬರುವ ಪ್ರತಿಯೊಂದು ಸಾಲುಗಳು ಕೂಡ ಆಲ್ ಓಕೆ ಅವರಿಗೆ ಹೇಳಿದ್ದು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ನೀನು ಮಾಡಿದ್ದು ಡವ್, ನಮ್ಮನಮ್ಮೊಳಗೆ ಎಲ್ಲಾ ತಂದು ಇಟ್ಟೆ ಎಂದು ಆಲ್ ಓಕೆ ಅಸಲಿ ಮುಖ ಬಿಚ್ಚಿಟ್ಟಿದ್ದಾರೆ. ಯಾರು ಬೆಳೆಸಿದ್ದು ಅಲ್ಲ ಬೆಳೆದಿದ್ದು ಎಂದು ಆಲ್ ಓಕೆಗೆ ರ್ಯಾಪ್ ಮೂಲಕವೇ ಟಾಂಗ್ ನೀಡಿದ್ದಾರೆ. ಹಾಡಿನ ಲಾಭ ಕೂಡ ನನಗೆ ಬೇಡ ಅದನ್ನು ನೀನೆ ಇಟ್ಕೊ, ನೀನು ಮಾಡಿದ್ದು ಎಲ್ಲಾ ದೋಖ, ಶೆಟ್ಟಿನ ಕೆಳಗಿಳಿಸೋ ಪ್ಲಾನ್ ನಿಂದಾಗಿತ್ತು, ನಿನ್ನ ಕೈಯಲ್ಲಿ ಆಗಿಲ್ಲ ನಾನು ಬೇಕಾಗಿತ್ತು. ಅವತ್ತೆ ನಿನ್ನ ಯೋಗ್ಯತೆ ಗೊತ್ತಾಗಿತ್ತು' ಎಂದು ಹಾಡಿನ ಮೂಲಕವೇ ಸರಿಯಾಗಿ ತಿವಿದಿದ್ದಾರೆ.
Head Bush: Rahul Dit-O ರ‍್ಯಾಪ್ ಸಾಂಗ್‌ಗೆ ದಾವಣಗೆರೆ ಜನರು ಫಿದಾ
ನಿನ್ನ ಹತ್ರ ಇದ್ದಿದ್ದಕ್ಕೆ ನಿಮ್ಮ ಬಗ್ಗೆ ಗೊತ್ತಾಯಿತು. ಆಚೆ ಬಂದಿದ್ದಕ್ಕೆ ನನಗೆ ಒಳ್ಳೆದಾಗಿದೆ. ಮಾಡೋ ಕೆಲಸ ಎಲ್ಲಾ ಕಂತ್ರಿ. ರ್ಯಾಪ್ ಸಿಂಗ್ರಿ, ಡಬಲ್ ಗೇಮ್ ಆಡೋ ಡಿಂಗ್ರಿ ಎಂದು ಬೈದಿದ್ದಾರೆ. ಬಳಿಕ ಆಲ್ ಓಕೆ ಮತ್ತು ಚಂದನ್ ಇಬ್ಬರೂ ಒಂದಾದ ಬಳಿಕ ಒಟ್ಟಿಗೆ ಟಿವಿಯಲ್ಲಿ ಕಾಣಿಸಿಕೊಂಡ ಪೋಟೋವನ್ನು ತೋರಿಸಿ ಇಬ್ಬರಿಗೂ ಒಂದೇ ಕಲ್ಲಲ್ಲಿ ಹೊಡಬೇಕು ಅನ್ಕೊಂಡಿದ್ದೆ ಎಂದು ಹೇಳಿದ್ದಾರೆ. ಡಿಟೋ ಮಾಡಿರುವ ರ್ಯಾಪ್ ಕೋರ್ಟ್ ಕಾನ್ಸೆಪ್ಟ್ ನಲ್ಲಿ ಮೂಡಿ ಬಂದಿದೆ. ವಿಚಾರಣೆಗೆ ಬಂದಿರುವ ಡಿಟೋ ಆಲ್ ಓಕೆ ಬಗ್ಗೆ ರ್ಯಾಪ್ ಮೂಲಕವೇ ವಿವರಿಸುತ್ತಾರೆ. ಈ ರ್ಯಾಪ್ ಈಗ ವೈರಲ್ ಆಗಿದ್ದು ಮತ್ತೊಮ್ಮೆ ಇಬ್ಬರೂ ರ್ಯಾಪ್ ಸ್ಟಾರ್‌ಗಳು ಕಿತ್ತಾಟ ಬೀದಿಗೆ ಬಂದಿದೆ.

