ಸಿನಿಮಾ ಯಶಸ್ಸಿನ ವೇಳೆ ನಿರ್ಮಾಪಕರು ಕೊಡುವ ಗಿಫ್ಟ್‌ ಎಷ್ಟು ಮೌಲ್ಯ ಹೊಂದಿರುತ್ತದೆ ಎಂದು ಮಾತನಾಡಿದ ರಂಗಾಯಣ ರಘು...

ನಟ ಡಾಲಿ ಧನಂಜಯ್ (Dhananjay) ನಿರ್ದೇಶಿಸಿ ನಟಿಸಿರುವ ಬಡವರಾಸ್ಕಲ್ (Badava Rascal) ಸಿನಿಮಾ 50 ದಿನಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಆಚರಿಸಲು ಇಡೀ ತಂಡ ಸಕ್ಸಸ್‌ ಮೀಟ್ ಹಮ್ಮಿಕೊಂಡಿದ್ದು. ಬಡವರಾಸ್ಕಲ್ ತಂಡದ ಒಂದು ಮೊಮೆಂಟೋ ಮತ್ತು ಬೆಳ್ಳಿ ನಾಣ್ಯ (Silver Coin) ನೀಡಿ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ ಡಾಲಿ. ಈ ವೇಳೆ ಅಣ್ಣಾವ್ರ ಮನೆಯಿಂದ ಬಂದ ಬೆಳ್ಳಿ ಲೋಟಗಳ ಬಗ್ಗೆ ರಂಗಾಯಣ ರಘು ಅವರು ಮಾತನಾಡಿದ್ದಾರೆ.

ರಘು ಮಾತು:
'ಸಿನಿಮಾ ಮಾಡುವಾಗ ನಾನು ಪೂರ್ತಿ ನಿರ್ದೇಶಕರನ್ನು ನಂಬಿಯೇ ಕೆಲಸ ಮಾಡುವುದು. ಅವರು No No one more ಅಂತ ಹೇಳಿದ್ರೆ, ಮತ್ತೆ ನಾನು ಏನ್ ಹೇಳಿ? ನಿರ್ದೇಶಕರು ಏನು ಯೋಚನೆ ಮಾಡುತ್ತಾರೋ, ಅವರ ಚೌಕಟ್ಟಿನಲ್ಲಿ ಮಾತ್ರ ನಾನು ಕೆಲಸ ಮಾಡುವುದು.ಅದು ಬಿಟ್ಟು ಪಕ್ಕದ ಮನೆ, ಅಲ್ಲಿ ಇಲ್ಲಿ ಎಲ್ಲೂ ಹೋಗುವುದಿಲ್ಲ. ನಿರ್ದೇಶಕರು ಕಟ್ಟಿರುವ ಕನಸಿನಲ್ಲಿ ನಾನು ಕೆಲಸ ಮಾಡ್ತೀನಿ,' ಎಂದು ರಂಗಾಯಣ ರಘು (Rangayana Raghu) ಹೇಳಿದ್ದಾರೆ.

'ಒಂದು ಕಾಲಕ್ಕೆ ಪಾರ್ವತಮ್ಮ ರಾಜ್‌ಕುಮಾರ್ (Dr. Parvathamma Rajkumar) ಅವರು ಸಿನಿಮಾ ಯಶಸ್ವಿಯಾದಾಗ ಎಲ್ಲರನ್ನೂ ಕರೆದು ಒಂದು ಬೆಳ್ಳಿ ಲೋಟ ಕೊಡುತ್ತಿದ್ದರು. ಆ ಪರಂಪರೆಯನ್ನು ಧನು ಇವತ್ತು ಮಾಡಿದ್ದಾರೆ. ನನ್ನ ಮನೆಯಲ್ಲಿ ಈಗಲೂ ಆ ಮೂರು ಬೆಳ್ಳಿ ಲೋಟಗಳಿವೆ. ಅದು ಅಣ್ಣಾವ್ರ ಕಂಪನಿಯದ್ದೇ. ಈ ಯಶಸ್ಸಿಗೆ ನಾವು ಮಾತ್ರವಲ್ಲ, ನೀವೂ ಕಾರಣ. ಏಕೆಂದರೆ ಸಿನಿಮಾ ಚೆನ್ನಾಗಿ ಆಗಲೆಂದು ಆರಂಭದಲ್ಲಿಯೇ ಹೇಳುವುದೇ ನಮ್ಮ ವೀಕ್ಷಕರು,' ಎಂದು ರಂಗಾಯಣ ರಘು ಮಾತನಾಡಿದ್ದಾರೆ.

Badava Rascal Press Meet: ಕನ್ನಡ ಧ್ವಜ ಸುಟ್ಟವರ ವಿರುದ್ಧ ಆಕ್ರೋಶ ಹೊರ ಹಾಕಿದ ತಾರಾ-ರಂಗಾಯಣ ರಘು

'ಪ್ರತಿ ವರ್ಷವೂ ಡಾಲಿ ಪಿಚ್ಚರ್ಸ್‌ನಿಂದ (Daal pictures) ಒಂದು ಸಿನಿಮಾ ಮಾಡ್ಲಿ. ಒಂದಲ್ಲ ಎರಡು ಮೂರು ನಾಲ್ಕು ಮಾಡಲಿ. ಏಕೆಂದರೆ ತಮಿಳು ತೆಲುಗು ಹಾಲಿವುಡ್, ಬಾಲಿವುಡ್‌ ಯಾವುದ್ಯಾವುದೋ ಚಿತ್ರಗಳು ಕಾಯುತ್ತಿರುತ್ತವೆ. ಈ ಕನ್ನಡದ ಪ್ರತಿಭೆಗಳು ಎಲ್ಲಿಗೆ ಬೇಕಿದ್ದರೂ ಹೋಗಲಿ. ಈ ಡಾಲಿ ಪಿಚ್ಚರ್ಸ್‌ ಇರುವುದು ಸ್ನೇಹಿತರಿಗೆ ಎಂದು ಹೇಳಿದ್ದಾರೆ. ಇದು ಅವರಿಗೇ ಇರಲಿ. ಎಷ್ಟೋ ಸ್ನೇಹಿತರ ತಂಡ ಒಡೆದು ಹೋಗಿವೆ. ಆದರೆ ಈ ತಂಡ ಹೀಗೆ ಚೆನ್ನಾಗಿ ಇರಲಿ. ಕನ್ನಡ ಚಿತ್ರರಂಗದಲ್ಲಿ ಈಗ ಒಳ್ಳೆಯ ಸಿನಿಮಾಗಳು ಬರುತ್ತಿವೆ. ನಮಗೆ ಮದುವೆ (Unmarried actor) ಆಗದಿರುವ ದೊಡ್ಡ ಸ್ಟಾರ್ ಬೇಕಿತ್ತು. ಈಗ ಡಾಲಿ ಸಿಕ್ಕಿದ್ದಾನೆ. ತಂದೆ, ತಾಯಿ ಬಂಧು ಬಳಗ ಎಲ್ಲರನ್ನೂ ನೆನಪಿಸಿಕೊಂಡು, ಅವರಿಗಾಗಿಯೇ ಮಾಡಿರುವ ಕೌಟುಂಬಿಕ ಸಿನಿಮಾ ಇದು.' ಎಂದಿದ್ದಾರೆ ರಘು.

ಬಿ.ವಿಜಯ್ ಸಂಚಾರಿ ವಿಜಯ್ ಆಗಲು ಕಾರಣ ರಂಗಾಯಣ ರಘು ಪತ್ನಿ ಮಂಗಳಾ!

ಧನು ಮಾತು:
'ನಾನು ಸಿನಿಮಾ ಕ್ಷೇತ್ರಕ್ಕೆ ಬರುವುದಕ್ಕಿಂತ ಮುಂಚೆಯೂ ರಘು ಸರ್ ನನಗೆ ಪರಿಚಯ. ನನ್ನ ಜರ್ಮನ್ (German Friends) ಸ್ನೇಹಿತರ ಮೂಲಕ ಅವರನ್ನು ಒಮ್ಮೆ ಭೇಟಿ ಮಾಡಿದ್ದೆ. ಆಮೇಲೆ ನನ್ನ ಮೊದಲನೇ ಚಿತ್ರದಲ್ಲಿ ಅವರ ಜೊತೆ ನಟಿಸುವ ಅವಕಾಶ ಸಿಕ್ತು. ಆಮೇಲೆ ಬಾಕ್ಸರ್‌ನಲ್ಲಿ (Boxer) ಮಾಡಿದ್ದೀವಿ. ಬಡವರಾಸ್ಕಲ್ ಸಿನಿಮಾದಲ್ಲಿ ಮಾಡಬೇಕು, ಅಂತ ಬಂದಾಗ ಸರ್ ಸಿನಿಮಾ ಮಾಡ್ಬೇಕು, ನೀವು ಪೇಮೆಂಟ್ ಹಣ ಎಷ್ಟು ಏನು ಹೇಳಿ? ಅಂತ ಹೇಳಿದಾಗ ಧನು ನೀನು ಕಷ್ಟ ಪಟ್ಟು ಸಿನಿಮಾ ಮಾಡ್ತಿದ್ಯಾ. ನೀನು ಕಲಾವಿದ. ಚಿತ್ರೀಕರಣ ಮುಗಿಸಿ ಆಮೇಲೆ ನಿನ್ನ ಖುಷಿಗೆ ತಂದು ಕೊಡು ಅಂತ ಹೇಳಿದ್ರು. ಈಗಲೇ ಹೇಳ್ತಿದ್ದೀನಿ, ಬೇರೆ ಯಾರೂ ಹೀಗೆ ಮಾಡುವಂತಿಲ್ಲ. ಅವರ ಕಲಾವಿದರಿಗೆ ಆಮೇಲೆ ಕಷ್ಟ ಆಗುತ್ತದೆ,' ಎಂದು ಧನಂಜಯ್ ಮಾತನಾಡಿದ್ದಾರೆ.