Puneeth Rajkumar ಕುರಿತು 'ಯಾರೋ ನೀನು' ಹಾಡು ಬಿಡುಗಡೆ ಮಾಡಿದ Raghavendra Rajkumar!
ಅಪ್ಪು ನೆನಪಲ್ಲಿ ಹಾಡೊಂದನ್ನು ರಚಿಸಿ ರಿಲೀಸ್ ಮಾಡಿದ ರಾಜ್ ಕಿಶೋರ್. ಹಾಡು ರಿಲೀಸ್ ಮಾಡಿದ ರಾಘವೇಂದ್ರ ರಾಜ್‌ಕುಮಾರ್.....
ಕನ್ನಡ ಚಿತ್ರರಂಗದ (Sandalwood) ಪವರ್ ಸ್ಟಾರ್, ಯುವರತ್ನ, ಕರ್ನಾಟಕದ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ಎರಡು ತಿಂಗಳು ಕಳೆದರೂ ಅವರ ನೆನಪಿನಲ್ಲಿ ದಿನ ಕಳೆಯುತ್ತಿದ್ದೇವೆ. ಅಪ್ಪು ಇದ್ದಾಗಲೂ ಸ್ಟಾರ್ ಆಗಿದ್ದರು. ಹೋದ ಮೇಲೆ ಇನ್ನೂ ದೊಡ್ಡ ಸ್ಟಾರ್ ಆಗಿದ್ದಾರೆ. ಲಕ್ಷಾಂತರ ಜನರಿಗೆ ರೋಲ್ ಮಾಡೆಲ್ ಆಗಿರುವ ಪುನೀತ್ ಕುರಿತು ರಾಜ್ ಕಿಶೋರ್ (Raj Kishore) ಹಾಡು ಬರೆದಿದ್ದಾರೆ.
'ನನಗೆ ಇಂಥದ್ದೊಂದು ದಿನ ಬರುತ್ತದೆ ಎಂದು ಊಹಿಸಿಯೂ ಇರಲಿಲ್ಲ. ಅಪ್ಪು ಇದ್ದಾಗ ಅವನ ಅನೇಕ ಚಿತ್ರಗಳ ಆಡಿಯೋವನ್ನು ನಾನು ರಿಲೀಸ್ ಮಾಡಿದ್ದೀನಿ. ಆಗ ನನಗೆ ಬರೀ ಅಪ್ಪು ಮಾತ್ರ ಕಾಣುತ್ತಿದ್ದ. ಈಗ ಬಿಡುಗಡೆ ಮಾಡಿರುವ ಹಾಡಿನಲ್ಲಿ ಅವನ ಕೋಟಿ ಕೋಟಿ ಅಭಿಮಾನಿಗಳು ಕಾಣಿಸುತ್ತಿದ್ದಾರೆ. ಇಲ್ಲಿ ಯಾರೂ ಯಾರ ಜಾಗವನ್ನೂ ತುಂಬುವುದಕ್ಕೆ ಆಗೋಲ್ಲ. ಅಪ್ಪು ಜಾಗವನ್ನೂ ಯಾರಿಂದೂ ತುಂಬಲು ಆಗೋಲ್ಲ. ಅಪ್ಪುನ ಮನಸ್ಸು ತುಂಬಾ ತುಂಬಿಕೊಂಡು ಹೊಸ ವರ್ಷ ಶುರು ಮಾಡೋಣ. ನಿಮ್ಮೆಲ್ಲನ್ನು ನಾನು ಅಳಿಸಿಕೊಂಡು, ಮುಂದಕ್ಕೆ ಕರೆದುಕೊಂಡು ಹೋಗಬಾರದು. ಮುಂದಕ್ಕೆ ಒಂದು ದಿನ ಬದಲಾವಣೆ ಬರುತ್ತೆ, ಯಾವುದೋ ಒಂದು ರಾಜ್ಯದಲ್ಲಿ (State) ಒಬ್ಬ ಮನುಷ್ಯನಿಂದ ಇಷ್ಟೊಂದು ಬದಲಾವಣೆ ಆಯ್ತು ಅಂತ. ಅಭಿಮಾನಿಗಳಿಗೆ ಆ ಹೆಸರು ತಂದು ಕೊಡೋಣ. ಆಗ ನಿಜವಾಗಲ್ಲೂ ಅಪ್ಪು ಬದುಕಿ ಬರುತ್ತಾನೆ.ಎಲ್ಲರಿಗೂ ಸೇವೆ ಮಾಡಿ ಬಂದು ಹೋಗುವಂಥ ಆತ್ಮಗಳಿವು. ಎರಡು ತಿಂಗಳಾದರೂ ಜನ ಬರ್ತಿದ್ದಾರೆ. ಎಷ್ಟು ದುಡ್ಡು (Money) ಹಾಕಿ ಮಾಡ್ತಿದ್ದಾರೆ. ಅದಲ್ಲ ಎಷ್ಟು ಸಮಯ ಕೊಟ್ಟಿದ್ದಾರೆ ಅದು ಮುಖ್ಯ. ಮನುಷ್ಯ ಏನ್ ಬೇಕಿದ್ದರೂ ಕೊಡಬಹುದು. ಆದರೆ ಸಮಯ ಕೊಡುವುದಕ್ಕೆ ಆಗಲ್ಲ. ಅದು ತಾಯಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರೂ ಅಪ್ಪುಗೆ ತಾಯಿ ಅಗಿದ್ದಾರೆ,' ಎಂದು ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಮಾತನಾಡಿದ್ದಾರೆ.
'ಯಾರೋ ನೀನು (Yaaro Nenu) ಅನ್ನುವ ಟೈಟಲ್ ಇದೆಯಲ್ವಾ ಅಪ್ಪು ಅವರು ನಮ್ಮನ್ನು ಬಿಟ್ಟು ಹೋದ ತಕ್ಷಣ ಕಂಠೀರವ ಸ್ಟೇಡಿಯಮ್‌ನಲ್ಲಿ (kanteerava stadium) ಇಡುತ್ತಾರೆ. ಅಲ್ಲಿ ಹಿಂದುಗಡೆ ಕೂತ್ಕೊಂಡೆ ಸ್ವಲ್ಪ ಹೊತ್ತು ನನ್ನಗೆ ಬಂದಂತೆ ಲಿರೀಕ್ಸ್ ಮತ್ತು ಸಾಂಗ್ ಇದೇನೆ. ಅಪ್ಪು ಚಿತ್ರದ್ದೇ ಯಾರೋ ನೀನು ಯಾರೋ ನೀನು ಅಂತ. ಒಬ್ಬ ವ್ಯಕ್ತಿ ಮುಚ್ಚಿಟ್ಟು ಸೇವೆ ಮಾಡ್ಬೇಕು ಅಂದ್ರೆ ಯಾರಿಗೆ ಬರುತ್ತೆ ಹೇಳಿ? ತೀರ್ಥ ಯಾತ್ರೆ ಹೋಗುವವರಿಗೆ ಬರುತ್ತೆ ಈ ವಯಸ್ಸಿನಲ್ಲಿ ಯಾರಿಗೆ ಬರುತ್ತೆ?' ಎಂದಿದ್ದಾರೆ ರಾಘಣ್ಣ.
Mysuru: ಇರುಮುಡಿ ಹೊತ್ತ ಪುನೀತ್ ಫೋಟೋ ಜೊತೆ ಚಾಮುಂಡೇಶ್ವರಿ ದರ್ಶನ ಪಡೆದ ಅಯ್ಯಪ್ಪ ಭಕ್ತರು'ಅಪ್ಪು ಇನ್ನೊಂದು ಸಂದೇಶ ಕೊಟ್ಟಿದ್ದಾರೆ. ಅಪ್ಪು ಅಂದ್ರೆ ಸೇವೆ ಮಾಡಿದವರು ಅಂತ ಒಂದೇ ಅಲ್ಲ. ಆ ಸೇವೆ ಹೇಗೆ ಮಾಡ್ತಾ ಬಂದಿದ್ದಾರೆ ಅಂತ. ಕಷ್ಟ ಪಟ್ಟು ಸೇವೆ ಮಾಡಿ, ಅಂತ ಹೇಳಿಲ್ಲ. ಮನೆ ಮಾರಿ ಸೇವೆ ಮಾಡಿ ಅಂತ ಹೇಳಿಲ್ಲ. ಅವ್ರು ಚೆನ್ನಾಗಿ ಸಂಪಾದನೆ ಮಾಡಿದ್ದಾರೆ. ಏನಕ್ಕೆ ಸಂಪಾದನೆ ಮಾಡಿದ್ದರು? ನಾನು ಕೊಡಬೇಕು ಅಂದ್ರೆ ಇರಬೇಕು ಅಂತ. ಸಿನಿಮಾ (Films) ಮಾಡಿದ್ದರು. ರಿಯಾಲಿಟಿ ಶೋ (Reality Show) ಮಾಡಿದ್ದರು. ಜಾಹೀರಾತು (Advertisments) ಮಾಡಿದ್ದರು. ಎಲ್ಲಾ ಸೇವೆಯಲ್ಲಿ ತೊಡಗಿಸಿಕೊಂಡರು. ಇಷ್ಟವಾದ ಕಾರು (Car) ತೆಗೆದುಕೊಂಡ್ಡರು, ಮನೆ (House) ಮಾಡಿಕೊಂಡ್ಡರು ಹೆಂಡ್ತಿ ಮಕ್ಕಳನ್ನು ಚೆನ್ನಾಗಿ ನೋಡ್ಕೊಂಡ್ರು. ಮಗಳನ್ನ ಫಾರಿನ್‌ಗೆ ಕಳುಹಿಸಿಕೊಟ್ಟರು, ಹೆಣ್ಣುಮಕ್ಕಳು ಚೆನ್ನಾಗಿ ಓದಬೇಕು ಅಂತ. ದುಃಖ ಪಟ್ಕೊಂಡು ಕೊಡಿ ಅಂತ ಅಪ್ಪು ಹೇಳಿಲ್ಲ. ಇಷ್ಟ ಪಡ್ಕೊಂಡು ಕೊಡಿ ಅಂತ ಹೇಳಿದ್ದಾರೆ,' ಎಂದು ಹೇಳಿದ್ದಾರೆ.
ನಟಿ ಮಾಲಾಶ್ರೀಗೆ Puneeth Rajkumar ಧೈರ್ಯ ಹೇಳಿ, ಆಡಿದ ಕಡೇ ಮಾತುಗಳಿವು!'ಒಬ್ಬ ನಾಯಕನ ಚಿತ್ರಕ್ಕೂ ಹುಟ್ಟುಹಬ್ಬ ಅಥವಾ ಮತ್ತಾವುದೋ ಸಂದರ್ಭಕ್ಕೋ ಹಾಡು ಬರೆದು ಬಿಡುಗಡೆ ಮಾಡುವುದು ಬೇರೆ. ಈ ಸಂದರ್ಭ ಬೇರೆ. ಅವರ ಮನೆಯವರು ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ದುಃಖ ಆಗಿದೆ. ಈ ಊರೂ ಈ ದೇಶ ಮಾತ್ರವಲ್ಲ. ಹೊರದೇಶಗಳಲ್ಲೂ ಇವರ ಸಾವಿಗೆ ನಮ್ಮವರನ್ನು ಕಳೆದುಕೊಂಡಿದ್ದೀನಿ ಅಂತ ದುಃಖ ಪಡುತ್ತಿದ್ದಾರೆ. ನಾನು ಹಾಡು ಬರೆಯಲು ಪ್ರಮುಖ ಕಾರಣವೇ ಇದು,' ಎಂದು ರಾಜ್ ಕಿಶೋರ್ ಹೇಳಿದ್ದಾರೆ.