ಸ್ಯಾಂಡಲ್‌ವುಡ್‌ ರಾಕಿಂಗ್ ಕಪಲ್ ಏನೇ ಮಾಡಿದರೂ ತುಂಬಾನೇ ಡಿಫರೆಂಟ್ ಆಗಿ ಮಾಡುತ್ತಾರೆ.  ಫನ್ ವರ್ಲ್ಡ್‌ನಲ್ಲಿ ಅದ್ಧೂರಿ ಸೆಟ್‌ ಹಾಕಿ ಮಗಳು ಐರಾ ಹುಟ್ಟುಹಬ್ಬ ಆಚರಿಸಿದರೆ, ಗೋವಾ ಬೀಚ್‌ನ ದೋಣೆಯೊಂದರಲ್ಲಿ ಯಥರ್ವ್‌ ಹುಟ್ಟುಹಬ್ಬ ಆಚರಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ರಾಧಿಕಾ ಪಂಡಿತ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಜೂನಿಯರ್ ಯಶ್‌ಗೆ 1 ವರ್ಷ; ಯಥರ್ವ್‌ ಫೋಟೋ ಶೇರ್ ಮಾಡಿದ ರಾಧಿಕಾ! 

ವೈಟ್‌ ಆ್ಯಂಡ್ ಬ್ಲೂ ಥೀಮ್‌ನಲ್ಲಿ ಯಥರ್ವ್‌ ಬರ್ತಡೇ ಮಾಡಲಾಗಿತ್ತು. ಬಾಸ್‌ ಬೇಬಿ ರೀತಿಯಲ್ಲಿ ಕೇಕ್‌ ಮಾಡಿಸಲಾಗಿದ್ದು, ರಾಧಿಕಾ ತಂದೆ-ತಾಯಿ ಮಾತ್ರ ಸೆಲೆಬ್ರೇಷನ್‌ನಲ್ಲಿ ಭಾಗಿಯಾಗಿದ್ದರು. ವಿಶೇಷ ಏನೆಂದರೆ ರಾಧಿಕಾ ಹಾಗೂ ಮಗಳು ಐರಾ ಒಂದೇ ರೀತಿ ಭಟ್ಟೆ ಧರಿಸಿದ್ದರು. 

 

ಇನ್ನು ರಾಕಿಂಗ್ ಕಪಲ್‌ಗೆ ಗೋವಾ ತುಂಬಾ ಸ್ಪೆಷಲ್. ಗೋವಾ ರಾಧಿಕಾ ಹುಟ್ಟೂರೂ ಹೌದು. ಇಬ್ಬರ ನಿಶ್ಚಿತಾರ್ಥವೂ ಅಲ್ಲಿಯೇ ನೆರವೇರಿತ್ತು. ಈಗ ಪುತ್ರನ ಮೊದಲ ಹುಟ್ಟುಹಬ್ಬವನ್ನು ಅಲ್ಲಿಯೇ ಆಚರಿಸಿದ್ದಾರೆ. ಕೊರೋನಾ ಕಾಟದಿಂದ ನಾಮಕರಣವನ್ನು ಹಾಸನದ ತೋಟದ ಮನೆಯಲ್ಲಿ ಸರಳವಾಗಿ ಆಚರಣೆ ಮಾಡಲಾಗಿತ್ತು, ವೈರಸ್‌ ಸೋಂಕು ಹೆಚ್ಚಾಗುತ್ತಿದ್ದ ಕಾರಣ ಹುಟ್ಟುಹಬ್ಬವನ್ನು ಪ್ರೈವೇಟ್‌ ಆಗಿ ಮಾಡಲಾಗಿದೆ.  ಇಲ್ಲದಿದ್ದರೆ ಎಲ್ಲ ಆಪ್ತ ಗೆಳೆಯರು ಬಂಧು-ಭಾಂದವರನ್ನು ಕರೆದು ಸಂಭ್ರಮಿಸಲಾಗುತ್ತಿತ್ತು. 

ಮಗಳು ಅಂದ್ರೆ ಜೀವ ಬಿಡ್ತಾರೆ ಸ್ಯಾಂಡಲ್‌ವುಡ್‌ನ ಯಶ್, ಸುದೀಪ್! 

ರಾಧಿಕಾ ಪಂಡಿತ್ ಶೇರ್ ಮಾಡಿರುವ ವಿಡಿಯೋಗೆ ಎಲ್ಲಾ ತಾರಾ ಬಳಗದವರು, ಗೆಳೆಯರು ಹಾಗೂ ಅಭಿಮಾನಿಗಳು ಕಾಮೆಂಟ್‌ ಮಾಡುವ ಮೂಲಕ ವಿಶ್ ಮಾಡಿದ್ದಾರೆ.