' ನಾನು ಪ್ರೆಗ್ನೆಂಟ್ ಅನ್ನೋ ಗುಡ್ ನ್ಯೂಸ್ ಗೊತ್ತಾದಾಗ ತೆಗೆದ ಬಾಯಿಗೆ ಯಶ್ ಹೇಳಿದ್ದು, ನಮ್ಗೆ ಮಗಳು ಬರ್ತಾಳೆ ಅಂತ. ಯಶ್ ಗೆ ಮಗಳು ಅಂದ್ರೆ ಜೀವ..' 

ಹೀಗಂದಿದ್ದು ರಾಧಿಕಾ ಪಂಡಿತ್. ರಾಧಿಕಾ, ಯಶ್ ಸ್ಟಾರ್ ದಂಪತಿಗೆ ಈಗ ಇಬ್ಬರು ಮುದ್ದಿನ ಮಕ್ಕಳು. ಮೊದಲ ಮಗಳು ಐರಾ ಹಾಗೂ ಮಗ ಯಥರ್ವ ರಿಂದ ಕೂಡಿದ ತುಂಬು‌ ಖುಷಿಯ ಕುಟುಂಬ ಇವರದು. ಆದ್ರೆ ಯಶ್ ರಾಧಿಕಾ ಮಕ್ಕಳ ಜೊತೆಗೆ ಎಲ್ಲೇ ಔಟಿಂಗ್ ಹೋದರೂ ಅಪ್ಪನಿಗೆ ಖಾಯಂ ಕಂಪೆನಿ ಕೊಡೋದು ಐರಾ. ಅಪ್ಪನ ಜೊತೆ ಸೇರ್ಕೊಂಡು ಅಮ್ಮ ರಾಧಿಕಾ ಒಂದೊಂದು ಗಂಟೆ ಸೆಲ್ಫಿಗಾಗಿ ಒದ್ದಾಡೋದನ್ನು ಶೂಟ್ ಮಾಡಿ ತರಲೆ ಮಾಡೋ ಮುದ್ದು ಬಂಗಾರಿ. ಅಪ್ಪ ಯಶ್ಗೆ ಮುಖ, ಗಡ್ಡಕ್ಕೆಲ್ಲ ತಿಂಡಿ ತಿನ್ನಿಸ್ತಾ, ತಿನ್ನದಿದ್ರೆ ಆವಾಜ್‌ ಹಾಕಿ ತಿನ್ನಿಸೋ ಧೀರೆ. ಆದ್ರೆ ಐಸ್ ಕ್ರೀಮ್ ವಿಚಾರಕ್ಕೆ ಬಂದ್ರೆ ಮಾತ್ರ ಪಕ್ಕಾ ಕಂಜೂಸ್ ಈ ಮಗಳು. ಅಪ್ಪ ಗೋಗರೆದರೂ ಬೇಡಿಕೊಂಡರೂ ಐಸ್ ಕ್ರೀಂ ಅನ್ನು ಅಪ್ಪಂಗೆ ತೋರಿಸಿ ತಾನೇ ಬಾಯಿಗೆ ಹಾಕ್ಕೊಳ್ಳೋ ಜಾಣೆ. ಹೀಗೆ ಅಪ್ಪ ಯಶ್ ಹಾಗೂ ಮಗಳು ಐರಾ ಲೈಫ್ ಸಖತ್ ಖುಷಿ ಖುಷಿಯಿಂದ ಸಾಗ್ತಾ ಇದೆ. 

"

ಮಗಳು ಐರಾಗೆ ಯಾವ ಫುಡ್ ಇಷ್ಟ? ವಿಡಿಯೋ ಶೇರ್ ಮಾಡಿ ಯಶ್ ...

ಸುದೀಪ್ - ಸಾನ್ವಿ ಎಂಬ ಜೀವದ ಅಪ್ಪ ಮಗಳು
ನೆನ್ನೆ ಮೊನ್ನೆ ಇದ್ದ ಹಾಗಿದೆ,
ಹೇಗಪ್ಪಾ ನಂಬೋದು..
ನನ್ನ ಮಗಳೀಗ ,ಹದಿನಾರು ವರುಷ.
ನೀ ಇಟ್ಟ ಅಂಬೆಗಾಲು,
ಮುದ್ದಾದ ಮೊದಲುಗಳು,
ಕೂಡಿಟ್ಟಿರುವೆ ನಾ, ಒಂದೊಂದು ನಿಮಿಷ.
ಎದೆಯೆತ್ತರ ಬೆಳೆದಿರೋ ಕನಸು ನೀನು
ನಿನ್ನಿಂದಲೇ ಕಲಿಯುವ ಕೂಸು ನಾನು
ಆಸೆಬುರುಕ ಅಪ್ಪ ನಾನು
ಮತ್ತೆ ಮಗುವಾಗು ನೀನು.

ಯಶ್‌ಗೆ ಐರಾ ಐಸ್‌ಕ್ರೀಂ ತಿನ್ಸೋದು ನೋಡಿ..! ವಿಡಿಯೋ ವೈರಲ್ 

ಈ ಸಾಲುಗಳೇ ಸಾಕಲ್ವಾ ಮಗಳು ಸಾನ್ವಿಯ ಬಗ್ಗೆ ಅಪ್ಪ ಸುದೀಪ್ ಗಿರುವ ಪ್ರೀತಿಯನ್ನು ತೋರಿಸಲು. ವರ್ಷಗಳ ಕೆಳಗೆ ಒಂದು ಘಟನೆ ಆಯ್ತು. ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ರಾಧಾಕೃಷ್ಣನ್ ನಡುವೆ ವಿರಸ ಹೆಚ್ಚಾಗಿ, ಪ್ರಿಯಾ ಡಿವೋರ್ಸ್ ಗೆ ಅಪ್ಲೈ ಮಾಡಿ ಕೋರ್ಟ್ ಮೆಟ್ಟಿಲೇರಿದರು. ಆಯ್ತು, ಕಿಚ್ಚ ಸುದೀಪ್ ಸಂಸಾರ ಒಡೆದೇ ಹೋಯ್ತು ಅಂತ ಎಲ್ರೂ ಭಾವಿಸೋ ಹೊತ್ತಿಗೆ ದಂಪತಿ ಮತ್ತೆ ಒಂದಾದ್ರು. ಆಮೇಲೆ ಅವರ ನಡುವೆ ಅಂಥಾ ಒಡಕು ಬರಲಿಲ್ಲ. ಆದ್ರೆ ಇಲ್ಲಿ ಅಪ್ಪ‌, ಅಮ್ಮನ್ನ ಮತ್ತೆ ಒಂದು ಮಾಡಿಸಿದ ಕೀರ್ತಿ ಸಾನ್ವಿಗೆ ಸಲ್ಲುತ್ತದೆ. ಅವತ್ತು ಇವಳು ಅಪ್ಪ ಬೇಕು ಅಂತ ಹಠ ಹಿಡಿದ ಕಾರಣ, ಸುದೀಪ್ ಗೂ ಮಗಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಅನಿಸಿದ ಕಾರಣ, ಪ್ರಿಯಾಗೂ ಮಗಳು ಅಪ್ಪನ್ನು ಬೇರೆ ಮಾಡೋದು ತಪ್ಪು ಅನಿಸಿದ ಕಾರಣ ಅಪ್ಪ‌ ಮಗಳು ಮತ್ತೆ ಒಂದಾದರು. ಒಡೆದು ಚೂರಾಗಿ ಹೋಗಬೇಕಿದ್ದ ಸಂಸಾರವನ್ನು ಪುಟ್ಟ ಮಗಳು ಒಂದುಗೂಡಿಸಿದಳು. ತಾನೆಲ್ಲೇ ಹೋದ್ರೂ ಸುದೀಪ್ ಮಗಳ ಬಗ್ಗೆ ಹೇಳ್ತಾನೇ ಇರ್ತಾರೆ. ಅವತ್ತು ಬಿಗ್ ಬಾಸ್ ಶೋ ದಲ್ಲಿ ರವಿ ಅವ್ರಿಗೆ ಇನ್ನೊಬ್ಬ ಸ್ಪರ್ಧಿ ಹೊಡೆದಾಗ ರವಿ ಅವರ ಮಗಳು ಅತ್ತಾಗ ಸಮಾಧಾನಿಸಿದ್ದು ಕಿಚ್ಚ ಸುದೀಪ್. ಆಗ ಅವರಂದ ಮಾತು, 'ನನಗೂ ಮಗಳಿದ್ದಾಳೆ. ಕಣ್ಮುಂದೆಯೇ ತನ್ನ  ಹೀರೋ ಥರ ಇರೋ ಅಪ್ಪನಿಗೆ ಯಾರೋ ಹೊಡೆದಾಗ ಮಗುವಿಗೆ ಹೇಗಾಗಬಹುದು ಅನ್ನೋದರ ಅರಿವು ನನಗಿದೆ.. ' ಕಿಚ್ಚನ‌ ಈ ಮಾತು‌ ಎಂಥಾ ಕಲ್ಲು ಹೃದಯವನ್ನೂ ಆರ್ದ್ರಗೊಳಿಸೋ ಹಾಗಿತ್ತು. 

ಯಥರ್ವ ಬರೋ ತನಕ ಯಶ್ ಹವಾ, ಮಗ ಬಂದ್ಮೇಲೇ ಬರೀ ಅವನದ್ದೇ ಹವಾ!