ರಾಕಿಂಗ್ ದಂಪತಿಯ ಪುತ್ರನಿಗೆ ಒಂದು ವರ್ಷದ ಸಂಭ್ರಮ. ರಾಧಿಕಾ ಪಂಡಿತ್ ಶೇರ್ ಮಾಡಿದ ಅಪರೂಪದ ಫೋಟೋಗಳು ನೋಡಿ...

ಸ್ಯಾಂಡಲ್‌ವುಡ್‌ ರಾಕಿಂಗ್ ಕಪಲ್‌ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರ ಯಥರ್ವ್‌ ಯಶ್‌ ಮೊದಲ ಹುಟ್ಟು ಹಬ್ಬದ ಸಂಭ್ರಮವಿದು. ಈಗಾಗಲೇ ಸೋಷಿಯಲ್ ಮೀಡಿಯಾ ಸ್ಟಾರ್ ಕಿಡ್‌ ಆಗಿರುವ ಯಥರ್ವ್‌ಗೆ ನೆಟ್ಟಿಗರು ಶುಭ ಹಾರೈಸುತ್ತಿದ್ದಾರೆ.

ಮಗಳು ಅಂದ್ರೆ ಜೀವ ಬಿಡ್ತಾರೆ ಸ್ಯಾಂಡಲ್‌ವುಡ್‌ನ ಯಶ್, ಸುದೀಪ್! 

ರಾಧಿಕಾ ವಿಶ್:
ಪುತ್ರ ಹುಟ್ಟಿದ ಗಳಿಗೆಯಿಂದ ಈಗಿನ ಫೋಟೋವರೆಗೂ ಶೇರ್ ಮಾಡಿಕೊಂಡ ರಾಧಿಕಾ, 'ಹ್ಯಾಪಿ ಬರ್ತಡೇ ಲಿಟಲ್ ಒನ್. ಎಂದೆಂದಿಗೂ ನೀನು ನನ್ನ ಬೇಬಿ ಬಾಯ್. ಲವ್ ಯೂ,' ಎಂದು ಬರೆದುಕೊಂಡಿದ್ದಾರೆ. ರಾಧಿಕಾ ಅಪ್ಲೋಡ್ ಮಾಡಿರುವ ಫೋಟೋಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಫ್ಯಾನ್‌ ಪೇಜ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. 

View post on Instagram

ಏನೇ ಮಾಡಿದರೂ ಸಿಕ್ಕಾಪಟ್ಟೆ ಡಿಫರೆಂಟ್ ಹಾಗೂ ಕ್ರಿಯೇಟಿವ್ ಆಗಿ ಮಾಡುವ ರಾಕಿಂಗ್ ಜೋಡಿ, ಹೇಗೆ ಪುತ್ರನ ಬರ್ತಡೇ ಸೆಲೆಬ್ರೇಟ್ ಮಾಡುತ್ತಿದ್ದಾರೆ ಎಂದು ತಿಳಿಯಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂನಲ್ಲಿ ಮಕ್ಕಳ ಬಗ್ಗೆ ಅಪ್ಡೇಟ್ ನೀಡಲುತ್ತಲೇ ಇರುತ್ತಾರೆ. ಆದರೆ ರಾಖಿ ಬಾಯ್ ಹಾಗಲ್ಲ, ಲೇಟ್‌ ಆಗಿ ಶೇರ್ ಮಾಡಿದರೂ ಲೇಟೇಸ್ಟ್ ಆಗಿ ಮಾಡಿರುತ್ತಾರೆ.

ಯಥರ್ವ ಬರೋ ತನಕ ಯಶ್ ಹವಾ, ಮಗ ಬಂದ್ಮೇಲೇ ಬರೀ ಅವನದ್ದೇ ಹವಾ!

ಇತ್ತೀಚಿಗೆ ಮಗಳ ಜೊತೆ ಖಾಸಗಿ ಹೊಟೇಲ್‌ನಲ್ಲಿ ಸೆರೆ ಹಿಡಿದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಐರಾಗೆ ಐಸ್‌ ಕ್ರೀಮ್ ಅಂದ್ರೆ ತುಂಬಾನೇ ಇಷ್ಟವಾಗಿದೆ ಎಂದೆನಿಸುತ್ತದೆ. ಅಪ್ಪನಿಗೆ ಆಸೆ ತೋರಿಸಿ ತಾನೇ ತಿನ್ನುತ್ತಾಳೆ. ವಿಡಿಯೋ ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು.