Puneeth Rajkumar fan: ಸಮಾಧಿ ನೋಡಲು ಧಾರವಾಡ ದಾಕ್ಷಾಯಣಿ ಮ್ಯಾರಥಾನ್!
ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಪೂಜೆ ಮಾಡಲು ಧಾರವಾಡದಿಂದ 13 ದಿನಗಳ ಕಾಲ ಓಡಿಕೊಂಡೇ ಬಂದ ಅಭಿಮಾನಿ ದಾಕ್ಷಾಯಿಣಿ....
ಕನ್ನಡ ಚಿತ್ರರಂಗದ ಮುತ್ತುರತ್ನ, ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ತಿಂಗಳಾಯಿತು. ಅಪ್ಪು ನಮ್ಮೊಟ್ಟಿಗೆ ಇಲ್ಲ ಅಂದುಕೊಂಡು ಜೀವನ ನಡೆಸುವುದಕ್ಕಿಂತ, ಇದ್ದಾರೆ.. ಎಲ್ಲಿಯೋ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ, ಎನ್ನುವ ಭಾವನೆಯಲ್ಲಿಯೇ ಕುಟುಂಬಸ್ಥರು ಮತ್ತು ಅಭಿಮಾನಿಗಳು ದಿನ ಕಳೆಯುತ್ತಿದ್ದಾರೆ. ಅಪ್ಪು ಹಾದಿಯಲ್ಲಿ ಸಾಗಬೇಕು ಎಂದು ಅದೆಷ್ಟೋ ಮಂದು ಸಮಾಜ ಸೇವೆಗೆ (Social Work) ತಮ್ಮ ಜೀವನವನ್ನೇ ಮುಡಿಪಾಗಿಡಲು ಮುಂದಾಗಿದ್ದಾರೆ. ಅಪ್ಪು ಅಭಿಮಾನಿಗಳ ಸ್ವತ್ತು ಎಂದು ಹೇಳಿದ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಪ್ರತಿಯೊಬ್ಬ ಫ್ಯಾನ್‌ಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಬಾಗಲಕೋಟೆಯಿಂದ (Bagalakote) ಬೆಂಗಳೂರಿಗೆ ಅಭಿಮಾನಿಯೊಬ್ಬರು ಸೈಕಲ್ ಸವಾರಿ (Cycle) ಮಾಡಿಕೊಂಡು, ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಇದೀಗ ಅಪ್ಪು ಧಾರವಾಡದ ಅಭಿಮಾನಿ ದಾಕ್ಷಾಯಿಣಿ ಅವರು ಮತ್ತೊಂದು ದಾಖಲೆ ಮಾಡಿದ್ದಾರೆ. ಒಟ್ಟು 13 ದಿನಗಳ ಕಾಲ ಓಡುತ್ತಲೇ, ಬೆಂಗಳೂರು (Bengaluru) ತಲುಪಲಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಮೂರು ಮಕ್ಕಳ ತಾಯಿ ದಾಕ್ಷಾಯಿಣಿ ಈ ಸಾಹಸಕ್ಕೆ ಕೈ ಹಾಕಲು ಕಾರಣವೇನು ಎಂದು ತಿಳಿಸಿದ್ದಾರೆ.
Tributes to Puneeth Rajkumar: ಅನ್ನದಾನ, ನೇತ್ರದಾನ ಮಾಡಿದ ಬಾಗಲಕೋಟೆ ಫ್ಯಾನ್ಸ್'ಮನಗುಂಡಿಯಿಂದ (Managundi) ಬೆಂಗಳೂರಿನವರೆಗೂ ನಾನು ಓಡಿಕೊಂಡು, ನಡೆದುಕೊಂಡೇ ಹೋಗುತ್ತಿರುವೆ. ದಾರಿಯಲ್ಲಿ ಜನರಿಗೆ ನಾನು ನೇತ್ರದಾನ (Eye donation) ಮತ್ತು ರಕ್ತದಾನದ (Blood Donation) ಮಹತ್ವವನ್ನು ಸಾರುವೆ. ಇದು ಒಟ್ಟು 13 ದಿನಗಳ ಪ್ಲಾನ್ ಆಗಿದ್ದು, ದಾರಿಯಲ್ಲಿ ಸಿಗುವ ಎಲ್ಲಾ ಊರುಗಳಲ್ಲೂ ಸ್ಟಾಪ್ ಮಾಡಿಕೊಂಡು ಹೋಗುತ್ತೇವೆ. ನಾನು ಪುನೀತ್ ಅವರ ಎಷ್ಟು ದೊಡ್ಡ ಅಭಿಮಾನಿ ಎಂದು ಹೇಳಿಕೊಳ್ಳಲು ಅಗುವುದಿಲ್ಲ. ಅವರನ್ನು ರಿಯಲ್ ಆಗಿ ನೋಡಬೇಕಿತ್ತು. ಅದು ಅಗಲೇ ಇಲ್ಲ. ಈ ಕಾರಣಕ್ಕೆ ನಾನು ಸಮಾಧಿಯಾದರೂ ನೋಡಬೇಕು, ಎಂದು ಹೊರಟಿರುವೆ...' ಎಂದು ದಾಕ್ಷಾಯಿಣಿ ಮಾತನಾಡಿದ್ದಾರೆ.
'ಈ ನಿರ್ಧಾರಕ್ಕೆ ನಮ್ಮ ಮನೆಯವರು, ಮನಗುಂಡಿ ಗ್ರಾಮಪಂಚಾಯಿತಿ ಅವರು ಎಲ್ಲರೂ ಸಾಥ್ ಕೊಟ್ಟಿದ್ದಾರೆ. ಅವರ ಆಶೀರ್ವಾದಿಂದ ನಾನು ಹೀಗೆ ಹೋಗುತ್ತಿರುವೆ,' ಎಂದಿದ್ದಾರೆ. ದಾಕ್ಷಾಯಿಣಿ ಅವರ ಮೂರನೇ ಮಗುವಿಗೆ ಇನ್ನೂ 11 ತಿಂಗಳಷ್ಟೆ. ಈ ಸಮಯದಲ್ಲಿ ಮಗುವನ್ನು ಬಿಟ್ಟು ಇಂಥ ಸಾಹಸದ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ (Social Media) ಅಪ್ಪು ಅಭಿಮಾನಿಗಳು ಬೆಂಬಲ ನೀಡಿದ್ದಾರೆ.
ಅಶ್ವಿನಿ ಪುನೀತ್ ಅವರ ಬೆಲೆ ಕಟ್ಟಲಾಗದ ನಗು ನೋಡೋದ್ ಯಾವಾಗಪ್ಪ?: ಒಳ್ಳೆ ಹುಡುಗ ಪ್ರಥಮ್'ಪತ್ನಿ ನಿರ್ಧಾರ ಮಾಡಿದ್ದಾರೆ. ಅವರಿಗೆ ನಾವು ಸಾಥ್ ಕೊಡುತ್ತೇವೆ. 13 ದಿನಗಳ ಪ್ಲಾನ್ ಇದು. ಅವರು ಜೊತೆ ನಾವು ಇರುತ್ತೇವೆ. ಸುಸ್ತು ಆದರೆ ಮಾತ್ರ ಅಲ್ಲಿ ಉಳಿದುಕೊಂಡು, ಆನಂತರ ಮತ್ತೆ ಮುಂದೆ ಸಾಗುತ್ತೇವೆ,' ಎಂದು ಅವರ ಪತಿ ಉಮೇಶ್ ತಿಳಿಸಿದ್ದಾರೆ. ದಿನಕ್ಕೆ 40 ಕಿಮೀ ಓಡಬೇಕು ಎಂದು ದಾಕ್ಷಾಯಣಿ ಪ್ಲಾನ್ ಮಾಡಿಕೊಂಡಿದ್ದಾರೆ. ಮಧ್ಯಾಹ್ನ ಮತ್ತು ರಾತ್ರಿ ಹೊತ್ತಿನಲ್ಲಿ ಅಡುಗೆ ಮಾಡಿಕೊಂಡು, ಊಟ ಮಾಡಿ ಮತ್ತೆ ಪ್ರಯಾಣ ಶುರು ಮಾಡಲಿದ್ದಾರೆ. ಈ ಜರ್ನಿಗೆ ಅವಶ್ಯಕ ಇರುವ ವಸ್ತುಗಳನ್ನು ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ದಾಕ್ಷಾಯಣಿ ಅವರು ಓಡುತ್ತಿದ್ದರೆ, ಅವರ ಹಿಂದೆ ವಾಹನ ಹೋಗಲಿದೆ.
ಕಳೆದ ಅಕ್ಬೋಬರ್ 30ರಂದು ಮನೆಯಲ್ಲಿಯೇ ಜಿಮ್ ವರ್ಕ್‌ಔಟ್ ಮಾಡಿ ತುಸು ಬಳಲಿಸದ ಪುನೀತ್ ರಾಜ್‌ಕುಮಾರ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಕಾರ್ಡಿಯಾಕ್ ಅರೆಸ್ಟ್ ಆದ ಕಾರಣ ಕನ್ನಡ ಚಿತ್ರರಂಗ ಅಪ್ಪು ತಕ್ಷಣವೇ ಕೊನೆಯುಸಿರೆಳೆದರು. ಅಪ್ಪು ನಮ್ಮನ್ನಗಲಿ ತಿಂಗಳಾದರೂ ಅಭಿಮಾನಿಗಳು ನೋವು ಮಾತ್ರ ಕಡಿಮೆಯಾಗಿಲ್ಲ. ಎಲ್ಲೆಡೆ ಅಪ್ಪುವಿನ ನೆನಪಲ್ಲಿಯೇ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.