Asianet Suvarna News Asianet Suvarna News

ಕಿಸ್ಸಿಂಗ್‌ ಸೀನ್‌ ಮಾಡಲು ಪ್ರಜ್ವಲ್‌ ದೇವರಾಜ್‌ಗೂ ಕಂಫರ್ಟ್‌ ಇರಲಿಲ್ಲ: Priyanka Thimmesh

ಅದ್ಧೂರಿಯಾಗಿ ರಿಲೀಸ್ ಆಗಿರುವ ಅರ್ಜುನ್ ಗೌಡ ಸಿನಿಮಾ ಬಗ್ಗೆ ಮಾತನಾಡಿದ ನಟಿ ಪ್ರಿಯಾಂಕಾ ತಿಮ್ಮೇಶ್. 
 

Kannada Priyanka Thimmesh talks about Arjun Gowda film bold character vcs
Author
Bangalore, First Published Dec 31, 2021, 12:50 PM IST
  • Facebook
  • Twitter
  • Whatsapp

ಇಡೀ ಕನ್ನಡ ಚಿತ್ರರಂಗವೇ ವೀಕ್ಷಿಸಲು ಕಾಯುತ್ತಿದ್ದ ಅರ್ಜುನ್ ಗೌಡ ಸಿನಿಮಾ ಇಂದು ಅದ್ಧೂರಿಯಾಗಿ ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ಕೋಟಿ ರಾಮು ಅವರು ನಿರ್ಮಾಣ ಮಾಡಿರುವ ಈ ಸಿನಿಮಾಗೆ ಯಾವುದೇ ಕೊರತೆ ಆಗಬಾರದು ಎನ್ನುವ ಕಾರಣ ಚಿತ್ರರಂಗದ ಸ್ಟಾರ್ ನಟರು ಸಾಥ್ ಕೊಟ್ಟಿದ್ದಾರೆ, ಹಾಗೇ ಮಾಲಾಶ್ರೀ ಅವರು ದೊಡ್ಡ ಮಟ್ಟದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. 

ಮೊದಲ ಬಾರಿ ಸಿನಿಮಾದಲ್ಲಿ ಸಖತ್ ಬೋಲ್ಡ್‌ ಆಗಿ ಕಾಣಿಸಿಕೊಂಡಿರುವ ಪ್ರಿಯಾಂಕಾ ತಿಮ್ಮೇಶ್‌ ತಮ್ಮ ಪಾತ್ರದ ಬಗ್ಗೆ ಹಾಗೂ ಕೋಟಿ ರಾಮು ಅವರ ಜೊತೆಗಿದ್ದ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.

'ನನಗೆ ಆರಂಭದಲ್ಲೇ ಪಾತ್ರ ಬೋಲ್ಡ್‌ ಅಗಿರುತ್ತದೆ ಎಂದು ಹೇಳಿದ್ದರು. ಬೋಲ್ಡ್ ಅಂದ ತಕ್ಷಣ ಕ್ಯಾರೆಕ್ಟರ್ ಬೋಲ್ಡ್‌ ಅಲ್ಲ. ಸುತ್ತ ಮುತ್ತ ನೋಡಿ. ಇವಾಗ ನಾನು ದೇವಸ್ಥಾನಕ್ಕೆ ಹೋಗಬೇಕು ಅಂದ್ರೆ ಚೂಡಿದಾರ್ ಹಾಕಿಕೊಳ್ಳುತ್ತೇನೆ, ಸ್ನೇಹಿತರ ಜೊತೆ ಪಾರ್ಟಿ ಮಾಡ್ಬೇಕು ಅಂದ್ರೆ ಚೆನ್ನಾಗಿರುವ ಫ್ರಾಕ್ ಅಥವಾ ಶಾರ್ಟ್ಸ್‌ ಹಾಕ್ತೀನಿ. ನನಗೆ ಇದೆಲ್ಲಾ ವ್ಯತ್ಯಾಸ ಇರಲ್ಲ. ನಾನು ಮಾಡಿರುವ ನಾಲ್ಕೈದು ಸಿನಿಮಾಗಳಲ್ಲಿ ಇದರಲ್ಲಿ ನಾನು ಫಸ್ಟ್‌ ಟೈಂ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದೀನಿ' ಎಂದು ಖಾಸಗಿ ವಾಹಿನಿ ಸಂದರ್ಶನಲ್ಲಿ ಮಾತನಾಡಿದ್ದಾರೆ. 

ಹೊಸ ಚಿತ್ರಕ್ಕೆ 10 ಕೆಜಿ ತೂಕ ಏರಿಸಿಕೊಂಡಿದ್ದೇನೆ: ಪ್ರಿಯಾಂಕಾ ತಿಮ್ಮೇಶ್‌

ಕಿಸ್ಸಿಂಗ್ ಸೀನ್:

'ಆಮೇಲೆ ಕಿಸ್ಸಿಂಗ್ ಸೀನ್ ಅಂತ ಬಂದ್ರೆ. ನಾವು ಕಿಸ್ ಮಾಡಿಲ್ಲ. ನನಗೂ ಕಂಫರ್ಟ್‌ ಇರಲಿಲ್ಲ ಆಮೇಲೆ ಪ್ರಜ್ವಲ್ ಸರ್‌ಗೂ ಕೂಡ ಕಂಫರ್ಟ್‌ ಇರಲಿಲ್ಲ. ಆದರೆ ಒಂದು ಪ್ರಯತ್ನ ಪಟ್ಟಿ ಫೇಕ್‌ ಆಗಿ ಮಾಡಿದ್ದು. ಸನ್‌ ಲೈಟ್‌ನ ಬಳಸಿಕೊಂಡು ಮಾಡಿದ್ದು. ಕಿಸ್ಸಿಂಗ್ ಅಂತ ಬಂದಾಗ ನಾನು ಯಾಕೆ ನೋ ಹೇಳಿ ಅದನ್ನು ದೊಡ್ಡದು ಮಾಡಿಲ್ಲ ಅಂದ್ರೆ ಇವತ್ತು ನಾವು ಕಲಾವಿದರು. ಭಿಕ್ಷುಕಿ ಅಂದ್ರೆ ಭಿಕ್ಷುಕಿ ಕೆಲಸ ಮಾಡಲೇಬೇಕು. ಉದಾಹರಣೆಗೆ ಗಂಡ ಹೆಂಡತಿ ಅಂದ್ರೆ ನಿಮಗೇ ಗೊತ್ತು ಬೆಡ್‌ ಮೇಲೆ ಮಲಗಿಕೊಂಡಿರುವ ಸೀನ್ ತೋರಿಸುತ್ತೀವಿ ಏಕೆಂದರೆ ಅದು ಆಕ್ಷನ್ ಕಟ್ ಅಂತ ಹೇಳುವವರೆಗೂ ಮಾತ್ರ. ಅದರಿಂದ ಹೊರಗಡೆ ಬಂದ್ರೆ ನಾನು ಪ್ರಿಯಾಂಕಾ' ಎಂದಿದ್ದಾರೆ. 

ಅಭಿಮಾನಿ ಬರೆದ ಪತ್ರಕ್ಕೆ ಮನಸೋತ ಬಿಗ್ ಬಾಸ್ ಪ್ರಿಯಾಂಕಾ ತಿಮ್ಮೇಶ್!

'ನಾವು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದೀವಿ. ನಾವು ಕಲಾವಿದೆ ಆಗ್ಬೇಕು ನಟಿ ಆಗ್ಬೇಕು ಅಂದ್ರೆ ಈ ಕ್ಯಾರೆಕ್ಟರ್‌ಗಳನ್ನು ನಾನು ನಿಜವಾಗಲೂ ಒಪ್ಪಿಕೊಂಡು ನಾವು ಎಷ್ಟು 100% ಕೊಡ್ತೀವೋ ಅವಾಗಲೇ ಅಲ್ಲಿ ಫೀಲ್ ಆಗುವುದು. ಎಂಥಾ ಗಂಡ ಎಂಥಾ ಹೆಂಡ್ತಿ ಅಂತ ಜನರಿಗೆ ಥಿಯೇಟರ್‌ನಲ್ಲಿ ಕುಳಿತಾಗ ಫೀಲ್ ಆಗಬೇಕು. ಕಿಸ್ಸಿಂಗ್ ಎಂದ ತಕ್ಷಣ ನಾನು ದೊಡ್ಡದಾಗಿ ರಿಯಾಕ್ಷನ್ ಮಾಡಲಿಲ್ಲ. ಮಾಡೋಣ ಅಂದ್ರಲ್ಲಿ ಎನಿದೆ. ಕಂಫರ್ಟ್ ಝೋಮ್‌ ತುಂಬಾನೇ ಮುಖ್ಯ ಆಗುತ್ತದೆ' ಎಂದು ಪ್ರಿಯಾಂಕಾ ಮಾತನಾಡಿದ್ದಾರೆ. 

Kannada Priyanka Thimmesh talks about Arjun Gowda film bold character vcs

ರಾಮು ಬಗ್ಗೆ ಮಾತು:

'ರಾಮು ಸರ್‌ನ ಫಸ್ಟ್‌ ಟೈಂ ಅವರ ಗಾಂಧಿ ನಗರ ಆಫೀಸ್‌ನಲ್ಲಿ ಭೇಟಿ ಮಾಡಿದ್ದು. ನಾನು ಶಾಕ್‌ನಲ್ಲಿ ಇದ್ದೆ. ರಾಮು ಸರ್ ಒಳ್ಳೆ ಸಿನಿಮಾ ಮಾಡಿದ್ದಾರೆ ಅಂತ ಗೊತ್ತು ಆದರೆ ಎಲ್ಲಾ ಹಿಟ್ ಸಿನಿಮಾಗಳು. ಅವರ ಆಫೀಸ್‌ನಲ್ಲಿ ಎಲ್ಲಾ ಸಿನಿಮಾಗಳ ಪೋಸ್ಟರ್ ಹಾಕಿದ್ದಾರೆ. 39 ಸಿನಿಮಾ ಮಾಡಿದ್ದಾರೆ ಅದರಲ್ಲಿ ಎಲ್ಲಾನೂ ಹಿಟ್ ಆಗಿದೆ. ತುಂಬಾ ಖುಷಿ ಆಯ್ತು ಇವರ ಬ್ಯಾನರ್‌ನಲ್ಲಿ ನಾನು ಇದ್ದೀನಿ. ಒಬ್ಬಳು ಕನ್ನಡ ಹುಡುಗಿ ಬೇಕು ಅಂತ ಕರೆದು ಪಾತ್ರ ಕೊಟ್ಟಿದ್ದಾರೆ. ಪ್ರಿಯಾ ಇದು ಮಾಡು ಇದರ ಜೊತೆ ಇನ್ನೂ ಚೆನ್ನಾಗಿರುವ ಪಾತ್ರ ಮುಂದೆ ಬಂದಾಗ ನಿನಗೆ ಕೊಡ್ತೀನಿ. ಅವರನ್ನು ತುಂಬಾ ಮಿಸ್ ಮಾಡ್ಕೊಳ್ತೀವಿ. ಪ್ರೊಡ್ಯೂಸರ್‌ ಅಂದ್ರೆ ಆರಂಭದಲ್ಲಿ ತುಂಬಾ ಭಯ ಆಗುತ್ತೆ ಆದರೆ ರಾಮು ಸರ್‌ನ ನಾನು ಮೀಟ್ ಆದಾಗ ಮಾತನಾಡಿದಾಗ ಅವರು ಪುಟ್ಟ ಮಗು ತರ ಇದ್ದರು. ನಮ್ಮನ್ನು ಮಾತನಾಡಿಸುವ ರೀತಿ ಮತ್ತು ಬೆಲೆ ಕೊಡುವ ರೀತಿನೇ ಬೇರೆ. ಒಳ್ಳೆಯವರನ್ನು ದೇವರು ಬೇಗ ಕರೆದುಕೊಳ್ಳುತ್ತಾರೆ' ಎಂದು ಪ್ರಿಯಾಂಕಾ ಹೇಳಿದ್ದಾರೆ.

Follow Us:
Download App:
  • android
  • ios