Asianet Suvarna News Asianet Suvarna News

ಅಭಿಮಾನಿ ಬರೆದ ಪತ್ರಕ್ಕೆ ಮನಸೋತ ಬಿಗ್ ಬಾಸ್ ಪ್ರಿಯಾಂಕಾ ತಿಮ್ಮೇಶ್!

ಅಭಿಮಾನಿ ಪ್ರೀತಿಯಿಂದ ಬರೆದ ಪತ್ರಕ್ಕೆ ಫಿದಾ ಆಗಿ ಬಿಗ್ ಬಾಸ್ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್.

Bigg boss Priyanka Thimmesh is in awe of a letter written by a fan  vcs
Author
Bangalore, First Published Sep 5, 2021, 11:58 AM IST
  • Facebook
  • Twitter
  • Whatsapp

'ಭೀಮಸೇನ ನಳಮಹಾರಾಜ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪ್ರಿಯಾಂಕಾ ತಿಮ್ಮೇಶ್ ಬಿಗ್ ಬಾಸ್ ಸೀಸನ್ 8ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಕಾಣಿಸಿಕೊಂಡ ನಂತರ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದೀಗ ಪ್ರಿಯಾಂಕಾಗೆ ಅಭಿಮಾನಿ ಬರೆದ ಪತ್ರವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿ ಕೊಂಡಿದ್ದರು. 

ಪತ್ರ:

'ಪ್ರೀತಿಯಾ ಪಿಂಕಿ ಅಕ್ಕ, ನೀವು ತುಂಬಾ ಕೈಂಡ್ ಹಾರ್ಟ್ ವ್ಯಕ್ತಿ. ನೀನು ನನ್ನ ಜೀವನದಲ್ಲಿ ಎಷ್ಟು ಮುಖ್ಯವಾದ ವ್ಯಕ್ತಿ ಅಂದರೆ ವರ್ಣಿಸಲು ಪದಗಳು ಸಿಗುತ್ತಿಲ್ಲ. ನಿಮ್ಮಷ್ಟು ಸುಂದರವಾಗಿ, ಹಂಬಲ್ ಹಾಗೂ ಸ್ವೀಟ್ ವ್ಯಕ್ತಿಯನ್ನು ನಾನು ಎಂದೂ ನೋಡಿಲ್ಲ. ನಾನು ನಿಮ್ಮೊಂದಿಗೆ ಮೆಸೇಜ್ ಮಾಡಿ ಮಾತನಾಡಿಸುವಾಗ ನೀವು ಸೆಲೆಬ್ರಿಟಿ ಅನ್ನೋದೇ ನನಗೆ ಗೊತ್ತಾಗದ ಹಾಗೆ ಇದ್ರಿ. ಎಲ್ಲೋ ನಾನು ನನ್ನ ಬೆಸ್ಟ್ ಫ್ರೆಂಡ್ ಜೊತೆ ಮಾತನಾಡುತ್ತಿದ್ದೀನ ಅನಿಸುತ್ತಿತ್ತು,' ಎಂದು ಪತ್ರದಲ್ಲಿ ಬರೆದಿದ್ದಾರೆ. 

ಇನ್ನೂ ಬಿಗ್‌ಬಾಸ್‌ ಹ್ಯಾಂಗೋವರ್‌ ಇಳಿದಿಲ್ಲ: ಪ್ರಿಯಾಂಕಾ ತಿಮ್ಮೇಶ್‌

ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಸಾಕಷ್ಟು ಖಾಸಗಿ ಕಾರ್ಯಕ್ರಮಗಳಲ್ಲಿ ಹಾಗೂ ಸಂದರ್ಶನಗಳಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ವೈಲ್ಡ್‌ ಕಾರ್ಡ್ ಸ್ಪರ್ಧಿ ಆಗಿದ್ದರೂ ಯಾರಿಗೂ ಕಡಿಮೆಯಿಲ್ಲ ಎಂದು ಪ್ರತಿ ಟಾಸ್ಕ್‌ನಲ್ಲಿಯೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಸದ್ಯ ಶುಗರ್‌ಲೆಸ್‌ ಹಾಗೂ ಅರ್ಜುನ್ ಗೌಡ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಕೆಲವೊಂದು ಬ್ರ್ಯಾಂಡ್‌ಗಳ ಜೊತೆ ಕೊಲಾಬೋರೆಟ್‌ ಆಗಿ ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಿಂಕಿ ಕೈಯಲ್ಲಿ ಸಾಕಷ್ಟು ಸಿನಿಮಾ ಆಫರ್‌ಗಳಿದ್ದು, ಶೀಘ್ರವೇ ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ.

Follow Us:
Download App:
  • android
  • ios