ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ 2014ರಲ್ಲಿ 'ಅಜಿತ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಬಹುತೇಕ ತಮಿಳು ಮತ್ತು ಮಲಯಾಳಂ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಿಕ್ಕಿ ಈಗ ನಟ ಆದಿಯನ್ನು ಮದುವೆಯಾಗುತ್ತಿದ್ದಾರೆ, ಎಂಬ ಸುದ್ದಿ ಹರಿದಾಡುತ್ತಿದದೆ...

ಜಾಕೆಟ್ ಬಿಚ್ಚಿ ಎದೆ ಸೀಳು ತೋರಿಸಿದ 'ಗಂಡ-ಹೆಂಡತಿ' ನಟಿ!

ಒಟ್ಟಾಗಿ ಸಿನಿಮಾ:
2016ರಲ್ಲಿ ನಿಕ್ಕಿ ಮತ್ತು ಆದಿ 'ಮಲಪು' ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ. ಚಿತ್ರೀಕರಣದ ವೇಳೆ ಇಬ್ಬರೂ ಸ್ನೇಹಿತರಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿದೆ. ಇದೀಗ ಮದುವೆಯಾಗುವ ಹಂತಕ್ಕೆ ಬಂದಿದೆ ಈ ಜೋಡಿ ಎನ್ನಲಾಗುತ್ತಿದೆ. ಕುಟುಂಬಸ್ಥರ ಒಪ್ಪಿಗೆಯೂ ಪಡೆದುಕೊಂಡಿದ್ದಾರಂತೆ.

ಬರ್ತಡೇ ದಿನ ರಿವೀಲ್:
ನಟ ಆದಿ ತಂದೆ ರವಿ ರಾಜ ಅವರು ಕೂಡ ಚಿತ್ರರಂಗದ ಕಲಾವಿದರು. ಇತ್ತೀಚೆಗೆ ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆ ಇದ್ದು, ನಿಕ್ಕಿ ಭಾಗಿಯಾಗಿದ್ದರು.  ಈ ಸಂಭ್ರಮಾಚರಣೆಯಲ್ಲಿ ಆದಿಯ ಕುಟುಂಬದವರು ಮಾತ್ರ ಪಾಲ್ಗೊಂಡಿದ್ದರು. ಈ ವಿಶೇಷ ದಿನದಂದು ತಾವೂ ಭಾಗಿಯಾಬೇಕೆಂದು ನಿಕ್ಕಿ ಬೆಂಗಳೂರಿನಿಂದ ಚೆನ್ನೈಗೆ ತೆರಳಿದ್ದರಂತೆ.  ತಂದೆಯ ಹುಟ್ಟುಹಬ್ಬದ ದಿನವೇ ತಮ್ಮ ಪ್ರೀತಿಯ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಕಾರಲ್ಲಿ ಸೆಲ್ಫಿ ವಿಡಿಯೋ: 2000 ರು. ದಂಡ ಕಟ್ಟಿದ ಸಂಜನಾ! 

ಕ್ವಾರಂಟೈನ್‌ ಬಗ್ಗೆ ಗಾಳಿ ಮಾತು:
ನಿಕ್ಕಿ ಆದಿ ತಂದೆಯ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿರುವುದು ನಿಜ. ಆದರೂ ಅದು ಬೆಂಗಳೂರಿನಲ್ಲಿ ಆದ ಲಾಕ್‌ಡೌನ್‌ ಮುನ್ನ ಎನ್ನಲಾಗಿದೆ. ಬರ್ತಡೇ ಎಲ್ಲಾ ಮುಗಿಸಿ ಕೊಂಡು ಮರಳಿದ ನಂತರ ಬೆಂಗಳೂರು ಲಾಕ್‌ಡೌನ್‌ ಆಗಿದೆ. ಕೆಲವು ಮೂಲಗಳ ಪ್ರಕಾರ ನಿಕ್ಕಿ ಪ್ರಯಾಣ ಮಾಡಿದ ಕಾರಣ ಕ್ವಾರಂಟೈನ್‌ನಲ್ಲಿದ್ದರು.

ಕನ್ನಡ ಸಿನಿಮಾ:
'ಅಜಿತ್' ಮತ್ತು 'ಜಂಬೂ ಸವಾರಿ'ನಲ್ಲಿ ನಟಿಸಿದ ನಂತರ 'ಸಿದ್ಧಾರ್ಥ' ಸಿನಿಮಾದಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಇದಾದ ಮೇಲೆ ತಮಿಳು ಮತ್ತು ಮಲಯಾಳಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಒಟ್ಟಾರೆ 29 ಸಿನಿಮಾಗಳಲ್ಲಿ ಅಭಿನಯಿಸಿ, ಬೆಸ್ಟ್‌ ನಟಿ ಎಂಬ ಆರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.