ಬೆಂಗಳೂರು(ಜ.3): ಸೋಮವಾರ ಮಧ್ಯಾಹ್ನ 1.30ರ ಸುಮಾರಿಗೆ ಕ್ವೀನ್ಸ್‌ ರಸ್ತೆಯಲ್ಲಿರುವ ಸಂಚಾರ ನಿರ್ವಹಣೆ ಕೇಂದ್ರಕ್ಕೆ ಬಂದು ಎರಡು ಸಾವಿರ ದಂಡ ಪಾವತಿಸಿದ್ದಾರೆ. ಹೊಸ ಆಡಿ ಕಾರು ಖರೀದಿ ಮಾಡಿದ ಜೋಶ್‌ನಲ್ಲಿ ಸಂಜನಾ ಅವರು ಕಾರು ಚಾಲನೆ ಮಾಡುತ್ತಾ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದ ವಿಡಿಯೋ ವೈರಲ್‌ ಆಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಗೆಳೆಯನೊಂದಿಗೆ ಓಪನ್ ಕಾರ್‌ನಲ್ಲಿ ಸಂಜನಾ ಸೆಲ್ಫಿ ವಿಡಿಯೋ!

ವಾಹನ ಚಾಲನೆ ಮಾಡುವಾಗ ಮೊಬೈಲ್‌ ಬಳಕೆ ಮಾಡಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಸಂಜನಾಗೆ ಸಂಚಾರ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು. ಅದರಂತೆ ಸಂಚಾರಿ ನಿಯಮ ಉಲ್ಲಂಘನೆಯ ನೋಟಿಸ್‌ ಪಡೆದಿದ್ದ ಸಂಜನಾ ಅವರು ಎರಡು ಸಾವಿರ ದಂಡ ಪಾವತಿಸಿದ್ದಾರೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ.ರವಿಕಾಂತೇಗೌಡ ಅವರು ತಿಳಿಸಿದ್ದಾರೆ.

ಘಟನೆ ಬಗ್ಗೆ ಆಯುಕ್ತರಿಗೆ ಪತ್ರ ಬರೆದಿರುವ ಸಂಜನಾ, ಸಂಚಾರಿ ನಿಯಮ ಉಲ್ಲಂಘನೆ ಮಾಡಬೇಕು ಎನ್ನುವ ಕಾರಣಕ್ಕೆ ನಾನು ವಿಡಿಯೋ ಮಾಡಿಲ್ಲ. ಹೊಸ ಕಾರು ಖರೀದಿಸಿದ್ದರಿಂದ ಸಂತಸದ ಕ್ಷಣಕ್ಕಾಗಿ ವಿಡಿಯೋ ಮಾಡಿದ್ದೆ. ನನಗೆ ಕಾನೂನಿನ ಬಗ್ಗೆ ಸಾಕಷ್ಟುಗೌರವವಿದೆ. ಆದ್ದರಿಂದ ನಾನು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುವ ಉದ್ದೇಶ ಇರಲಿಲ್ಲ ಎಂದಿದ್ದಾರೆ.

"