ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ನೆನಪಿರಲಿ ಪ್ರೇಮ್‌ ಸಂಕಷ್ಟದಲ್ಲಿದ್ದ ಅಭಿಮಾನಿಗೆ ಸಹಾಯ ಮಾಡಿದ್ದಾರೆ. ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಬೇಕಿತ್ತು. ಚಿಕಿತ್ಸೆಗೆ ಹಣ ಒದಗಿಸಲಾಗದೇ ಪರದಾಡುತ್ತಿದ್ದ ಅಭಿಮಾನಿಯ  ವಿಚಾರ ತಿಳಿದು ರಾತ್ರೋರಾತ್ರಿ ಅವರ ಮನೆಗೆ ಭೇಟಿ ನೀಡಿ ಸಹಾಯ ಹಸ್ತ ಚಾಚಿದ ಪ್ರೇಮ್, ರಿಯಲ್ ಲೈಫಲ್ಲೂ ಹೀರೋ ಎನಿಸಿಕೊಂಡಿದ್ದಾರೆ.

ಮದ್ವೆ ಆದ್ಮೇಲೆ ಅದೃಷ್ಟ, ಈಗ ಜಾಕ್ ಪಾಟ್ ;ನೆನಪಿರಲಿ ಇದು ಪ್ರೇಮ್ ಪತ್ನಿ ಪಾದಪೂಜೆಯ ಫಲ!

ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸಿಯಾಗಿರುವ ಸತೀಶ್‌ ಅಲ್ಸರ್‌ನಿಂದಾಗಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ಕಷ್ಟದ ಸಮಯದಲ್ಲಿ ಯಾರಾದರೂ ಸ್ಪಂದಿಸಿ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ವಿಚಾರ ತಿಳಿದ ನಟ, ಅಭಿಮಾನಿಯನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಸಹಾಯ ಮಾಡಿದ್ದಾರೆ.

ರಾತ್ರೋರಾತ್ರಿ ಅಭಿಮಾನಿ ಸತೀಶ್‌ ಮನೆಗೆ ಭೇಟಿ ಕೊಟ್ಟು, ಆಸ್ಪತ್ರೆ ಸೇರಿಸುವ ವ್ಯವಸ್ಥೆ ಮಾಡಿದ್ದಾರೆ. ರಾತ್ರಿಯೇ ಆಸ್ಪತ್ರೆ ಸೇರಿಸಿ ಮಧ್ರರಾತ್ರಿವರೆಗೂ ಅವರೊಟ್ಟಿಗಿದ್ದು, ಪ್ರೇಮ್‌ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸಿದ್ದಾರೆ. ಅಷ್ಟೇ ಅಲ್ಲ ಮುಂದಿನ ಚಿಕಿತ್ಸೆಗೂ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ, ಎನ್ನಲಾಗಿದೆ. ಈ ಬಗ್ಗೆ ಅಭಿಮಾನಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಜೀರೋದಿಂದ ಹೀರೋ; ನೆನಪಿರಲಿ ಪ್ರೇಮ್‌ ಹೇಳಿದ ಕೆಲವು ಸಂಗತಿಗಳಿವು

'ನನ್ನ ಜೀವ ಉಳಿಸಿದ ನನ್ನ ದೇವರು. ನನ್ನ ನನ್ನ ಪ್ರೀತಿಯ ಈ ಅಣ್ಣ. ನಾನು ಬಬ್ಬ ಸಾಧಾರಣ ಅಭಿಮಾನಿಯಾದರೂ ನನಗೆ ಉಷಾರಿಲ್ಲ ಎಂದಾಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ,  ನಮ್ಮ ಮನೆಯವರಿದ್ದರೂ, ಅವರ ಮನೆಯವರೊಬ್ಬನಂತೆ ಆಸ್ಪತ್ರೆಗೆ ಸೇರಿಸಿ, ಮಧ್ಯರಾತ್ರಿವರೆಗೂ ಜೊತೆಗಿದ್ದು ಧೈರ್ಯ ತುಂಬಿ, ಚಿಕಿತ್ಸೆಗೆ ತಗುಲುವ ವೆಚ್ಚವನ್ನು ಭರಿಸಿದ್ದಾರೆ. ಈ ದಿನ ನನ್ನ ಬದುಕಿಗೆ ಹೊಸ ಅರ್ಥ ಕಲ್ಪಿಸಿದ್ದಾರೆ. ಅಣ್ಣ ನಿಮ್ಮ ಈ ಪ್ರೀತಿಗೆ ಸಾಯವವರೆಗೂ ನಾನು ಚಿರಋಣಿ. ಅಣ್ಣ ಲವ್‌ ಯೂ ಹಾಗೂ ಇವರು ಜೊತೆಗೆ ನನಗೆ ಸಹಾಯ ಮಾಡಿದ ನನ್ನ ಎಲ್ಲಾ ಸ್ನೇಹಿತರಿಗೆ ನಾ ಸದಾ ಚಿರಋಣಿ' ಎಂದು ಬರೆದಿದ್ದಾರೆ.

ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಅವರಿಗೂ ಸುದೀಪ್ ಉತ್ತಮ ಮಾತುಗಳನ್ನಾಗಿ, ಕೆಟ್ಟ ಯೋಚನೆಯಿಂದ ಹೊರ ಬಂದು ಹೊಸ ಬಾಳು ಕಟ್ಟಿಕೊಳ್ಳುವಂತೆ ಪ್ರೇರೇಪಿಸಿದ್ದರು. ಒಟ್ಟಿನಲ್ಲಿ ಈ ನಟರ ಇಂಥ ಮಾದರಿ ನಡೆಯಿಂದ ಅನೇಕರ ಬಾಳು ಬೆಳಗುವುದರಲ್ಲಿ ಅನುಮಾನವೇ ಇಲ್ಲ. ಅಷ್ಟೇ ಅಲ್ಲ, ಅಭಿಮಾನ ತೋರುವ ಅಭಿಮಾನಿಗಳಿಗೂ ಇದು ಎಲ್ಲಿಲ್ಲದ ಸಂತೋಷ ತರುತ್ತದೆ.