ಹೆಣ್ಣು ಮಕ್ಕಳು ಗಂಡನ ದೀರ್ಘಾಯುಷ್ಯಕ್ಕಾಗಿ ಆಚರಿಸುವ ದಿನವೇ ಭೀಮನ ಅಮಾವಾಸ್ಯೆ. ಈ ವಿಶೇಷ ದಿನದಂದು ಪತ್ನಿಯರು ಪತಿಯ ಪಾದ ಪೂಜೆ ಮಾಡುವುದು ಹಿಂದಿನಿಂದಲೂ ಹಿರಿಯರು ನಡೆಸಿಕೊಂಡು ಬಂದಿರುವ ಸಂಪ್ರದಾಯ. ಇದೀಗ ಕನ್ನಡ ಚಿತ್ರರಂಗದ ಸೆಲೆಬ್ರಿಟಿ ಜೋಡಿಗಳು ಈ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ನೆನಪಿರಲಿ ಪ್ರೇಮ್‌ ಫ್ಯಾಮಿಲಿ ಇದು, ತಂದೆ, ನಡೆದು ಬಂದ ದಾರಿ....

ಸ್ಯಾಂಡಲ್‌ವುಡ್‌ ಚಿತ್ರರಂಗದ ನೆನಪಿರಲಿ ಪ್ರೇಮ್‌ ಅವರಿಗೆ ಪತ್ನಿ ಜ್ಯೋತಿ ಅವರು ಮಾಡುತ್ತಿರುವ ಪಾದಪೂಜೆ ಫೋಟೋಗಳನ್ನು ಪ್ರೀತಿಯ ಸಾಲುಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ  ಶೇರ್ ಮಾಡಿಕೊಂಡಿದ್ದಾರೆ. ಎಲ್ಲೆಡೆ ಈ ಮುದ್ದಾದ ಜೋಡಿಯ ಫೋಟೋಗಳು ವೈರಲ್ ಆಗುತ್ತಿವೆ. 

' ನಿನ್ನನ್ನು ಪ್ರೀತಿಸಿದ ಮೇಲೆ ನನ್ನ ಆಯಸ್ಸು ಜಾಸ್ತಿ ಆಯಿತು, ಮದುವೆ ಆದ್ಮೇಲೆ ಅದೃಷ್ಟ ಕುಲಾಯಿಸ್ತು. ಈಗ ಪಾದಪೂಜೆ ಮಾಡಿದ್ದೀಯಾ  ನನ್ಮಗಂದು ಇನ್ಮೇಲೆ ಜಾಕ್ಪಾಟ್...ಭೀಮನ ಅಮಾವಾಸ್ಯೆ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

 

ಅಷ್ಟೇ ಅಲ್ಲದೇ ರೋಸ್ ಡೇ ದಿನದಂದು ಪತ್ನಿಗೆ ಗುಲಾಬಿ ಹೂವುಗಳನ್ನು ನೀಡಿ 'ಈ ಹೃದಯದ ಸಿದ್ಧತೆ ನೀನು, ಉಸಿರಾಟದ ಪದ್ಧತಿ ನೀನು ಡಾರ್ಲಿಂಗ್  ಎಂದು ತಮ್ಮ  ಚಿತ್ರದ ಹಾಡಿನ ಸಾಲುಗಳನ್ನು ಬರೆದುಕೊಂಡಿದ್ದರು. 

ಪತ್ನಿಯ ಪ್ರೀತಿಯನ್ನು ಕವನದ  ರೀತಿಯಲ್ಲಿ ಪ್ರೇಮ್‌ ಹೇಳಿರುವುದಕ್ಕೆ  ನೆಟ್ಟಿಗರು ಫಿದಾ ಆಗಿದ್ದಾರೆ.  ಇನ್ನು ಬಿಗ್ ಬಾಸ್‌ ಖ್ಯಾತಿಯ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕೂಡ ತಮ್ಮ ಮೊದಲ ಭೀಮನ ಅಮಾವಾಸ್ಯೆಯನ್ನು ಸರಳವಾಗಿ ಆಚರಿಸಿ ಶ್ರಾವಣವನ್ನು ಸ್ವಾಗತಿಸಿದ್ದಾರೆ.