1. ಅವರು ತಮ್ಮ ಹಾಡು ಬರೆದುಕೊಳ್ಳುವ ಖಾಲಿ ಹಾಳೆಗಳ ಪುಸ್ತಕವನ್ನು ವಿಶೇಷವಾಗಿ ಪ್ರಿಂಟ್‌ ಮಾಡಿಸಿ, ಬೈಂಡ್‌ ಮಾಡಿಟ್ಟುಕೊಂಡು ಉಪಯೋಗಿಸುತ್ತಿದ್ದರು. ಅದರ ರಾರ‍ಯಪರ್‌ ಮೇಲೆ ಒಂದು ಚಿಹ್ನೆ ; ಅದರ ಪಕ್ಕ ಒಂದು ಬಿದಿಗೆ ಚಂದ್ರನೊಳಗಿನ ಚುಕ್ಕೆ ; ಅದರ ಪಕ್ಕ ಒಂದು ಶಿಲುಬೆ ಚಿಹ್ನೆ; ಮೂರು ಚಿಹ್ನೆಗಳು ಕೂಡಿಕೊಂಡಿರುವಂತೆ ಕಾಣುತ್ತಿದ್ದವು.

SPBಯ ಎದೆ ತುಂಬಿ ಹಾಡುವ ದೊಡ್ಡದೊಂದು ಕನಸು ಹಾಗೆ ಉಳಿಯಿತು! 

2. ಆ ಪುಸ್ತಕವನ್ನು ಅವರು ಯಾರಿಗೂ ತೋರಿಸಿದ್ದು ಕಾಣೆ ! ಮುಟ್ಟಗೊಟ್ಟಿದ್ದೂ ಕಾಣೆ ! ಅದನ್ನವರು ಕೇವಲ ತಮ್ಮ ಸ್ವಂತ ಉಪಯೋಗಕ್ಕೆ ಮಾತ್ರ ಬಳಸುತ್ತಿದ್ದರು ! ಅವರ ಆ ಹಾಡಿನ ಪುಸ್ತಕದಂತೆಯೇ ಅವರ ಸಿದ್ಧಾಂತಗಳು ಮತ್ತು ಆದರ್ಶಗಳು !

3. ’ ನಾನು ಸರ್ವ ಧರ್ಮ ಪ್ರೇಮಿ’ ಅಂತ ಅವರು, ಈ ಮೂವತ್ತು ವರ್ಷಗಳಲ್ಲಿ ಯಾವ ವೇದಿಕೆಯಲ್ಲೂ ಮಾತಾಡಿದ್ದು ನಾನು ಕೇಳಿಲ್ಲ; ಯಾವ ಇಂಟರ್‌ವ್ಯೂಗಳಲ್ಲೂ ಸರ್ವಧರ್ಮ ಪ್ರೇಮದ ನಮಾಜು ಮಾಡಿದ್ದಿಲ್ಲ; ಸ್ಟೇಟ್‌ಮೆಂಟ್‌ಗಳನ್ನ ಎಸೆದು ಹೀರೋ ಆಗಿದ್ದಂತೂ ಇಲ್ಲವೇ ಇಲ್ಲ; ಫಸ್ಟ್‌ ಆಫ್‌ ಆಲ್‌ ಅವರು, ಭಾಷಣದ ರೂಪದಲ್ಲಿ ಮಾತಾಡಿದ್ದೇ ಇಲ್ಲ; ಮೊನ್ನೆವರೆಗೂ ಅವರದು ಸಹಜ ಮಾತು; ಸಹಜ ನಡೆ; ಸಹಜ ಕೃಷಿ! ನಿಮಗೆ ನೆನಪಿರಬಹುದು, ಆಗಸ್ಟ್‌ 5 ನೇ ತಾರೀಖು ಅವರು ಆಸ್ಪತ್ರೆಗೆ ಅಡ್ಮಿಟ್‌ ಆಗೋದಕ್ಕೆ ಹೋಗೋ ಮುಂಚೆ ಅಭಿಮಾನಿಗಳಿಗಾಗಿ ಮಾತಾಡಿದ ವೀಡಿಯೋ ಬೈಟ್‌ನಲ್ಲಿ ಎಷ್ಟುಸಹಜವಾಗಿ ಮಾತಾಡಿದ್ದರು ಅಂದ್ರೆ : "This cold; this cough; for a singer, it's a Nonsense; see you soon" ಅಂತ ಸಹಜವಾಗಿ ಒಳಗೆ ಹೋಗಿದ್ದರು.

4. “I want to die happily"

ಇದನ್ನ ನಗ್ತಾ ಹೇಳಿದ್ರು ಆವತ್ತು! ಅದು ’ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮದ ಶೂಟಿಂಗ್‌ ಸಂದರ್ಭ. ಲಂಚ್‌ ಬ್ರೇಕ್‌ನಲ್ಲಿ, ನಾನೂ, ಜಯಂತ್‌ ಕಾಯ್ಕಿಣಿ SPB ಅವರನ್ನ ವಿಚಾರಿಸ್ಕೋತಿದ್ವಿ. ಅವರು ಆಗ ತಾನೆ ಕೊಬ್ಬು ತೆಗೆಸಿಕೊಳ್ಳೋ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಬಂದಿದ್ರು. ಅದರ ಸೈಡ್‌ ಎಫೆಕ್ಟ್ ಕುರಿತು ನಾವು ತಕರಾರೆತ್ತಿದಾಗ ಮೇಲಿನ ಮಾತು ಹೇಳಿ ನಮ್ಮ ಬಾಯಿ ಮುಚ್ಚಿಸಿದರು.

'ಮನೆಯ ಇನ್ನೊಬ್ಬ ಅಣ್ಣನನ್ನು ಕಳೆದುಕೊಂಡಂತಾಗಿದೆ, ಬಾಲು ಸರ್ ಇಷ್ಟು ಬೇಗ ಸಾಯಬಾರದಿತ್ತು' 

5. ತೂಕ ಇಳಿಸಿಕೊಂಡ್ರು; ಗೆಟಪ್‌ಗಳನ್ನ ಛೇಂಜ್‌ ಮಾಡಿದ್ರು; ಷೋಗಳಲ್ಲಿ ನಿರಂತರವಾಗಿ ಭಾಗವಹಿಸಿದ್ರು; ಬದುಕನ್ನ ಬಳಸಿ ಬಳಸಿ ಬಳಸೀ ಚಪ್ಪಾಳೆಗಳ ಮಹಾರವವನ್ನು ಎದೆ ತುಂಬಾ ತುಂಬಿಕೊಂಡ್ರು ! ಜೀವನೋತ್ಸಾಹದ ಹೆಸರೇ SPB ; ವಿಮರ್ಶೆಯ ವಿಚಕ್ಷಣವಾಗ್ಮಿಯೇ SPB ; ಲೌಕಿಕ ಜ್ಞಾನಿ; ಅಲೌಕಿಕ ಧ್ಯಾನಿ; ಮಹಾಶೈವ; ಮಹಾಮಾನವ; ಮಹಾಗಾನ ಚರಿತ್ರೆಯೇ SPB ! He is simply SPB !

6. ಅವರದು ಜನ್ಮತ: ಶ್ರೀಕಂಠ ! ಅದಕ್ಕವರು ಯಾವ ಉಪಚಾರಗಳನ್ನು ಮಾಡುತ್ತಿರಲಿಲ್ಲ. ಯಾವ ಸಾಧನಾ ವಿಧಾನಗಳನ್ನೂ ಅನುಸರಿಸುತ್ತಿರಲಿಲ್ಲ ! ಮಂದ್ರ, ಮಧ್ಯಮ, ತಾರಾ ಸ್ಥಾಯಿಗಳಲ್ಲಿ ಅದು ಸಿದ್ಧಗೊಂಡ ಫಿರಂಗಿಯಂತೆ ಸಿಡಿಯಲು ಸದಾ ಸಿದ್ಧವಿರುತ್ತಿತ್ತು. ದಿನಕ್ಕೆರಡು ಸ್ಟುಡಿಯೋ, ಮ್ಯೂಸಿಕ್‌ ಡೈರೆಕ್ಟರ್‌ ಯಾರೋ; ಯಾವ ದಿನ ಯಾವ ತರದ ಹಾಡೋ, ಯಾವ ಬುದ್ಧಿಯ ನಿರ್ದೇಶಕನೋ, ನಿರ್ಮಾಪಕರೆಂತವರೋ, ಪ್ರತಿ ಹಾಡಿನ ಹಿಂದೆಯೂ ಇಷ್ಟೂಜನ; ಸಮಯ ಚಿಕ್ಕದು! ಕೆಲಸ ದೊಡ್ಡದು! ಸ್ನೇಹ ಮುಖ್ಯ, ಹಣವೂ ಮುಖ್ಯ, ಫೈನಲೀ, ಹಾಡಿಗೆ ನ್ಯಾಯ ಸಲ್ಲಿಸಬೇಕು! ಈ ಹಾಡು ಮುಗಿಸಿ ಮತ್ತೊಂದು ಹಾಡಿಗೆ ಓಡಬೇಕು...ಐವತ್ತು ವರ್ಷಗಳ ಈ ಲೌಕಿಕಾಲೌಕಿಕ ಜೀವನ ಯಾನದಲ್ಲಿ ಎಲ್ಲೂ ಎಡವದೇ ಸಾಗಿ ಬಂದಿದ್ದಾರಲ್ಲಾ, ಇವರು! ಇವರ ಮಿದುಳಿನ ಕಂಪ್ಯೂಟರ್‌ ಅದೆಷ್ಟು’ಜೀಬಿ’ಗಳದ್ದಾಗಿರಬೇಕು? ಅದರ ಕಾನ್‌ಫಿಗೆರೇಷನ್‌ ಅಪಡೇಟ್ಸ್‌ನ ಅವರು ಹೇಗೆ ಮಾಡಿಕೊಂಡ್ರು?..ಎರಡು ಮಾತಿನಲ್ಲಿ ಹೇಳುವುದಾದರೆ, ಅವರು ಸರ್ವಕಾಲಕ್ಕೂ ಸಂದಿರುವ ಗಾಯಕ; ಬಹುಮುಖ್ಯವಾಗಿ ಖPಆ ಅಂದ್ರೆ ಸಮಯ ಪಾಲಕ!

7. ಅವರು ಒಂದು ನಿಮಿಷದಲ್ಲಿ ಪರಿಸರವನ್ನು ಸ್ಕ್ಯಾ‌ನ್‌ ಮಾಡ್ತಿದ್ರು; ಮೂವತ್ತೂ ಸೆಕೆಂಡ್‌ನಲ್ಲಿ ಪರಿಸ್ಥಿತಿಯನ್ನು ಅರ್ಥೈಸ್ತಿದ್ರು$›; ಮತ್ತರ್ಧ ನಿಮಿಷದಲ್ಲಿ ಹರಟೆ ಮಾತಿಗೆ ಮಂಗಳ ಹಾಡ್ತಿದ್ರು; ಹೊಸ ಹಾಡಿನ ಒಳಗೆ ಹೋಗಿ, ತಲ್ಲೀನರಾಗಿ, ಅವರೂ ಸುಖಪಡ್ತಿದ್ರು. ಕರೆಸಿಕೊಂಡವರಿಗೂ ಸುಖ ದಯಪಾಲಿಸ್ತಿದ್ರು. ಎಸ್‌.ಪಿ.ಬಿ.ಯವರು ಒಂದು ಸಾವಿರಕ್ಕೂ ಹೆಚ್ಚು ನನ್ನ ಹಾಡುಗಳನ್ನು ಹಾಡಿದ್ದಾರೆ. ಮೈಕ್‌ ಮುಂದೆ ಅವರು ಒಂದು ಸಲವಾದ್ರೂ, ಕೆಮ್ಮಿದ್ದು, ಗೊಗ್ಗರಿಸಿದ್ದು ನಾನು ಕೇಳಿಲ್ಲ. ವಾಯ್ಸ್‌ ರೂಂ ಅಂದ್ರೆ ಅವರಿಗೆ ಒಂದು ಶಿಸ್ತಿನ ಮನೆ. ಮೈಕ್‌ ಅಂದ್ರೆ ಅವರಿಗೆ ಮಾತೃಸಮಾನ !

8. ‘ನನ್ನ ಸಕ್ಸಸ್‌ಗೆ ನನ್ನ ಲೌಕಿಕ ಜ್ಞಾನವೇ ಕಾರಣ’ ಅಂತ ಅವರು ಬಹಳ ವಿನಯವಾಗಿ ಹೇಳಿಕೊಳ್ತಿದ್ರು. ನನ್ನದು ಅಂತಾ ಪ್ರತಿಭೆ, ಇಂತಾ ಜ್ಞಾನ ಅಂತ ಅವರು ಯಾವತ್ತೂ ಆಡ್ತಿರ್ಲಿಲ್ಲ. ಬಡಾಯಿ ಕೊಚ್ಕಳೋದಂತೂ ಅವರಿಗೆ ಹಿಡಿಸ್ತಲೂ ಇರ್ಲಿಲ್ಲ. ’‘Speak about facts Speak about talent!" ಇವರೆಡೇ ಮಾತು ಅವರ ಬಾಯಿಂದ ಬರ್ತಿದ್ದಿದ್ದು. ಕ್ರಿಯೇಟಿವ್‌ ಕೆಲಸಗಳು ಯಾರದ್ದಾದರೂ ಆಗಿರಲಿ; ಅದರಲ್ಲಿನ ಕ್ವಾಲಿಟಿ ಕಣಗಳನ್ನು ಹೆಕ್ಕಿ ತೆಗೆದು ಅಭಿನಂದಿಸೋದು SPBಯವರ ಕ್ಲಾಸ್‌ ಗುಣ.

"

9. ಅವರು ಮನಸಾರೆ ನಗುತ್ತಿದ್ದರು! ಅವರಿಗೆ ಎಲ್ಲದರಲ್ಲೂ ಹಾಸ್ಯ ಗೋಚರಿಸುತ್ತಿತ್ತು ! ಸಾಮಾನ್ಯರಿಗೆ ಅರ್ಥವಾಗದೇ ಇರೋಷ್ಟುಸ್ಪೀಡ್‌ನಲ್ಲಿರುತ್ತಿತ್ತು ಅವರ ಜೋಕ್‌ಗಳು !

’ಸಿಪಾಯಿ’ ಚಿತ್ರದ ’ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ’ ಹಾಡನ್ನ ಹಾಡ್ತಿದ್ರು. ಚರಣದ ಈ ಸಾಲು

ಅಲ್ಲೂ ಸ್ನೇಹವುಂಟು, ಇಲ್ಲೂ ಸ್ನೇಹವುಂಟು; ಎಲ್ಲಾ ಸ್ನೇಹ ಒಂದೇ ಹಾಡಿ ಮುಗಿಸಿ ಜೋರಾಗಿ ನಕ್ಕರು. ಯಾಕೆ ಸಾರ್‌? ಅಂದೆ. This ಅಲ್ಲೂ Will give you a short break very shprtly ಅಂತ ಮತ್ತೆ ನಕ್ರು. ತೆಲಿಸಿಂದಾ? (ಗೊತ್ತಾಯ್ತಾ) ಅಂದ್ರು. ನಾನು ’ ತೆಲಿಸಿಂದಿ ಸಾರ್‌’ (ಗೊತ್ತಾಯ್ತು ಸಾರ್‌) ಅಂದೆ. ಜೋಕ್‌ ಏನಂದ್ರೆ: ಅಲ್ಲೂ ಅವರು ಸಮೀಪದಲ್ಲೆ ಒಂದು ತೆಲುಗು ಸಿನಿಮಾವನ್ನು ಕನ್ನಡಕ್ಕೆ ಮಾಡೋರಿದ್ರು. ರವಿಚಂದ್ರನ್‌ ತಾರಾಗಣ, ಕೆ. ರಾಘವೇಂದ್ರ ರಾವ್‌ ನಿರ್ದೇಶನ. ಅಲ್ಲೂ ಅಂದ್ರೆ ಅಲ್ಲೂ ಅರವಿಂದ್‌. ಮೆಗಾಸ್ಟಾರ್‌ ಚಿರಂಜೀವಿಯವರ ಶ್ರೀಮತಿಯ ಸಹೋದರ. ಅವರೇ ಆ ಚಿತ್ರದ ನಿರ್ಮಾಪಕ. ಹಂಸಲೇಖ ಅವರು ’ಸುಗ್ಗಿ’ ಸಿನಿಮಾಕ್ಕೆ ಮನಸು ಕೊಟ್ಟಿದ್ದಾರೆ; ಕಾನ್ಸನ್‌ಟ್ರೇಷನ್‌ ಕಷ್ಟಆಗಬಹುದು; ಅವರಿಗೊಂದು shಟ್ಟಠಿ ಆ್ಟಛಿak ಕೊಡೋಣ ಅಂತ ಅಲ್ಲೂ ಅರವಿಂದ್‌ ಅಂದ್ಕೊಡಿದ್ರಂತೆ!

10. ಒಂದು ಸಾರಿ; ಎಸ್‌ಪಿಬಿ ಯವರ ಗಂಟಲಿಗೆ ರೆಸ್ಟ್‌ ಬೇಕಾಗಿ, ಹಾಡೋದನ್ನ ನಿಲ್ಸಿ ಮನೇಲಿದ್ರು. ನಾನು ಮನೇಗೆ ಹೋದೆ. ಪುಸ್ತಕ ಓದುತ್ತಾ ಕುಳಿತಿದ್ರು. ’ಸೌಖ್ಯವೇ’ ಅಂತ ಸನ್ನೆ ಮಾಡಿ ಕೇಳಿದೆ. ಅವರು ತಲೆ ಆಡಿಸಿದರು. ಹುಷಾರು ಸಾರ್‌ ಅಂತ ಮತ್ತೆ ಸನ್ನೆ ಮಾಡಿ ಹೇಳಿದೆ. ಆಗ ಅವರು ಪಕ್ಕದಲ್ಲಿಟ್ಟುಕೊಂಡಿದ್ದ ಖಾಲಿ ನೋಟ್‌ ಬುಕ್‌ನಲ್ಲಿ ಏನೋ ಬರೆದು ನನ್ನ ಮುಖಕ್ಕೆ ಹಿಡಿದರು. ಅದರಲ್ಲಿ ಹೀಗೆ ಬರೆದಿದ್ದರು:

ಕೆಟ್ಟಿರೋದು ನನ್ನ ಗಂಟಲು;

ನಿನ್ನ ಗಂಟಲಿಗೇನಾಗಿದೆ?

ಎಲ್ಲರೂ ಮನಸಾರೆ ನಕ್ಕು ನಲಿದಾಡಿದಿವಿ.

11. ಮತ್ತೊಮ್ಮೆ, ಆ ವಿಶಾಲ ಹೃದಯಿ; ಶೃತಜ್ಞಾನಿ, ಅಭಿಜಾತ ಕಲಾಕಾರ; ಒಂದು ಬೃಹತ್‌ ವೇದಿಕೆಯಲ್ಲಿ, ಈ ದೇಶದ ಗಾನಸರಸ್ವತಿಯ ಸನ್ನಿಧಾನದಲ್ಲಿ, ಹೋರಂತ.. Üಳಗಳಾಂತ..ಬಿಕ್ಕಿ ಬಿಕ್ಕಿ ಅತ್ತರು..ಅಳು ತಡೆದುಕೊಳ್ಳಲಾಗದಂತಾಗಿ ಅತ್ತೇ ಅತ್ತರು..

ಹೈದರಾಬಾದ್‌ , ದಿನಾಂಕ 14-02-1993 ರವೀಂದ್ರ ಭವನದ ಅಂಗಳ, ಲತಾಮಂಗೇಷ್ಕರ್‌ ಆದಿಯಾಗಿ, ಖPಆಯವರ ಜೊತೆ ಅದುವರೆಗೂ ಹಾಡಿದ್ದ, ನುಡಿಸಿದ್ದ, ಗಾಯಕ ವಾದಕ ಸಂಯೋಜಕರೆಲ್ಲರನ್ನೂ ಸನ್ಮಾನಿಸಿ ಕೃತಜ್ಞತೆಯನ್ನು ಸಲ್ಲಿಸಲು ಬಾಲು ನಿರ್ಧರಿಸಿದ್ದರು. ಅವರ ಅಹ್ವಾನಕ್ಕೆ ಇಲ್ಲವೆನ್ನದವರೇ ಇಲ್ಲದೆ ಎಲ್ಲರೂ ಅಲ್ಲಿ ಸೇರಿದ್ದರು.

SPBಯವರು ತಮ್ಮ ಹೃದಯದಲ್ಲಿಟ್ಟುಕೊಂಡು ಪೂಜಿಸುವ ಗಂಧರ್ವಗಾಯಕ ಘಂಟಸಾಲ ಅವರ ಜನ್ಮದಿನ ಅದು. ಅವರ ಆಳೆತ್ತರದ ಕಂಚಿನ ಮೂರ್ತಿಯನ್ನು ಬಾಲು ಸರ್‌ ಸಿದ್ಧಪಡಿಸಿ, ನಗರ ಮಧ್ಯದಲ್ಲಿ ಪ್ರತಿಷ್ಠಾಪಿಸಿದ್ದರು. ಆ ದಿನದ ಸಂಗೀತ ಕಾರ‍್ಯಕ್ರಮದಲ್ಲಿ ಅವರದೇ ಹಾಡುಗಳ ರಸದೌತಣ ನೀಡಿದರು. ಘಂಟಸಾಲ ಅವರ ಚಿತ್ರದ ಫಲಕಗಳನ್ನು ನಮಗೆಲ್ಲರಿಗೂ ಪ್ರದಾನ ಮಾಡಿದರು. ಕೃತಜ್ಞತೆ ಮೆರೆದರು.

ಆಹ್ವಾನಿತರೋ ಎಲ್ಲಾ ಮಹಾತಾರೆಗಳೇ.! ಎನ್‌.ಟಿ.ಆರ್‌; ಏ.ಎನ್‌.ಆರ್‌; ಕೃಷ್ಣ: ಮೋಹನ್‌ಬಾಬು! ಸಂಗೀತದ ರಸಾಯನ ಮುಗಿದ ಮೇಲೆ ಈ ಎಲ್ಲಾ ತಾರೆಗಳು ಮಾತನಾಡಲು ವೇದಿಕೆ ಹತ್ತಿದರು. ಅ ಮಹಾಸಾಂಸ್ಕೃತಿಕ ಸಭೆಯನ್ನು ಎನ್‌.ಟಿ.ಆರ್‌.ಅವರು ತಮ್ಮ ರಾಜಕೀಯದ ಮಾತುಗಳಿಂದ ಶೃತಿ ತಪ್ಪಿಸಿದರು; ಅದೆಂತದೋ ಕೂಗು; ಅದೇನೋ ಕಿರುಚಾಟ; ಅದ್ಯಾಕೋ ಗದ್ದಲ..ಎಲ್ಲವೂ ವಿಘ್ನಗಳಂತೆ ಎರಗಿ..ಸದ್ದಡಗಿ ಹೋಯಿತು. ಎಸ್‌ಪಿಬಿ..ಅತ್ತರು..ಬಿಕ್ಕಿ ಬಿಕ್ಕಿ ಅತ್ತರು. ’ ನಾನೇನು ತಪ್ಪು ಮಾಡಿದೆ’ ಅಂತ ಬಿಕ್ಕಿ ಬಿಕ್ಕಿ ಅತ್ತರು. ಆಗ ಆ ಗಾನಸರಸ್ವತಿ, ಲತಾಮಂಗೇಷ್ಕರ್‌, ಎಸ್‌ಪಿಬಿಗೆ ಈ ರೀತಿ ಸಾಂತ್ವನ ಹೇಳಿದರು

ಬಾಲು ಬೇಟಾ; ನಿನ್ನ ಉದ್ದೇಶದ ಈ ಮಹಾಸಭೆಯಲ್ಲಿ ನಡೆದ ಎಲ್ಲಾ ಸಂಗೀತವೂ ನನಗೆ ಅರ್ಥವಾಯ್ತು; ಆದರೆ, ಈ ಮಹಾತಾರೆಗಳು ಮಾಡಿದ ಘೋರ ಕದನ, ನನಗೆ ಅರ್ಥವಾಗಲಿಲ್ಲ. NON ಋಖಿಖಐಇಅಔ ವಿಷಯಗಳು ನಮಗೆ ಹೇಗೆ ಅರ್ಥವಾಗಬೇಕಪ್ಪ..ಅಳಬೇಡ ಬಾ ಅಂತ ಸಂತೈಸಿದರು. SPBಯವರು ಆದಿಯಿಂದಲೂ ಪಾಲಿಟಿಕ್ಸ್‌ಗೆ ದೂರವಾಗಿದ್ದರು. ಸಂಗೀತ, ನಗು, ಸಂಸ್ಕೃತಿ ಪಾಲನೆ, ಸೌಂದರಾರ‍ಯರಾಧನೆಯಷ್ಟೇ ಅವರ ಜೀವನವಾಗಿತ್ತು.!

12. ನಾನು ಕಾಲಿಗೆ ಬಿದ್ದು ನಮಸ್ಕರಿಸಿದ್ದು ಇಬ್ಬರಿಗೆ ! ಒಬ್ಬರು ರಾಜ್‌ಕುಮಾರ್‌; ಕಾರಣ ಗೊತ್ತಿಲ್ಲ. ಮತ್ತೊಬ್ಬರು ಎಸ್‌.ಪಿ.ಬಿ. ಕಾರಣ ಸ್ಪಷ್ಟವಿದೆ. ಅವರು ಈ ದೇಶದ ಸಾಮರಸ್ಯದ ಸಂಕೇತ; ಅವರ ಬದುಕು ಮಾನವತೆಯ ಸ್ವರೂಪ !