ಬೆಂಗಳೂರು(ಸೆ.25)  ಗಾನ ಗಂಧರ್ವ ಸಂಗೀತ ಸಾಮ್ರಾಜ್ಯವನ್ನು ಬಿಟ್ಟು ಅಗಲಿದ್ದಾರೆ.  ಸಂಗೀತ ಸಾಮ್ರಾಟನ ಸಾಧನೆಯನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಸ್ಮರಿಸಿದ್ದಾರೆ.

500 ರೂ. ಇಟ್ಟುಕೊಂಡು ಕಿಡ್ನಾಪ್ ಮಾಡಿ ಮದುವೆಯಾಗಿದ್ದ ಎಸ್‌ಪಿಬಿ

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಎಸ್‌ಪಿಬಿಯವರನ್ನು ಭೇಟಿ ಮಾಡಿದ ಘಟನೆಯನ್ನು ರವಿ ಹೆಗಡೆ ನೆನಪಿಸಿಕೊಂಡರು.  ಮ್ಯೂಸಿಕಲ್ ಮ್ಯಾರಥಾನ್ ಒಂದನ್ನು ಮಾಡುವ ಪ್ರಸ್ತಾಪ ಮುಂದೆ ಇಟ್ಟಿದ್ದರು ಎಂದುಸ್ಮರಿಸಿಕೊಂಡರು.

ಪ್ರಶಸ್ತಿಗಳು :
4 ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳಿಗಳಿಗೆ ಎಸ್‌ಪಿಬಿ ಭಾಜನರಾಗಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಪುರಸ್ಕಾರ ಅವರನ್ನು ಅಲಂಕರಿಸಿದೆ. 25 ಬಾರಿ ಆಂಧ್ರಪ್ರದೇಶ ಸರ್ಕಾರದ ‘ನಂದಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. 4 ಭಾಷೆಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಗಾಯಕ ಎಂಬ ಹಿರಿಮೆ ಅವರದ್ದು. ಹಲವು ವಿಶ್ವ ವಿದ್ಯಾಲಯಗಳು ಎಸ್ಬಿಪಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿವೆ.

"