ಸಿನಿಮಾದಲ್ಲಿ ಒಂದೊಳ್ಳೆ ಸಂದರ್ಭದಲ್ಲಿ ಬಿಜಿಎಮ್ ಆಗಿರೋ ಗೀತೆ ಇದು. ಅರ್ಜುನ್ ಜನ್ಯಾ ಸರ್ ತುಂಬಾ ಮುತುವರ್ಜಿಯಿಂದ ಈ ಹಾಡು ಹೀಗೆ ಬರಬೇಕು ಅಂತ ಪೋಣಿಸಿದ್ದಾರೆ. ಮಹೇಶ್ ರಘುನಂದನ್ ಸಾಹಿತ್ಯವಿರುವ ಈ ಹಾಡನ್ನು ಸೌಂದರ್ಯ ಜಯಚಂದ್ರನ್ ಹಾಡಿದ್ದಾರೆ. 

ನಿರೂಪಕಿ ಹಾಗೂ ನಟಿ ಶೀತಲ್‌ ಶೆಟ್ಟಿ (Sheetal Shetty) ಮೊದಲ ಬಾರಿಗೆ ನಿರ್ದೇಶನ ಮಾಡಿರುವ 'ವಿಂಡೋಸೀಟ್‌' (Window Seat) ಸಿನಿಮಾ ಸೆಟ್ಟೇರಿದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಅದರಲ್ಲೂ ಚಿತ್ರದ ಟೈಟಲ್ (Title), ಟೀಸರ್ (Teaser) ಸೇರಿದಂತೆ ಮೇಕಿಂಗ್‌ನಿಂದಲೇ (Making) ಸಿನಿರಸಿಕರಲ್ಲಿ ಬಹಳಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಇದೀಗ ಚಿತ್ರತಂಡ ಚಿತ್ರದ ಹಾಡನ್ನು ಬಿಡುಗಡೆ ಮಾಡಿದೆ. 

ಶೀತಲ್‌ ಶೆಟ್ಟಿ ಸಿನಿಮಾ ವಿಂಡೋಸೀಟ್ ಫಸ್ಟ್‌ ಲುಕ್‌..!

ಹೌದು! ನಿರ್ದೇಶಕಿ ಶೀತಲ್ ಶೆಟ್ಟಿ ಜಾಝ್ (Jazz) ಶೈಲಿಯಲ್ಲಿ ಚಿತ್ರದ ಸರೆಂಡರ್ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಕೇಳುತ್ತಿದ್ರೆ ಯಾವುದೋ ಲೋಕಕ್ಕೆ ಹೋದ ಹಾಗಿದೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಇಂಥ ಪ್ರಯೋಗ ಮಾಡಿದ್ದಾರೆ. ಈ ಹಾಡಿನಲ್ಲಿ ಸಂಜನಾ ಆನಂದ್ (Sanjana Anand) ಹಾಗೂ ಅಮೃತಾ ಅಯ್ಯರ್ (Amrutha Iyengar) ತಮ್ಮ ಸೌಂದರ್ಯವನ್ನು ದುಪ್ಪಟ್ಟಾಗಿ ತೋರಿಸಿದ್ದಾರೆ. ಸೌಂದರ್ಯದ ಜೊತೆ ಜೊತೆಗೆ ಮೋಹಕ ಲುಕ್ ಮತ್ತೇರಿಸುವಂತೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಸದ್ಯ ರಿಲೀಸ್ ಆಗಿರೋ ಸರೆಂಡರ್ ಹಾಡಿಗೆ ಅದ್ಭುತವಾಗಿ ಸಂಗೀತ ಕಟ್ಟಿಕೊಟ್ಟಿದ್ದಾರೆ, ಮಹೇಶ್ ರಘುನಂದನ್ ಸಾಹಿತ್ಯವಿರುವ ಈ ಹಾಡನ್ನು ಸೌಂದರ್ಯ ಜಯಚಂದ್ರನ್ ಹಾಡಿದ್ದಾರೆ. 

YouTube video player


ಈ ಹಾಡಿನ ಬಗ್ಗೆ ಚಿತ್ರದ ನಿರ್ದೇಶಕಿ ಶೀತಲ್ ಇನ್‌ಸ್ಟಾಗ್ರಾಮ್‌ನಲ್ಲಿ (Instagram), 'ಸಿನಿಮಾದಲ್ಲಿ ಒಂದೊಳ್ಳೆ ಸಂದರ್ಭದಲ್ಲಿ ಬಿಜಿಎಮ್ ಆಗಿರೋ ಗೀತೆ ಇದು. ಅರ್ಜುನ್ ಜನ್ಯಾ ಸರ್ ತುಂಬಾ ಮುತುವರ್ಜಿಯಿಂದ ಈ ಹಾಡು ಹೀಗೆ ಬರಬೇಕು ಅಂತ ಪೋಣಿಸಿದ್ದಾರೆ. ಇದು ಇಂಗ್ಲಿಷ್ ನಲ್ಲಿ ಇರೋದಕ್ಕೂ ಸಿನೆಮಾದಲ್ಲಿ ಒಂದೊಳ್ಳೆ ಕಾರಣ ಇದೆ. ಇದಕ್ಕೊಂದು ಲಿರಿಕಲ್ ವಿಡಿಯೋ ಮಾಡ ಹೊರಟಾಗ ಅಮೃತಾ ಅಯ್ಯರ್ ಮತ್ತು ಸಂಜನಾ ಆನಂದ್ ಸಪೋರ್ಟ್ ಅದ್ಭುತ. I love you girls always.ನಿಮ್ಮ ಅಭಿಪ್ರಾಯಕ್ಕೆ ಕಾಯ್ತಾ ಈ ಲಿರಿಕಲ್ ವಿಡಿಯೋ ಮುಂದಿಡ್ತಾ ಇದ್ದೀವಿ' ಎಂದು ಪೋಸ್ಟ್ ಮಾಡಿದ್ದಾರೆ.

View post on Instagram


'ಒಬ್ಬ ಪತ್ರಕರ್ತೆಯಾಗಿ (Journalist) ಈ ಸಿನಿಮಾ ಮಾಡಿದ್ದು ದೊಡ್ಡ ಸವಾಲು. ಯಾಕೆಂದರೆ ಮಾಧ್ಯಮ ಕ್ಷೇತ್ರದಲ್ಲಿ ಇದ್ದವರು ಹೇಗೆ ಸಿನಿಮಾ ಮಾಡಿರುತ್ತಾರೆ ಎಂದು ಬಹಳ ಮಂದಿ ಕುತೂಹಲದಿಂದ ಗಮನಿಸುತ್ತಿರುತ್ತಾರೆ. ಆ ಜವಾಬ್ದಾರಿ ನನ್ನ ಮೇಲೆ ಇದೆ'. ಹಾಗೂ ವರ್ಷಗಳ ಹಿಂದೆ ಅನಿರೀಕ್ಷಿತವಾಗಿ ಬಿಡುವು ಸಿಕ್ಕಾಗ ಅನಿಸಿದ ವಿಚಾರಕ್ಕೆ ಕತೆಯ ರೂಪ ನೀಡುತ್ತಾ ಹೋದೆ. ಆದರೆ ಬರೆಯುತ್ತಿದ್ದ ಹಾಗೆ ಇದನ್ನೊಂದು ಸಿನಿಮಾ ಮಾಡಬಹುದು ಅನಿಸಿತು. ಬರೆದ ಮೇಲೆ ಯಾರಾದರೂ ನಿರ್ದೇಶಕ ಸ್ನೇಹಿತರಿಗೆ ಕೊಡೋಣ ಎಂದುಕೊಂಡಿದ್ದೆ. ಅವರೆಲ್ಲ 'ನಿಮ್ಮ ವಿಶನ್ (Vision) ನೀವೇ ಮಾಡಿದರೆ ಚೆನ್ನಾಗಿರುತ್ತದೆ' ಎಂದು ಪ್ರೋತ್ಸಾಹಿಸಿದರು. ಅಲ್ಲಿಂದಲೇ 'ವಿಂಡೋಸೀಟ್‌' ನಿರ್ದೇಶನದ ಬಗ್ಗೆ ಯೋಚಿಸತೊಡಗಿದೆ ಎನ್ನುತ್ತಾರೆ ಶೀತಲ್.

ರೊಮ್ಯಾನ್ಸ್‌ Rapper‌ನಲ್ಲಿರುವ ಥ್ರಿಲ್ಲರ್‌,ನಿರ್ದೇಶನ ನನಗಿಷ್ಟ

ಇನ್ನು 'ವಿಂಡೋಸೀಟ್‌' ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಮುಗಿದಿದ್ದು, ತೆರೆಗೆ ಬರುವುದೊಂದೆ ಬಾಕಿ. ಕೆ.ಎಸ್.ಕೆ.ಶೋ ರೀಲ್ ಬ್ಯಾನರ್‌ನಡಿ ಜಾಕ್ ಮಂಜು (Jack Manju) 'ವಿಂಡೋಸೀಟ್'ಗೆ ಬಂಡವಾಳ ಹೂಡಿದ್ದಾರೆ. ರಿತ್ವಿಕ್ ಸಂಕಲನ, ವಿಘ್ನೇಶ್ ರಾಜ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. 'ರಂಗಿತರಂಗ' (Rangitaranga) ಖ್ಯಾತಿಯ ನಿರೂಪ್ ಭಂಡಾರಿ (Nirup Bhandari) ಈ ಸಿನಿಮಾದಲ್ಲಿ ನಾಯಕನಾಗಿದ್ದಾರೆ. ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯರ್ ನಾಯಕಿಯಾಗಿದ್ದಾರೆ. ಉಳಿದಂತೆ ಲೇಖಾ ನಾಯ್ಡು, ಮಧುಸೂದನ್ ರಾವ್, ರವಿಶಂಕರ್, ಸೂರಜ್ ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ. 'ವಿಂಡೋಸೀಟ್‌' ರೋಡ್‌ ಜರ್ನಿಯ ಕತೆಯ ಸಿನಿಮಾವಾಗಿದ್ದು, ಎರಡು ಕಿರು ಚಿತ್ರಗಳನ್ನು ನಿರ್ದೇಶಿಸಿ, ಆ ಅನುಭವದೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಶೀತಲ್‌ ಶೆಟ್ಟಿ.