ನಿರೂಪಕಿ ಹಾಗೂ ನಟಿ ಶೀತಲ್‌ ಶೆಟ್ಟಿಮೊದಲ ಬಾರಿಗೆ ನಿರ್ದೇಶನ ಮಾಡಿರುವ ‘ವಿಂಡೋಸೀಟ್‌’ ಚಿತ್ರದ ಫಸ್ಟ್‌ ಲುಕ್‌ ಸೆ.24ರಂದು ಬೆಳಗ್ಗೆ 11 ಗಂಟೆಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಬಿಡುಗಡೆ ಆಗಲಿದೆ.

ಜಾಕ್‌ ಮಂಜು ನಿರ್ಮಿಸಿರುವ ಈ ಚಿತ್ರದಲ್ಲಿ ನಿರೂಪ್‌ ಭಂಡಾರಿ ನಾಯಕನಾಗಿ ನಟಿಸಿದ್ದಾರೆ. ರೋಡ್‌ ಜರ್ನಿಯ ಕತೆಯ ಸಿನಿಮಾ ಇದು. ರೊಮ್ಯಾಂಟಿಕ್‌ ಥ್ರಿಲ್ಲರ್‌ ಜಾನರ್‌ನಲ್ಲಿ ಸಿನಿಮಾ ಸಾಗುತ್ತದೆ. ಸಂಜನಾ ಆನಂದ್‌, ಅಮೃತಾ ಅಯ್ಯಾಂಗರ್‌ ಚಿತ್ರದ ನಾಯಕಿಯರು. ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದಾರೆ.

ನಿರ್ದೇಶಕಿ ಶೀತಲ್ ಶೆಟ್ಟಿಯ ವಂಡರ್‌ಫುಲ್ ಥಾಟ್

ಕಿಚ್ಚ ಕ್ರಿಯೇಷನ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗುತ್ತಿದೆ. ಎರಡು ಕಿರು ಚಿತ್ರಗಳನ್ನು ನಿರ್ದೇಶಿಸಿ, ಆ ಅನುಭವದೊಂದಿಗೆ ಈ ‘ವಿಂಡೋಸೀಟ್‌’ ನಿರ್ದೇಶನ ಮಾಡಿದ್ದಾರೆ ಶೀತಲ್‌ ಶೆಟ್ಟಿ.

‘ಒಬ್ಬ ಪತ್ರಕರ್ತೆಯಾಗಿ ಈ ಸಿನಿಮಾ ಮಾಡಿದ್ದು ದೊಡ್ಡ ಸವಾಲು. ಯಾಕೆಂದರೆ ಮಾಧ್ಯಮ ಕ್ಷೇತ್ರದಲ್ಲಿ ಇದ್ದವರು ಹೇಗೆ ಸಿನಿಮಾ ಮಾಡಿರುತ್ತಾರೆ ಎಂದು ಮಂದಿ ಕುತೂಹಲದಿಂದ ಗಮನಿಸುತ್ತಿರುತ್ತಾರೆ. ಆ ಜವಾಬ್ದಾರಿ ನನ್ನ ಮೇಲೆ ಇದೆ’ ಎನ್ನುತ್ತಾರೆ ಶೀತಲ್‌ ಶೆಟ್ಟಿ.

ಕೇರಳ ಎಂಟ್ರಿ ಆಗ್ತಿದ್ದಾಗೆ ಸೋನು ಕೈಗೆ ಬಿತ್ತು ಸೀಲ್, ಹೋಟೆಲ್ ಹೊಕ್ಕಾಗ ಪೊಲೀಸ್ರಿಗೆ ಫೋನ್

ವರ್ಷಗಳ ಹಿಂದೆ ಅನಿರೀಕ್ಷಿತವಾಗಿ ಬಿಡುವು ಸಿಕ್ಕಾಗ ಅನಿಸಿದ ವಿಚಾರಕ್ಕೆ ಕತೆಯ ರೂಪ ನೀಡುತ್ತಾ ಹೋದೆ. ಆದರೆ ಬರೆಯುತ್ತಿದ್ದ ಹಾಗೆ ಇದನ್ನೊಂದು ಸಿನಿಮಾ ಮಾಡಬಹುದು ಅನಿಸಿತು. ಬರೆದ ಮೇಲೆ ಯಾರಾದರೂ ನಿರ್ದೇಶಕ ಸ್ನೇಹಿತರಿಗೆ ಕೊಡೋಣ ಎಂದುಕೊಂಡಿದ್ದೆ. ಅವರೆಲ್ಲ 'ನಿಮ್ಮ ವಿಶನ್ ನೀವೇ ಮಾಡಿದರೆ ಚೆನ್ನಾಗಿರುತ್ತದೆ' ಎಂದು ಪ್ರೋತ್ಸಾಹಿಸಿದರು. ಅಲ್ಲಿಂದಲೇ ನಿರ್ದೇಶನದ ಬಗ್ಗೆ ಯೋಚಿಸತೊಡಗಿದೆ ಎನ್ನುತ್ತಾರೆ ಶೀತಲ್. ಇದು ಅವರ ಮೊದಲ ನಿರ್ದೇಶನ