ಕನ್ನಡದಲ್ಲಿ ಸದ್ದು ಮಾಡಿದ್ದ ಯೂ ಟರ್ನ್ ಸಿನಿಮಾ ಹಿಂದಿಗೆ ರಿಮೇಕ್ ಆಗಲಿದೆ ಎಂದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಇದೀಗ ಭಾರತದ ಗಡಿಯಾಚೆಗೂ ದಾಟಿ ಹೋಗಿದೆ. 

ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್! ಕೆಜಿಎಫ್‌ 2 ಟೀಂನಿಂದ ಹೊಸ ಸುದ್ದಿ!

ಯೂ ಟರ್ನ್ ಈಗಾಗಲೇ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಬಂದಿದ್ದು ತಕ್ಕ ಮಟ್ಟಿಗೆ ಹೆಸರು ಮಾಡಿದೆ. ಇದೀಗ ಶ್ರೀಲಂಕಾಗೂ ಕಾಲಿಟ್ಟಿದ್ದು ಸಿಂಹಳ ಭಾಷೆಗೂ ರಿಮೇಕ್ ಆಗಿದೆ.  ಅದರ ಅಫಿಶಿಯಲ್ ಟ್ರೇಲರ್ ರಿಲೀಸ್ ಆಗಿದೆ.  ಯೂಟ್ಯೂಬ್‌ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. 

ಐರಾ ಬರ್ತಡೇ ವಿಡಿಯೋ ರಿಲೀಸ್ ಮಾಡಿದ ಯಶ್

ಯು ಟರ್ನ್ ಚಿತ್ರಕಥೆಗಾರ ಪವನ್ ಕುಮಾರ್ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಯೂ ಟರ್ನ್ ಬೇರೆ ಬೇರೆ ಭಾಷೆಗಳಿಗೆ ರಿಮೇಕಾಗುತ್ತಿರುವುದು ಬರಹಗಾರನಾಗಿ ಇದು ನನಗೆ ಖುಷಿ ಕೊಟ್ಟಿದೆ' ಎಂದು ಬರೆದುಕೊಂಡಿದ್ದಾರೆ. 

 

ಈ ಸಿನಿಮಾ ಹಿಂದಿಗೂ ರಿಮೇಕ್ ಆಗುತ್ತದೆ ಎನ್ನಲಾಗಿದ್ದು ಹಿಂದಿಯಲ್ಲಿ ಸಮಂತಾ ಅಕ್ಕಿನೇನಿ ಹಾಗೂ ತಾಪ್ಸಿ ಪನ್ನು ಹೆಸರು ಕೇಳಿ ಬಂದಿದೆ. ಯಾರು ಮಾಡುತ್ತಾರೆಂದು ಇನ್ನೂ ಅಧಿಕೃತವಾಗಿಲ್ಲ.