Asianet Suvarna News Asianet Suvarna News

ಸಂಕಷ್ಟ ಕರ ಗಣಪತಿ ಹಿಂದಿಗೆ ರೀಮೇಕ್

  • ಸಂಕಷ್ಟ ಕರ ಗಣಪತಿ ಹಿಂದಿಗೆ ರೀಮೇಕ್
  • ಈಗಾಗಲೇ ಸಿನಿಮಾದ ಹಕ್ಕು ಖರೀದಿ
  • 2018ರಲ್ಲಿ ತೆರೆಕಂಡ ಸಂಕಷ್ಟಕರ ಗಣಪತಿ ಚಿತ್ರ 
Kannada movie Sankashta Kara Ganapathi hindi remake dpl
Author
Bangalore, First Published Aug 18, 2021, 5:52 PM IST
  • Facebook
  • Twitter
  • Whatsapp

ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಕುರಿತ ಚಿತ್ರ ಸಂಕಷ್ಟಕರ ಗಣಪತಿ ಹಿಂದಿಗೆ ರೀಮೇಕ್ ಆಗುತ್ತಿದೆ. ಬಾಯೆ ಹಾಥ್ ಕಾ ಖೇಲ್ ಎಂಬ  ಹೆಸರಿನಲ್ಲಿ ಹಿಂದಿಯಲ್ಲಿ ನಿರ್ಮಾಣವಾಗಲಿದೆ. ಕಾರ್‌ವಾನ್ ಸಿನಿಮಾ ಮಾಡಿದ್ದ ಆಕರ್ಷ್ ಖುರಾನಾ, ಸನ್ನಿ ಖುರಾನಾ ಹಾಗೂ ವಿಕಾಶ್ ಶರ್ಮಾ ಈ ಸಿನಿಮಾದ ಹಕ್ಕು ಖರೀದಿಸಿದ್ದಾರೆ. ಸಂಕಷ್ಟಕರ ಗಣಪತಿ ಚಿತ್ರ 2018ರಲ್ಲಿ ತೆರೆಕಂಡಿತ್ತು. ಅರ್ಜುನ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಲಿಖಿತ್ ಶೆಟ್ಟಿ, ಶ್ರುತಿ ಗೊರಾಡಿಯಾ ಮತ್ತಿತರರು ನಟಿಸಿದ್ದರು.

ಗುಜರಾತಿ ಚೆಲುವೆ ಶ್ರುತಿ ಗೊರಾಡಿಯಾ ಮೊದಲ ಸಿನಿಮಾ ಸಂಕಷ್ಟಕರ ಗಣಪತಿಯಾಗಿತ್ತು. ನಿರೂಪಣೆ ಮಾಡುತ್ತಿದ್ದ ಶ್ರುತಿಗೆ ಈ ಸಿನಿಮಾ ಆಫರ್ ಸಿಕ್ಕಿ ನಂತರ ನಟನೆಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಸಿನಿಮಾ ಹಿಂದಿಯಲ್ಲೂ ರಿಮೇಕ್ ಆಗುತ್ತಿರುವುದು ಚಿತ್ರದಲ್ಲಿ ನಟಿಸಿದ ಕಲಾವಿದರಿಗೆ ಹೆಚ್ಚಿನ ಖ್ಯಾತಿ ತಂದುಕೊಡಲಿದೆ.

75 ವರ್ಷ ಕಾಲ 50 ಸಿನಿಮಾ ನಿರ್ಮಿಸಿದ ಸ್ಯಾಂಡಲ್‌ವುಡ್ ನಿರ್ಮಾಪಕ ಶಂಕರ್‌ಸಿಂಗ್ ಕೃತಿ

ಪತ್ರಿಕೆಯಲ್ಲಿ ಕಾರ್ಟೂಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ನಾಯಕ ನಟನಿಗೆ ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಎಂಬ ವಿಚಿತ್ರ ರೋಗ ಶುರುವಾದಾಗುತ್ತದೆ. ನಂತರದಲ್ಲಿ ನಾಯಕನ ಜೀವನದಲ್ಲಾದ ಬದಲಾವಣೆಗಳನ್ನು ಹಾಸ್ಯ ರೂಪದಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕ ಅರ್ಜುನ್ ಕುಮಾರ್ ಮಾಡಿದ್ದಾರೆ.

Follow Us:
Download App:
  • android
  • ios