Asianet Suvarna News Asianet Suvarna News

Rider Song Release: ಕಾಶ್ಮೀರಿ ಪರ್ದೇಸಿ ಜೊತೆ 'ಮೆಲ್ಲನೆ' ಬಂದ ನಿಖಿಲ್ ಕುಮಾರ್

ರೈಡರ್ ಚಿತ್ರದ ಮತ್ತೊಂದು ಹಾಡು 'ಮೆಲ್ಲನೆ ಬೆರಳ ಬೆಸೆದು' ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು, ಸ್ಟೈಲಿಶ್​ ಲುಕ್​ನಲ್ಲಿ ನಿಖಿಲ್ ಕುಮಾರ್ ನಟಿ ಕಾಶ್ಮೀರಿ ಪರ್ದೇಸಿ ಜೊತೆ ಸ್ಲೋ ಮೂಮೆಂಟ್ ಸ್ಟೆಪ್ಸ್‌ ಹಾಕಿದ್ದಾರೆ.

Kannada Movie Rider Mellane song out Starrer Nikhil Kumar gvd
Author
Bangalore, First Published Nov 12, 2021, 9:01 PM IST

ಸ್ಯಾಂಡಲ್‌ವುಡ್‌ನ (Sandalwood) ಯುವರಾಜ, ರಾಜಕಾರಣಿ ನಿಖಿಲ್ ಕುಮಾರ್ (Nikhil Kumar) ಅವರ ಬಹು ನಿರೀಕ್ಷಿತ 'ರೈಡರ್' (Rider) ಚಿತ್ರದ ಮತ್ತೊಂದು ಹಾಡು ಇಂದು ಲಹರಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. 'ಮೆಲ್ಲನೆ ಬೆರಳ ಬೆಸೆದು' ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು, ಸಿನಿರಸಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಾಡಿನಲ್ಲಿ ಸ್ಟೈಲಿಶ್​ ಲುಕ್​ನಲ್ಲಿ ನಿಖಿಲ್ ನಟಿ ಕಾಶ್ಮೀರಿ ಪರ್ದೇಸಿ ಜೊತೆ ಸ್ಲೋ ಮೂಮೆಂಟ್ ಸ್ಟೆಪ್ಸ್‌ ಹಾಕಿದ್ದಾರೆ. ಕಲರ್‌ಫುಲ್‌ ಆಗಿ ಮೂಡಿಬಂದಿರುವ ಈ ಹಾಡಿಗೆ ಕವಿರಾಜ್ (Kaviraj) ಸಾಹಿತ್ಯವಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಸಂಯೋಜಿಸಿರುವ ಈ ಹಾಡನ್ನು ಸಂಜಿತ್ ಹೆಗ್ಡೆ (Sanjith Hegde) ಹಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ 'ರೈಡರ್' ಚಿತ್ರದ ಮೊದಲ ಹಾಡು 'ಡವ್ವ ಡವ್ವ' ಹಾಡು ಬಿಡುಗಡೆಯಾಗಿ ಸಂಗೀತ ಪ್ರಿಯರಿಂದ ಮೆಚ್ಚುಗೆಯನ್ನು ಪಡೆದಿತ್ತು. ಚೇತನ್ ಕುಮಾರ್ ಸಾಹಿತ್ಯವಿರುವ ಈ ಹಾಡನ್ನು ಅರ್ಮಾನ್ ಮಲಿಕ್ (Armaan Malik) ಹಾಡಿದ್ದರು. ನಿಖಿಲ್, ನಟಿ ಕಾಶ್ಮೀರಿ ಪರ್ದೇಸಿ ಜೊತೆ ಈ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದರು. 'ಸೀತಾರಾಮ ಕಲ್ಯಾಣ' (Seetharama Kalyana) ಚಿತ್ರದ ಮೂಲಕ ಲವರ್ ಬಾಯ್​ ಆಗಿ ಸ್ಯಾಂಡಲ್​ವುಡ್​ ಪ್ರೇಕ್ಷಕರನ್ನು ರಂಜಿಸಿದ್ದ ನಿಖಿಲ್ ಕುಮಾರಸ್ವಾಮಿ  'ರೈಡರ್' ಚಿತ್ರದಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ (Basketball Player) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ದೀಪಾವಳಿ ಹಬ್ಬದಂದು ವಿಶೇಷ ಪೋಟೋ ಹಂಚಿಕೊಂಡ ನಿಖಿಲ್ ಕುಮಾರ್

ವಿಜಯ್ ಕುಮಾರ್ ಕೊಂಡ (Vijay Kumar Konda) ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಿಖಿಲ್‌ಗೆ ನಾಯಕಿಯಾಗಿ ಯುವ ನಟಿ ಕಾಶ್ಮೀರಿ ಪರ್ದೇಸಿ (Kashmira Pardeshi) ನಟಿಸಿದ್ದು, ಮತ್ತೊಬ್ಬ ನಾಯಕಿಯಾಗಿ ಅನುಷಾ ರೈ (Anusha Rai) ಅಭಿನಯಿಸಿದ್ದಾರೆ. 'ರೈಡರ್'​ ಆ್ಯಕ್ಷನ್​ ಚಿತ್ರವಾಗಿದ್ದು, ಈಗಾಗಲೇ ಚಿತ್ರದ ಟೀಸರ್ (Teaser) ಹಾಗೂ  ಪೋಸ್ಟರ್ ಲುಕ್‌ನ  (First Look)ಮೂಲಕ ವೀಕ್ಷಕರ ಗಮನ ಸೆಳೆಯುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಕೆ.ಎಮ್.ಪ್ರಕಾಶ್ ಸಂಕಲನ, ಶರತ್ ಚಕ್ರವರ್ತಿ ಸಂಭಾಷಣೆ, ಭೂಷನ್ ಕೋರಿಯೊಗ್ರಾಫಿ, ಡಾ.ರವಿವರ್ಮ ಸಾಹಸ ಚಿತ್ರಕ್ಕಿದೆ. ದತ್ತಣ್ಣ, ಚಿಕ್ಕಣ್ಣ, ಶೋಭರಾಜ್, ರಾಜೇಶ್ ನಟರಂಗ, ಶಿವರಾಜ್.ಕೆ.ಆರ್.ಪೇಟೆ, ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ, ಸಂಪದ ಹುಲಿವಾನ, ನಿಹಾರಿಕ ಸೇರಿದಂತೆ ದೊಡ್ಡ ತಾರಬಳಗ ಚಿತ್ರದಲ್ಲಿದೆ.

ಇನ್ನು, ನಿಖಿಲ್ ದೀಪಾವಳಿ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ವಿಭಿನ್ನವಾಗಿ ಶುಭಾಶಯವನ್ನು ಕೋರಿದ್ದರು. 'ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು' ಎಂದು ಕ್ಯಾಪ್ಷನ್ ಕೊಟ್ಟು ಅವರ ಮುದ್ದು ಮಗುವಿನ ಪುಟ್ಟದಾದ ಕೈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಶೇರ್ ಮಾಡಿಕೊಂಡಿದ್ದರು. ಜೊತೆಗೆ ನಿಖಿಲ್, ಪತ್ನಿ ರೇವತಿ ಹಾಗೂ ಅವರ ಮಗ ಈ ಮೂವರು ಕೈ ಇರುವ ಫೋಟೋ ಇತ್ತು. ಕೋವಿಡ್ ವೈರಸ್ ಹಾವಳಿ ಮೊದಲ ಲಾಕ್‌ಡೌನ್‌ ಏಪ್ರಿಲ್ 17, 2020ರಲ್ಲಿ ನಿಖಿಲ್ ದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

ರೊಮ್ಯಾಂಟಿಕ್ ಹಾಡಿಗೆ ಸ್ಟೈಲಿಶ್ ಸ್ಟೆಪ್ಸ್‌ ಹಾಕಿದ ರೈಡರ್, ಟ್ರೆಂಡ್ ಆಯ್ತು ನಿಖಿಲ್ ಸಾಂಗ್

ನಿಖಿಲ್ ಕುಮಾರ್ ತಂದೆಯಾಗಿರುವ ಸಂತೋಷವನ್ನು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಮ್ಮ ಜೀವನದ ಈ ವಿಶೇಷ ಕ್ಷಣವನ್ನು ಇಡೀ ಜಗತ್ತಿಗೆ ಹಂಚಿಕೊಳ್ಳಲು ಸಂತೋಷವಾಗಿದೆ.  ಲವ್ ಯೂ ಮೈ ಸನ್ ಎಂದು ಬರೆದುಕೊಂಡು ಮಗುವನ್ನು ಎತ್ತಿಕೊಂಡಿರುವ ಮುದ್ದಾದ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿ ಸಂತೋಷವನ್ನು ವ್ಯಕ್ತಪಡಿಸಿದ್ದರು.
 

Follow Us:
Download App:
  • android
  • ios