ಚಿತ್ರ ವಿಮರ್ಶೆ: ಮುಂದಿನ ನಿಲ್ದಾಣ
ಮುಂದಿನ ನಿಲ್ದಾಣ ತುಸು ಭಿನ್ನವಾದ ಕಥೆಯನ್ನು ಇಟ್ಟುಕೊಂಡು ಬಂದ ಸಿನಿಮಾ. ಇಲ್ಲಿ ಪ್ರೀತಿ ಇದೆ, ಪ್ರೇಮ ಇದೆ, ನೋವುಗಳಿವೆ, ಭಾವನಾತ್ಮಕ ಸಂಬಂಧಗಳ ಮಹತ್ವ ಇವೆ. ಅವುಗಳ ಸುತ್ತಲ ಪಯಣವೇ ‘ಮುಂದಿನ ನಿಲ್ದಾಣ’.
ಆತ ತನಗೇನು ಬೇಕು ಎನ್ನುವುದಕ್ಕಿಂತ ತನಗೇನು ಬೇಡ ಎಂದು ಆಲೋಚಿಸಿದ್ದರೆ ಆ ಕತೆ ಅಲ್ಲಿ ತನಕ ಸಾಗುತ್ತಿರಲಿಲ್ಲ. ಆದರೆ ಎಲ್ಲವನ್ನು ಅಳೆದು, ತೂಗಿ, ಸರಿ ಯಾವುದು, ತಪ್ಪು ಯಾವುದು ಅಂತ ಜಾತಕ ಕೇಳಿಸಿ ಹಾಗೆಯೇ ಇರುವುದಕ್ಕೂ ಆತ ಆ ಕಾಲದ ಹುಡುಗ ಅಲ್ಲ.
ಆತ ಹೊಸ ತಲೆಮಾರಿನ ಪ್ರತಿನಿಧಿ. ಸರಿ, ತಪ್ಪು ಎನ್ನುವುದಕ್ಕಿಂತ ಅನಿಸಿದ್ದಂತೆ ಸಾಗಿ ಬಿಡೋಣ ಎಂದುಕೊಂಡವನು. ಹಾಗೆ ಹೊರಟವನ ಬದುಕಿನಲ್ಲಿ ಒಂದು ಹಂತಕ್ಕೆ ಉಳಿದುಕೊಂಡಿದ್ದು ಸಿಹಿ-ಕಹಿ ಘಟನೆಗಳ ಅಚ್ಚಳಿಯದ ನೆನಪು. ಅದು ಬದುಕಿನ ಸಂಬಂಧಗಳಿಗೆ ಸಂಬಂಧಿಸಿದ್ದು. ಅಲ್ಲಿ ಪ್ರೀತಿ ಇದೆ, ಪ್ರೇಮ ಇದೆ, ನೋವುಗಳಿವೆ, ಭಾವನಾತ್ಮಕ ಸಂಬಂಧಗಳ ಮಹತ್ವ ಇವೆ. ಅವುಗಳ ಸುತ್ತಲ ಪಯಣವೇ ‘ಮುಂದಿನ ನಿಲ್ದಾಣ’.
ಚಿತ್ರ ವಿಮರ್ಶೆ : ಮೂಕಜ್ಜಿಯ ಕನಸುಗಳು
ಇದು ಸಾಫ್ಟ್‌ವೇರ್ ಎಂಜಿನಿಯರ್ ಕಮ್ ಫೋಟೋಗ್ರಾಫರ್ ಪಾರ್ಥ, ಆರ್ಟ್ ಕ್ಯುರೇಟರ್ ಮೀರಾ ಶರ್ಮಾ ಮತ್ತು ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿನಿ ಅಹನಾ ಕಶ್ಯಪ್ ಅವರ ನಡುವಿನ ಕತೆ. ಅವರ ಬದುಕಿನ ಸುತ್ತಲ ಜರ್ನಿ. ಈ ಮೂವರು ಹೊಸ ತಲೆಮಾರಿನ ಪ್ರತಿನಿಧಿಗಳು. ಬದುಕಿಗೊಂದು ರೀತಿ, ರಿವಾಜುಗಳು, ಕಟ್ಟು ಪಾಡುಗಳು ಇವೆ ಎನ್ನುವುದಕ್ಕಿಂತ ತಮಗನಿಸಿದ ಹಾಗೆ ಬದುಕು ಎಂದುಕೊಂಡವರು. ಆದರೆ ಬದುಕಿನ ಭಾವನೆಗಳಿಗೆ ಅದರದ್ದೇ ಆದ ಒಂದು ಸೇತುವೆ ಇದೆ ಎನ್ನುವ ಹೊತ್ತಿಗೆ ಅವರ ಸುತ್ತಲ ನಡೆದು ಹೋದ ಕಾಡುವ ಘಟನೆಗಳನ್ನು ಒಂದು ಕಾವ್ಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿನಯ್ ಭಾರದ್ವಾಜ್. ನಿರ್ದೇಶನದ ಅವರ ಮೊದಲ ಪ್ರಯತ್ನ ಇಷ್ಟುವಾಗುವುದೇ ಇಲ್ಲಿ.
ಫೋಟೋ ಪ್ರದರ್ಶನದ ಒಂದು ಅವಲೋಕನದ ಮೂಲಕ ಕತೆ ತೆರೆದುಕೊಳ್ಳುತ್ತದೆ. ಭೂತ, ವರ್ತಮಾನದ ಜತೆಗೆ ಭವಿಷ್ಯದ ಮೂರ ಧಾರೆಗಳು ಅಲ್ಲಿನ ನದಿಯಂತೆ ಹರಿಯುತ್ತವೆ. ಅವುಗಳಿಗೆ ಫ್ಲಾಷ್‌ಬ್ಯಾಕ್ ಚೌಕಟ್ಟು ತೊಡಿಸಿ, ಕಣ್ ಸೆಳೆಯುವ ಲೊಕೇಷನ್ಸ್, ಕಣ್ಣನೇ ತಂಪಾಗಿಸುವ ಛಾಯಾಗ್ರಹಣ, ನೆನಪುಗಳ ಆ ಪಯಣಕ್ಕೆ ಇನ್ನಷ್ಟುಹಿತವೆನಿಸುವ ಹಾಡುಗಳ ಮೂಲಕ ಇಡೀ ಕತೆಯನ್ನು ಅಬ್ಬರ ಇಲ್ಲದೆ, ಎಲ್ಲವೂ ಮೇಲೋಡ್ರಾಮಾಕ್ಕೆ ಜಾರಿಕೊಳ್ಳದೆ, ಬೋಧನೆ ಎನಿಸದಂತೆ ಆದಷ್ಟು ನೈಜತೆಗೆ ಹತ್ತಿರವಾಗಿಯೇ ಇದೆ ಈ ಚಿತ್ರ.
ಬಳ್ಳಾರಿ ಖಡಕ್ ಮಿರ್ಚಿ 'ಸೀತಾವಲ್ಲಭ' ಕಾವ್ಯಾ; ಪೋಟೋ ನೋಡಿದ್ರೆ ಬಿದ್ದೇ ಹೋಗ್ತೀರಿ!
ಹೊಸ ತಲೆಮಾರಿನ ಯುವಕ-ಯುವತಿಯರನ್ನೇ ಪ್ರತಿನಿಧಿಸುವ ಪಾರ್ಥ, ಮೀರಾ ಹಾಗೂ ಅಹನಾ ಕಶ್ಯಪ್ ನೋಡುನೋಡುತ್ತಾ ಪಕ್ಕದ ಮನೆಯ ಹುಡುಗ-ಹುಡುಗರಂತೆನಿಸುತ್ತಾರೆ. ಆ ಮಟ್ಟಿಗೆ ಕತೆಗೊಂದು ಸಹಜತೆ ಇದೆ. ಮನರಂಜನೆ ಜತೆಗೆ ಒಳ್ಳೆಯ ಸಂದೇಶವೂ ಬೇಕೆಂದು ಸಿನಿಮಾ ನೋಡುಗರಿಗೆ ಇದು ಇನ್ನುಷ್ಟುಹತ್ತಿರವಾಗುವ ಕತೆಯಂತೂ ಹೌದು.
ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯಾ ಕಶ್ಯಪ್, ದತ್ತಣ್ಣ ಚಿತ್ರದ ಪ್ರಧಾನ ಪಾತ್ರಧಾರಿಗಳು. ವೃತ್ತಿಯಲ್ಲಿ ಟೆಕ್ಕಿಯಾಗಿ, ಪ್ರವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿ ಒಬ್ಬ ಈ ಕಾಲದ ಹುಡುಗ ಹೇಗಿರಬಲ್ಲನೋ ಆ ಪ್ರಕಾರ ಪ್ರವೀಣ್ ತೇಜ್ ಆ ಪಾತ್ರಕ್ಕೆ ಸೂಕ್ತ ಎನಿಸುತ್ತಾರೆ. ಬಹುತೇಕ ಅದೇ ಮ್ಯಾನರಿಸಂ ಅನ್ನು ಕೊನೆ ತನಕ ಉಳಿಸಿಕೊಂಡಿದ್ದಾರೆ. ಆದರೆ ಕೆಲವೊಮ್ಮೆ ಆ ಪಾತ್ರಕ್ಕೆ ಬೇಕಿದ್ದ ಭಾವನೆಗಳನ್ನು ಇನ್ನಷ್ಟುಪರಿಣಾಮಕಾರಿಯಾಗಿ ತೋರಿಸಿವಲ್ಲಿ ನಿರ್ದೇಶಕರು ಸೋತಿದ್ದಾರೆನ್ನುವ ಭಾವನೆ ನೋಡುಗರಲ್ಲಿ ಕಾಡುತ್ತದೆ.
ಚಿತ್ರ ವಿಮರ್ಶೆ: ಕಾಳಿದಾಸ ಕನ್ನಡ ಮೇಷ್ಟ್ರು
ಜತೆಗೆ ಅವರ ಬಾಡಿ ಪ್ರದರ್ಶನ ಅನಗತ್ಯ ಎನಿಸುತ್ತದೆ. ಮಾರ್ಡನ್ ಲುಕ್ ಜತೆಗೆ ನಟನೆಯಲ್ಲೂ ರಾಧಿಕಾ ನಾರಾಯಣ್ ಇಷ್ಟವಾದರೆ, ಅನನ್ಯ ಕಶ್ಯಪ್ ತಮ್ಮ ಹಾವ ಭಾವ ನಟನೆಯಲ್ಲಿ ಭರವಸೆ ನಟಿಯಾಗಿ ನೆನಪಲ್ಲಿ ಉಳಿಯುತ್ತಾರೆ. ದತ್ತಣ ಎವರ್ ಗ್ರೀನ್. ಇನ್ನು ಇಲ್ಲಿ ಪ್ರಸ್ತಾಪಿಸಲೇಬೇಕಾಗಿದ್ದು ಅಭಿಮನ್ಯು ಅವರ ಛಾಯಾಗ್ರಹಣ ಹಾಗೂ ವಾಸುಕಿ ಅವರ ಸಂಗೀತ.
- ತಾರಾಗಣ: ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್, ದತ್ತಣ್ಣ, ಅಜಯ್
ನಿರ್ದೇಶನ: ವಿನಯ್ ಭಾರದ್ವಾಜ್