ಚಿತ್ರ ವಿಮರ್ಶೆ: ದಮಯಂತಿ
ಜೀವನದಲ್ಲಿ ತಾವು ಕಂಡ ಆಸೆ ಈಡೇರುವ ಮುನ್ನ ಸಾವು ಕಂಡರೆ ಅಂಥವರು ಮುಂದೆ ಏನಾಗುತ್ತಾರೆ ಎಂಬ ಪ್ರಶ್ನೆಗೆ ಸಿನಿಮಾ ಮಂದಿ ಕಂಕೊಂಡಿರುವುದು ಆತ್ಮ- ದೆವ್ವ. ಸತ್ತವರು ಆತ್ಮಗಳಾಗಿ ದೆವ್ವದ ರೂಪದಲ್ಲಿ ಕಾಡುತ್ತಾರೆ ಎಂಬುದು 'ದಮಯಂತಿ' ಸಿನಿಮಾ ನಂಬಿಕೆ.
ಜೀವನದಲ್ಲಿ ತಾವು ಕಂಡ ಆಸೆ ಈಡೇರುವ ಮುನ್ನ ಸಾವು ಕಂಡರೆ ಅಂಥವರು ಮುಂದೆ ಏನಾಗುತ್ತಾರೆ ಎಂಬ ಪ್ರಶ್ನೆಗೆ ಸಿನಿಮಾ ಮಂದಿ ಕಂಕೊಂಡಿರುವುದು ಆತ್ಮ- ದೆವ್ವ.
ಸತ್ತವರು ಆತ್ಮಗಳಾಗಿ ದೆವ್ವದ ರೂಪದಲ್ಲಿ ಕಾಡುತ್ತಾರೆ ಎಂಬುದು ಸಿನಿಮಾ ನಂಬಿಕೆ. ಇದೇ ನಂಬಿಕೆಯಲ್ಲಿ ಇಲ್ಲಿವರೆಗೂ ಬಂದಿರುವ ಚಿತ್ರಗಳ ಕುರಿತು ಹೇಳುತ್ತ ಹೋದರೆ ಅದೇ ಒಂದು ‘ಆತ್ಮ’ಚರಿತ್ರೆಯಾಗುತ್ತದೆ. ಸದ್ಯಕ್ಕೆ ಈ ಸಾಲಿಗೆ ಸೇರುವ ‘ದಮಯಂತಿ’ ಕೂಡ ಆತ್ಮ ಕೂಡ ಆತ್ಮವೇ. ಆದರೆ, ಈ ಆತ್ಮಕ್ಕೊಂದು ಚರಿತ್ರೆ ಇದೆ. ಅಲ್ಲಿ ರಾಜವೈಭವ, ರಾಜನ ನೆರಳಿನಲ್ಲಿ ದಾನಗಳದ್ದೇ ಮಾತು. ಒಳ್ಳೆಯತನಗಳದ್ದೇ ಮೆರವಣಿಗೆ. ಇದರ ಜತೆಗೆ ಮದವೇರಿದ ಲಂಟಪಟ ಕೂಡ ಇದ್ದಾನೆ.
ಚಿತ್ರ ವಿಮರ್ಶೆ : ಮೂಕಜ್ಜಿಯ ಕನಸುಗಳು
ಇವನಿಂದ ರಾಜ್ಯದೊಳಗೆ ನಡೆಯುವ ಅನಾಹುತಗಳು ಅಷ್ಟಿಷ್ಟಲ್ಲ. ಕೊನೆಗೆ ಅವನನ್ನು ಊರು ಬಿಡಿಸುತ್ತಾರೆ. ಇಷ್ಟೆಲ್ಲ ನಡೆಯುವ ಹೊತ್ತಿಗೆ ಒಂದು ತಲೆಮಾರಿನ ಕತೆಯನ್ನು ನಿರ್ದೇಶಕ ಕಂ ನಿರ್ಮಾಪಕ ನವರಸನ್ ಹೇಳಿ ಮುಗಿಸುತ್ತಾರೆ. ಆದರೆ, ಊರಿನಿಂದ ಬಹಿಷ್ಕಾರಕ್ಕೊಳಗಾದವನು ಮತ್ತೆ ಊರಿನಲ್ಲಿ ಕಾಲಿಟ್ಟರೆ ಏನಾಗುತ್ತದೆ ಎಂಬ ದುರಂತ ತಿರುವಿನಲ್ಲಿ ಚಿತ್ರದ ಮತ್ತೊಂದು ತಲೆಮಾರಿನ ಕತೆ ಹುಟ್ಟಿಕೊಳ್ಳುತ್ತದೆ. ಈ ಹೊಸ ತಲೆಮಾರಿನಲ್ಲಿ ಒಂದು ದೊಡ್ಡ ಬಂಗಲೆಯನ್ನು ಮಾರಲು ಹೋದಾಗ ಅಲ್ಲಿ ಎರಡು ಆತ್ಮಗಳಿರುವುದು ಗೊತ್ತಾಗುತ್ತದೆ.
ಆತ್ಮಗಳು ಇಲ್ಲ ಎಂದು ಸಾಬೀತು ಮಾಡಬೇಕು. ಅದಕ್ಕೊಂದು ರಿಯಾಲಿಟಿ ಶೋ ಮಾಡುತ್ತಾರೆ. ಮುಂದೇನು ಎನ್ನುವ ಕುತೂಹಲಕ್ಕೆ ಸಿನಿಮಾ ನೋಡಬೇಕು. ಮೊದಲ ಭಾಗ ಸಾಧ್ಯವಾದಷ್ಟು ನಗುವಿಕೆ ಮೀಸಲಾಗಿದೆ. ಈ ಮೀಸಲು ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗಳಾಗಿ ಪ್ರೇಕ್ಷಕರಿಗೆ ಕಾಣುವುದು ತಬಲನಾಣಿ, ಮಿತ್ರ, ಗಿರಿ. ಉಳಿದಂತೆ ಸಾಧು ಕೋಕಿಲ ಅವರ ಪ್ರವೇಶದಿಂದ ಚಿತ್ರಕ್ಕೆ ಮತ್ತೊಂದು ತಿರುವು ಸಿಗುತ್ತದೆ. ವಿರಾಮದ ನಂತರದ ಕತೆಯಲ್ಲಿ ಸಂಭ್ರಮ, ರಾಜಮನೆತನ, ಸಾವು ಮತ್ತು ಆತ್ಮಗಳ ಅಟ್ಟಹಾಸಕ್ಕೆ ಗಮನ ಕೊಡಲಾಗಿದೆ. ಇಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಪಾತ್ರವೇ ಹೈಲೈಟ್. ಒಂದು ಹಂತದಲ್ಲಿ ಅವರೇ. ಚಿತ್ರದ ಹೀರೋ!
ಧಗಧಗನೇ ಉರಿಯುವ ದಮಯಂತಿಯಾಗಿ ಕಾಣಿಸಿಕೊಂಡು ನಿರ್ದೇಶಕರ ಕಲ್ಪನೆಯ ಕತೆಗೆ ಮಾಸ್ ಲುಕ್ ಕೊಡುತ್ತಾರೆ. ನೋಡಲು ಮುದ್ದಾಗಿ ಕಾಣುತ್ತಲೇ ದೆವ್ವದ ಪಾತ್ರದಲ್ಲಿ ಹೆದರಿಸುವ ರಾಧಿಕಾ ಅವರೇ ಚಿತ್ರದ ಕೇಂದ್ರಬಿಂದು. ಇವರ ಪಾತ್ರವನ್ನು ಮತ್ತಷ್ಟು ರೋಚಕವಾಗಿಸಿದ್ದು ಗಣೇಶ್ ನಾರಾಯಣ್ ಅವರ ಹಿನ್ನೆಲೆ ಸಂಗೀತ. ಹಾರರ್ ಹಾಗೂ ಗ್ರಾಫಿಕ್ಸ್ ಚಿತ್ರದ ತಾಂತ್ರಿಕತೆಯ ವಿಭಾಗವನ್ನು ಶ್ರೀಮಂತಗೊಳಿಸಿದೆ. ಆತ್ಮ, ರಾಜವಂಶ, ಹಾಸ್ಯವನ್ನು ಇಷ್ಟಪಡುವವರು ‘ದಮಯಂತಿ’ಯನ್ನು ನೋಡಿ ಜೈ ಎನ್ನಬಹುದು.
- ನಿರ್ದೇಶನ: ನವರಸನ್
ತಾರಾಗಣ: ಪಿರಾಧಿಕಾ ಕುಮಾರಸ್ವಾಮಿ, ತಬಲ ನಾಣಿ, ಮಿತ್ರ, ಲೋಕಿ, ಗಿರಿ, ಸಾಧು ಕೋಕಿಲ, ಮಜಾ ಟಾಕೀಸ್ ಪವನ್
ರೇಟಿಂಗ್: ***