Asianet Suvarna News Asianet Suvarna News

'By Two ಲವ್'ನಲ್ಲಿ ಐ ಹೇಟ್ ಲವ್ ಎಂದ ಶೋಕ್ದಾರ್

ಧನ್ವೀರ್ ಮತ್ತು ಶ್ರೀಲೀಲಾ 'ಬೈಟು ಲವ್' ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತಿಚೆಗಷ್ಟೇ ಚಿತ್ರದ 'ಐ ಹೇಟ್ ಲವ್' ಹಾಡು ಬಿಡುಗಡೆಯಾಗಿದೆ. ಕಲರ್‌ಫುಲ್ ಸೆಟ್‌ನಲ್ಲಿ ಧನ್ವೀರ್ ಮತ್ತು ಶ್ರೀಲೀಲಾ ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ. 

Kannada Movie Bytwo Love I Hate Love Video out starred Dhanveerah Sreeleela
Author
Bangalore, First Published Nov 1, 2021, 5:16 PM IST
  • Facebook
  • Twitter
  • Whatsapp

ಸಿಂಪಲ್ ಸುನಿ (Simple Suni) ನಿರ್ದೇಶನದ 'ಬಜಾರ್' (Bazar) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಧನ್ವೀರ್ ಗೌಡ (Dhanveer Gowda) ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದರು. ಇದೀಗ ಧನ್ವೀರ್ 'ಬೈಟು ಲವ್' (By Two Love) ಚಿತ್ರದಲ್ಲಿ ನಟಿಸುತ್ತಿದ್ದು, ನಾಯಕಿಯಾಗಿ ಶ್ರೀಲೀಲಾ (Sreeleela) ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಮೊದಲ ಪೋಸ್ಟರ್ ಲುಕ್‌ (Poster Look) ಹಾಗೂ ಟೀಸರ್‌ Teaser ಬಿಡುಗಡೆಯಾಗಿತ್ತು. ಇದೀಗ ಚಿತ್ರದ 'ಐ ಹೇಟ್ ಲವ್' (I Hate Love) ಹಾಡು ರಿಲೀಸ್ ಆಗಿದೆ.

ಧನ್ವೀರ್- ಶ್ರೀಲೀಲಾ ತಯಾರಿಸಿರುವ ಮಣ್ಣಿನ ಗಣಪತಿ ಹೇಗಿದೆ ನೋಡಿ!

ಹೌದು! ಧನ್ವೀರ್ ಮತ್ತು ಶ್ರೀಲೀಲಾ ಕಾಂಬಿನೇಷನ್‌ನ 'ಐ ಹೇಟ್ ಲವ್' ಹಾಡನ್ನು ಚಿತ್ರತಂಡ ಆನಂದ್ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದು, ಹಾಡಿಗೆ ಸಖತ್ ರೆಸ್ಪಾನ್ಸ್ ವ್ಯಕ್ತವಾಗಿದೆ. ಕಲರ್‌ಫುಲ್ ಸೆಟ್‌ನಲ್ಲಿ ಧನ್ವೀರ್ ಮತ್ತು ಶ್ರೀಲೀಲಾ ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ. ಪ್ರಮೋದ್ ಮರವಂತೆ ಹಾಗೂ ಕೆವಿಎನ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಬಿ.ಅಜನೀಶ್ ಲೋಕನಾಥ್ ಮತ್ತು ಸಿಆರ್‌. ಬಾಬ್ಬಿ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ. 'ಬೈಟು ಲವ್' ಚಿತ್ರವನ್ನು ಕೆವಿಎನ್‌ ಬ್ಯಾನರ್‌ನಲ್ಲಿ (KVN Banner) ನಿಶಾ ವೆಂಕಟ್ ಹಾಗೂ ಸುಪ್ರೀತ್ ನಿರ್ಮಿಸುತ್ತಿದ್ದು, ಹರಿ ಸಂತೋಷ್‌ (Hari Santhosh) ಆಕ್ಷನ್ ಕಟ್ ಹೇಳಿದ್ದಾರೆ. 
 


ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ (Ajaneesh Loknath) ಸಂಗೀತ ಸಂಯೋಜನೆ ಹಾಗೂ ಯೋಗಾನಂದ್‌ ಸಂಭಾಷಣೆ ಚಿತ್ರಕ್ಕಿದೆ. ಇನ್ನು ಮೊದಲ ಚಿತ್ರ 'ಬಜಾರ್'ನಲ್ಲಿ ಮಾಸ್‌ ಲುಕ್‌ನಲ್ಲಿ ನಟಿಸಿದ್ದ ಧನ್ವೀರ್‌ ಈ ಚಿತ್ರದಲ್ಲಿ ಲವರ್‌ ಬಾಯ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲ, ಅಚ್ಯುತ್​ ಕುಮಾರ್, ಶಿವರಾಜ್ ಕೆ.ಆರ್. ಪೇಟೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ. ಧನ್ವೀರ್ ಹಾಗೂ ಶ್ರೀಲೀಲಾ ಮದುವೆ ಆಗುತ್ತಿರುವ ಈ ಚಿತ್ರದ ಲುಕ್ ಪೋಸ್ಟರ್‌ ಕೆಲ ತಿಂಗಳ ಹಿಂದಷ್ಟೇ ರಿವೀಲ್ ಆಗಿತ್ತು. ವಿಶೇಷವಾಗಿ ಶ್ರೀಲೀಲಾ ಮಡಿಲಿನಲ್ಲಿ ಒಂದು ವರ್ಷದ ಕೂಸು ಕುಳಿತುಕೊಂಡು, ಇಬ್ಬರು ಮದುವೆ ಆಗುವುದನ್ನು ನೋಡುತ್ತಿತ್ತು.

ಮದುವೆಗೂ ಮುನ್ನವೇ ನಟಿ ಶ್ರೀಲೀಲಾ ಮಡಿಲಲ್ಲಿ ಕಂದಮ್ಮ

ಇನ್ನು ಧನ್ವೀರ್ 'ಬಂಪರ್‌' (Bumper) ಚಿತ್ರದಲ್ಲೂ ನಟಿಸುತ್ತಿದ್ದು, 'ಕೆಜಿಎಫ್' (KGF) ಮೊದಲನೇ ಭಾಗದಲ್ಲಿ ನಟಿಸಿದ್ದ ಗರುಡ ಖ್ಯಾತಿಯ ರಾಮಚಂದ್ರ ರಾಜು (Ramachandra Raju) ಈ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚೇತನ್‌ ಕುಮಾರ್‌ (Chethan Kumar) ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದು, ಹರಿ ಸಂತೋಷ್‌ (Hari Santhosh) ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಸುಪ್ರೀತ್‌ ಮತ್ತು ನಿಶಾ ವೆಂಕಟ್‌ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದು, ಚಿತ್ರದ ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯಿದೆ. ನವೀನ್‌ ಛಾಯಾಗ್ರಹಣ, ಪ್ರಶಾಂತ್ ರಾಜಪ್ಪ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಸೇರಿದಂತೆ ಮಾಸ್ಟರ್‌ ವಿಕ್ರಂ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Follow Us:
Download App:
  • android
  • ios