'ವೈದ್ಯೋ ನಾರಾಯಣ ಹರಿಃ' ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಸಂಗೀತ ಪ್ರಿಯರನ್ನು ಮೋಡಿ ಮಾಡಿದೆ. ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ಈ  ಹಾಡು ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಮೂಡಿಬಂದಿದೆ. 

ಸ್ಯಾಂಡಲ್​ವುಡ್‌ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ (Shivarajkumar) ಅಭಿನಯದ ಬಹುನಿರೀಕ್ಷಿತ 'ಭಜರಂಗಿ 2' (Bhajarangi 2) ಚಿತ್ರ ಈಗಾಗಲೇ ಸಖತ್ ಸದ್ದು ಮಾಡುತ್ತಿದ್ದು, ಪ್ರತಿಷ್ಠಿತ ಐಎಂಡಿಬಿಯಲ್ಲಿ (IMDB) ಬಹು ನಿರೀಕ್ಷೆಯ ಚಿತ್ರಗಳ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿರುವ ಈ ಚಿತ್ರ, ಕನ್ನಡ ಚಿತ್ರರಂಗದಲ್ಲೂ ಬಹಳಷ್ಟು ಕುತೂಹಲ ಹೆಚ್ಚಿಸಿದೆ. ಹಾಗೂ ವಿಶಿಷ್ಟವಾದ ಪೋಸ್ಟರ್ (Poster), ಪ್ರೋಮೊ (Promo), ಟ್ರೇಲರ್ (Trailer), ಹಾಗೂ ಹಾಡುಗಳಿಂದ (Songs) 'ಭಜರಂಗಿ 2' ಚಿತ್ರ ಭಾರೀ ನಿರೀಕ್ಷೆಯನ್ನು ಅಭಿಮಾನಿಗಳಲ್ಲಿ (Fans) ಹುಟ್ಟುಹಾಕಿದೆ.

ಭಜರಂಗಿ ಹವಾ... ವಿನೋದ್ ರಾಜ್, ಯಶ್ ಕೊಂಡಾಡಿದ ಶಿವಣ್ಣ

ಇದೀಗ ಚಿತ್ರತಂಡ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದ್ದು, ಹಾಡಿಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಹೌದು! ಚಿತ್ರತಂಡ 'ವೈದ್ಯೋ ನಾರಾಯಣ ಹರಿಃ' (Vaidyo Narayano Hari) ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಸಂಗೀತ ಪ್ರಿಯರನ್ನು ಮೋಡಿ ಮಾಡಿದೆ. ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ಈ ಹಾಡು ವಿಜಯ್ ಪ್ರಕಾಶ್ (Vijay Prakash) ಕಂಠಸಿರಿಯಲ್ಲಿ ಮೂಡಿಬಂದಿದೆ. ಸಂಪೂರ್ಣವಾಗಿ ಭಿನ್ನವಾಗಿರುವ ಈ ಹಾಡು, ನೋಡುಗರಿಗೆ ಪ್ರಿಯವಾಗಿದೆ. 

YouTube video player


ಇನ್ನು ನಿನ್ನಯಷ್ಟೇ 'ಭಜರಂಗಿ 2' ಚಿತ್ರತಂಡ ಚಿತ್ರದ ಪ್ರಿ- ರಿಲೀಸ್ ಈವೆಂಟ್ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಹಾಜರಿತ್ತು. ಮುಖ್ಯವಾಗಿ ಯಶ್ (Yash) ಹಾಗೂ ಪುನೀತ್ ರಾಜಕುಮಾರ್ (Puneeth Rajkumar) ಶಿವರಾಜ್ ಕುಮಾರ್ ಜೊತೆ 'ಭಜರಂಗಿ 2' ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ ಯಶ್ ಅವರನ್ನು ಹೊಗಳಿದರು. ಹಾಗೆಯೇ ಯಶ್ ಹಾಗೂ ಪುನೀತ್ ರಾಜಕುಮಾರ್ ಮಾತನಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ಬಂದ ಬಂದ ನೋಡು ಭಜರಂಗಿ-2: ಧೂಳೆಬ್ಬಿಸಿದ ಟ್ರೇಲರ್

ಜಯಣ್ಣ-ಭೋಗೇಂದ್ರ ನಿರ್ಮಾಣದ ಈ ಚಿತ್ರಕ್ಕೆ ಎ.ಹರ್ಷ (A.Harsha) ಆಕ್ಷನ್ ಕಟ್ ಹೇಳಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್‌ ಜನ್ಯಾ (Arjun Janya) ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಜಾಕಿ ಭಾವನಾ (Bhavana), ಸೌರವ್ ಲೋಕೇಶ್ (Sourav Lokesh), ಹಿರಿಯ ನಟಿ ಶ್ರುತಿ (Shruti), ಶಿವರಾಜ್ ಕೆ.ಆರ್.ಪೇಟೆ, ಮಂಜು ಪಾವಗಡ ಸೇರಿದಂತೆ ವಿಶೇಷವಾದ ತಾರಾಗಣವಿದೆ. ಅದ್ದೂರಿ ಮೇಕಿಂಗ್‌ (Making) ಜೊತೆಗೆ ಶಿವಣ್ಣನ ಲುಕ್‌ಗಳು ಭಿನ್ನವಾಗಿವೆ.

ಭಜರಂಗಿ 2 ಭಕ್ತಿಪ್ರಧಾನ ಮಾಸ್‌ ಸಿನಿಮಾ: ಶಿವರಾಜ್‌ ಕುಮಾರ್‌

'ಭಜರಂಗಿ 2' ಚಿತ್ರ 2013 ರಲ್ಲಿ ತೆರೆಕಂಡ 'ಭಜರಂಗಿ' (Bhajarangi) ಮಂದುವರಿದ ಭಾಗವಾಗಿದೆ. ಈ ಹಿಂದೆ ಹರ್ಷ ಶಿವಣ್ಣನಿಗೆ 'ಭಜರಂಗಿ' (Bhajarangi) ಮತ್ತು 'ವಜ್ರಕಾಯ' (Vajrakaya) ನಿರ್ದೇಶಿಸಿದ್ದರು. ಅದರಲ್ಲೂ 'ಭಜರಂಗಿ' ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಇದೀಗ ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್‌ನಲ್ಲಿ 'ಭಜರಂಗಿ 2' ಬರುತ್ತಿದೆ. ಇನ್ನು ದೀಪು ಎಸ್‌. ಕುಮಾರ್‌ ಸಂಕಲನ, ಸ್ವಾಮಿ ಅವರ ಕ್ಯಾಮೆರಾ ಕೈಚಳಕವಿದೆ. ರವಿ ಸಂತೆಹೈಕ್ಲು ಕಲಾ ನಿರ್ದೇಶನವಿದ್ದು, ರಘು ನಿಡುವಳ್ಳಿ ಸಂಭಾಷಣೆ, ರವಿವರ್ಮ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.