Asianet Suvarna News Asianet Suvarna News

ಬಂದ ಬಂದ ನೋಡು ಭಜರಂಗಿ-2: ಧೂಳೆಬ್ಬಿಸಿದ ಟ್ರೇಲರ್

* ಬಹುನಿರೀಕ್ಷಿತ ಭಜರಂಗಿ-2  ಟ್ರೇಲರ್ ರಿಲೀಸ್
* ಟ್ರೇಲರ್ ಮೂಲಕ ಮೋಡಿ ಮಾಡಿದ ಶಿವರಾಜ್​ಕುಮಾರ್​..
* ದುಪ್ಪಟ್ಟಾಯಿತು ಅಭಿಮಾನಿಗಳ ನಿರೀಕ್ಷೆ

shivaraj kumar kannada Movie bhajarangi-2 Trailer Released rbj
Author
Bengaluru, First Published Oct 20, 2021, 8:48 PM IST
  • Facebook
  • Twitter
  • Whatsapp

ನಿರ್ದೇಶಕ ಎ. ಹರ್ಷ ಮತ್ತು ನಟ ಶಿವರಾಜ್​ಕುಮಾರ್​ (Shivaraj Kumar) ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಭಜರಂಗಿ 2’ (Bhajarangi-2)ಚಿತ್ರದ  ಟೀಸರ್​ ಮತ್ತು ಪೋಸ್ಟರ್​ಗಳು ಧೂಳೆಬ್ಬಿಸಿವೆ. ಇದರ ಮಧ್ಯೆ ಇಂದು (ಅ.20) ‘ಭಜರಂಗಿ 2’ ಟ್ರೇಲರ್​ ರಿಲೀಸ್​ ಆಗಿದೆ. 

ಜಯಣ್ಣ ಕಂಬೈನ್ಸ್​ ಬ್ಯಾನರ್​ನಲ್ಲಿ ‘ಭಜರಂಗಿ 2’ ಟ್ರೇಲರ್ (Bhajarangi-2 Trailer)  ಮೂಡಿಬಂದಿದ್ದು, ಇಡೀ ಟ್ರೇಲರ್​ನಲ್ಲಿ ಹಿನ್ನೆಲೆ ಸಂಗೀತ ಹೈಲೈಟ್​ ಆಗಿದೆ.  ಟ್ರೇಲರ್​ನಲ್ಲಿ ಬರುವ ಎಲ್ಲಾ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಕಾಣುವ ಪ್ರತಿ ಸೆಟ್ ಹಾಗೂ ಮ್ಯೂಸಿಕ್​ ಸಾಕಷ್ಟು ಗಮನ ಸೆಳೆಯುತ್ತಿದೆ. 

ಶಿವರಾಜ್‌ಕುಮಾರ್ 'ಭಜರಂಗಿ-2' ಬಗ್ಗೆ ತಿಳಿಯಲೇ ಬೇಕಾದ ವಿಚಾರಗಳಿವು..

 ಶಿವರಾಜ್​ಕುಮಾರ್, ಭಾವನಾ ಸೇರಿ ಎಲ್ಲರೂ ಭಿನ್ನವಾಗಿ  ಕಾಣಿಸಿಕೊಂಡಿದ್ದಾರೆ.  ಟ್ರೇಲರ್​ ನೋಡಿದವರಿಗೆ ಇಡೀ ಸಿನಿಮಾದ ಕಥೆ ತಂತ್ರ-ಮಂತ್ರಗಳ ಮೇಲೆಯೇ ಸಾಗುತ್ತದೆಯೇ ಎನ್ನುವ ಪ್ರಶ್ನೆ ಕಾಡದೆ ಇರದು.

ನಿರ್ದೇಶಕ ಎ. ಹರ್ಷ ಮತ್ತು ಶಿವರಾಜ್​ಕುಮಾರ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ 3ನೇ ಸಿನಿಮಾ ಇದಾಗಿದ್ದು, ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಈ ಹಿಂದೆ ತೆರೆಕಂಡಿದ್ದ ‘ಭಜರಂಗಿ’ ಚಿತ್ರ ಸೂಪರ್​ ಹಿಟ್​ ಆಗಿತ್ತು. ಹಾಗಾಗಿ ‘ಭಜರಂಗಿ 2’ ಈಗ ಸಖತ್​ ಹೈಪ್​ ಸೃಷ್ಟಿ ಮಾಡಿದೆ. ಟ್ರೇಲರ್​ ಮೂಲಕ ಈ ಹೈಪ್ ಮತ್ತಷ್ಟು​ ಹೆಚ್ಚಿಸಿದ್ದು, ಇದೇ ಅ.29ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಟ್ರೇಲರ್‌ ಹೀಗೆ ಇರ್ಬೇಕಾದ್ರೆ ಇನ್ನೂ ಸಿನಿಮಾ ಯಾವ ರೀತಿ ಇರ್ಬಹುದು ಎನ್ನುವುದು ಭಾರೀ ಕೌತುಕ ಮೂಡಿಸಿದೆ.

 

Follow Us:
Download App:
  • android
  • ios