ಪುತ್ರನಿಗೆ ಮನೆಯಲ್ಲಿಯೇ ಹೇರ್ ಕಟ್ ಮಾಡಿದ ಮಾಳವಿಕಾ- ಅವಿನಾಶ್!
ಸಿನಿಮಾ ಸೆಲೆಬ್ರಿಟಿಗಳು ಮನೆಯಲ್ಲಿ ಮಕ್ಕಳಿಗೆ ಮಾಡುತ್ತಿರುವ ಲಾಕ್‌ಡೌನ್ ಕೇರ್ ಕಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.....
ನಟಿ, ವಕೀಲೆ ಮತ್ತು ಬಿಜೆಪಿ ವಕ್ತಾರೆ ಮಾಳವಿಕಾ ಮತ್ತು ನಟ ಅವಿನಾಶ್ ತಮ್ಮ ಪುತ್ರ ಗಾಲ್ವ್‌ಗೆ ಹೇರ್ ಕಟ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಂದೆಯ ಮಡಿಲಲ್ಲಿ ಕುಳಿತಿರುವ ಗಾಲ್ವ್ ನಗು ನಗುತ್ತಾ ಹೇರ್ ಕಟ್ ಮಾಡಿಸಿಕೊಂಡಿದ್ದಾನೆ.
ಟಿವಿ ಚರ್ಚೆಯಲ್ಲಿ ಪ್ರಖರ ನಿಲುವು ವ್ಯಕ್ತಪಡಿಸುವ ದಿಟ್ಟೆ ಮಾಳವಿಕಾ!ಕೊರೋನಾ ವೈರಸ್ ಜನರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ನಮ್ಮ ಗ್ರೂಮಿಂಗ್ ವಿಚಾರದಲ್ಲಿಂತೂ ನಾವು ಬೇರೊಬ್ಬರ ಮೇಲೆ ಡಿಪೆಂಡ್ ಆಗುತ್ತಿದ್ದೆವು. ಆದರೀಗ ಎಲ್ಲವನ್ನೂ ತಮ್ಮ ತಮ್ಮ ಮನೆಯಲ್ಲಿ, ತಾವೇ ಮಾಡಿಕೊಳ್ಳಲು ಪ್ರಾರಂಭಿಸಿದ್ದೀವಿ. ಸಾರ್ವಜನಿಕರಿಂದ ಸೆಲೆಬ್ರಿಟಿಗಳವರೆಗೂ ಎಲ್ಲಾ ಮನೆಯಲ್ಲಿಯೇ ಹೇರ್ ಕಟ್ ಮಾಡಿಕೊಂಡಿದ್ದಾರೆ, ಫೋಟೋಗಳನ್ನು ಅನೇಕರು ಶೇರ್ ಮಾಡಿಕೊಂಡಿದ್ದಾರೆ. ಈ ಸಮಯದಲ್ಲೇ ನಟಿ ಮಾಳವಿಕಾ ಪುತ್ರನಿಗೆ ಹೇರ್ ಕಟ್ ಮಾಡಿದ್ದಾರೆ..
ಹುಟ್ಟಿದ್ದು, ಬೆಳೆದಿದ್ದು ತಮಿಳುನಾಡಿನಲ್ಲಿಯೇ ಆದರೂ ಮಾಳವಿಕಾ ಅಪ್ಪಟ ಕನ್ನಡ ಭಾಷಾ ಪ್ರೇಮಿ. ಬೆಂಗಳೂರು ಯೂನಿವರ್ಸಿಟಿ ಆಫ್ ಕಾನೂನು ಪದವಿಯಲ್ಲಿ 3ನೇ rank ಪಡೆದುಕೊಂಡಿದ್ದಾರೆ. ತಾಯಿಯಾಗಿ ಕುಟುಂಬ ನಿಭಾಯಿಸುತ್ತಾ, ಕಲಾವಿದೆಯಾಗಿ ಸಿನಿ ರಂಗದಲ್ಲಿ ಮತ್ತು ಬಿಜೆಪಿ ವಕ್ತಾರೆಯಾಗಿ ರಾಜಕೀಯದಲ್ಲಿ ಮಾಳವಿಕಾ ಅವರು ತುಂಬಾ ಆ್ಯಕ್ಟಿವ್. ರಾಷ್ಟ್ರೀಯ ಮಾಧ್ಯಮದಲ್ಲಿ ಕರ್ನಾಟಕ ಬಿಜೆಪಿಯನ್ನು ಪ್ರಭಾವಿಯಾಗಿ ಪ್ರತಿನಿಧಿಸುವ ದಿಟ್ಟೆ ಈ ಮಾಳವಿಕಾ. .
ಮಾಳವಿಕಾಗೆ ಪ್ರಶಾಂತ್ ನೀಲ್ ಮೇಲೆ ಕೋಪ ಬಂದಿತ್ತಂತೆ!
ಇನ್ನು ಡಾಕ್ಟರ್ ವಿಠಲ್ ರಾವ್ ಖ್ಯಾತಿಯ ರವಿಶಂಕರ್ ಗೌಡ ಕೂಡ ಮನೆಯಲ್ಲಿ ಮಕ್ಕಳಿಗೆ ಹೇರ್ ಕಟ್ ಮಾಡಿದ್ದಾರೆ. ಈ ಹಿಂದೆ ಇದರ ವಿಡಿಯೋ ಮತ್ತು ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಅತ್ತ ಬಾಲಿವುಡ್ ನಟ ಸೈಫ್ ಆಲಿ ಖಾನ್ ಸಹ ತಮ್ಮ ಮಗ ತೈಮೂರ್‌ಗೆ ಹೇರ್ ಕಟ್ ಮಾಡಿದ್ದನ್ನು ಕರೀನಾ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಅದೂ ವೈರಲ್ ಆಗಿತ್ತು.