ಸ್ತ್ರೀ ಪರ ಧ್ವನಿ ಎತ್ತಿದ ಮಧುಬಾಲ; ಕಿಚ್ಚೆಚ್ಚಿಸುವ ವಿಡಿಯೋ ನೋಡಿ!

ಅಣ್ಣಯ್ಯ ಚಿತ್ರದ ನಟಿ ಮಧುಬಾಲ ವಿಡಿಯೋ ವೈರಲ್. happydemic ಅರ್ಥ ಹೇಳಿ ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿದ್ದಾರೆ.

Kannada madhoo defines happydemic and addresses current issues in india vcs

ಕನ್ನಡ ಚಿತ್ರರಂಗದ ಬ್ರೇವ್ ನಟಿ ಮಧುಬಾಲ ಜನರಲ್ಲಿ ಅರಿವು ಮೂಡಿಸುವ ಸುಲವಾಗಿ ಹ್ಯಾಪಿಡೆಮಿಂಕ್ ಎಂಬ ಪದದ ಅರ್ಥವನ್ನು ತಿಳಿಸಲು ರೆಕಾರ್ಡ್ ಮಾಡಿರುವ ವಿಡಿಯೋದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಮಧುಬಾಲ ಮಾತುಗಳಿಂದ ಸ್ಫೂರ್ತಿಗೊಂಡ ನೆಟ್ಟಿಗರು ಕಾಮೆಂಟ್‌ನಲ್ಲಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಮೊದಲ ಸಿನಿಮಾದಿಂದ ಕೈಬಿಟ್ಟದ್ದಕ್ಕೆ 4 ದಿನ ಅತ್ತಿದ್ದರಂತೆ ಅಣ್ಣಯ್ಯ ನಟಿ

ವಿಡಿಯೋದಲ್ಲಿ ಏನಿದೆ?
'ಹಾಯ್ ನಾನು ಮಧು. ಮೊದಲ ಬಾರಿ ನಾನು ನನ್ನ ಟ್ರೇಡ್ ಮಾರ್ಕ್‌ ಲಿಪ್‌ಸ್ಟಿಕ್‌ ಹಾಗೂ ಮೇಕಪ್‌ ಇಲ್ಲದೇ ವ್ಯಾಯಾಮ ಮಾಡುತ್ತಾ, ಬೆವರು ಸುರಿಸುತ್ತಿರುವ ಮುಖದಲ್ಲಿ ಬಂದು ವಿಡಿಯೋ ಮಾಡುತ್ತಿರುವೆ. ಹ್ಯಾಪಿಡೆಮಿಕ್‌ನ ಮೊದಲ ಪೋಸ್ಟ್‌. ಇದರ ಅರ್ಥ ಏನೆಂದು ನಾನು ನಿಮಗೆ ತಿಳಿಸುತ್ತೇನೆ,' ಎಂದು ವಿಡಿಯೋ ಪ್ರಾರಂಭಿಸಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Madhoo Shah (@madhoo_rockstar) on Oct 1, 2020 at 12:18am PDT

ಕೊರೋನಾ ಪ್ಯಾಂಡಮಿಕ್‌ ಸಮಯದಲ್ಲಿ ನಾನು ಹ್ಯಾಪಿಡೆಮಿಕ್ ಎಂಬ ಪದದ ಬಗ್ಗೆ ತಿಳಿದುಕೊಂಡಿರುವೆ. ಈ ಸೋಂಕು ಅನೇಕರಿಗೆ ನೋವು ತಂದಿದೆ. ಈ ಕಾರಣಕ್ಕೆ ನಾನು ಎಲ್ಲೆಡೆ ಹ್ಯಾಪಿಡೆಮಿಕ್ ಕ್ರಿಯೇಟ್ ಮಾಡಬೇಕೆಂದು ಮುಂದಾಗಿದ್ದೇನೆ. ಹ್ಯಾಪಿಡೆಮಿಕ್ ಅಂದರೆ ನಮ್ಮ ನಗು, ನಮ್ಮ ಸಂತೋಷವನ್ನು ಎಲ್ಲೆಡೆ ಹರಡುವುದು. ಮತ್ತೊಬ್ಬ ವ್ಯಕ್ತಿಯನ್ನು ಸಂತೋಷವಾಗಿಡುವುದು. ನಮ್ಮ ಭಾರತೀಯ ಮನಸ್ಥಿತಿಯೇ ವಿಭಿನ್ನ. ಎಷ್ಟೇ ಕಷ್ಟ ಎದುರಿಸುತ್ತಿದ್ದರೂ ಒಂದೊಳ್ಳೆ ದಿನ ಬಂದೇ ಬರುತ್ತದೆ ಎಂದು ಕಾಯುತ್ತೇವೆ. ಜನರನ್ನು ಕಳೆದುಕೊಂಡಿದ್ದೀವಿ, ಹಣ ಕಳೆದುಕೊಂಡಿದ್ದೀವಿ. ಎಷ್ಟೆಲ್ಲಾ ನಷ್ಟ ಅನುಭವಿಸುತ್ತಿದ್ದರೂ. ಒಳ್ಳೆ ದಿನಗಳಿಗಾಗಿ ಕಾಯುತ್ತಿದ್ದೇವೆ. ಕ್ವಾರಂಟೈನ್‌ನಿಂದ ಮನೆಯಲ್ಲಿ ಕುಟುಂಬಸ್ಥರ ಜೊತೆಗಿದ್ದು, ಲೈಫ್‌ಟೈಮ್‌ನಲ್ಲಿ ಸಿಗದ ಸಂತೋಷವನ್ನು ಹುಡುಕಿಕೊಂಡಿದ್ದೀವಿ,' ಎಲ್ಲರ ಮಾನಸಿಕ ಯಾತನೆಯನ್ನು ಅರ್ಥ ಮಾಡಿಕೊಂಡಂತೆ ಮಾತನಾಡಿದ್ದಾರೆ ರೋಜಾ ನಟಿ.

ಅಣ್ಣಯ್ಯ ಚಿತ್ರದ ರವಿಚಂದ್ರನ್‌ ಹೀರೊಯಿನ್‌ ಮಧು ಹೇಗಾಗಿದ್ದಾರೆ ಈಗ ನೋಡಿ!

ರೇಪ್‌ ಘಟನೆ ಬಗ್ಗೆ ಗರಂ:
ಇಷ್ಟೆಲ್ಲಾ ಕಷ್ಟು ಅನುಭವಿಸುತ್ತಿರುವ ಸಮಯದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ರೇಪ್ ಮಾಡುವುದರಿಂದ ಎಲ್ಲಾ ಕಷ್ಟಗಳುನ್ನು ಬಗೆಹರಿಸಲು ಆಗುತ್ತದೆಯೇ? 2016 ನಿರ್ಭಯಾ ಕೇಸ್ ಆದ ನಂತರ ರೇಪ್ ಕೇಸ್ ನಿಲ್ತಾ? ಮನುಷ್ಯರೇ ಮತ್ತೊಮ್ಮ ಮನುಷ್ಯರಿಗೆ ತೊಂದರೆ ಕೊಡಲು ಹೇಗೆ ಮನಸ್ಸು ಬರುತ್ತದೆ? ವಿಚಾರ ಬಹಿರಂಗವಾದಾಗ ನಾವು ಅದನ್ನು ಮನುಷ್ಯನ ಮನಸ್ಥಿತಿ ಮೇಲೆ ದೂರುತ್ತೇವೆ. ಹಾಗಂತ ಆ ವ್ಯಕ್ತಿಗೆ ರೇಪ್ ಮಾಡಲು ಪರ್ಮಿಷನ್ ಕೊಡಲು ಆಗುತ್ತಾ? ನಮ್ಮ ಸಮಾಜ ಅಥವಾ ಭೂಮಿ ಒಪ್ಪಿಕೊಳ್ಳುತ್ತಾ? ಮದ್ಯಪಾನ ವ್ಯಸನಿ ರಿಹ್ಯಾಬ್ ಸೆಂಟರ್‌ಗೆ ಹೋದರೆ ನಾನು ಆಲ್ಕೋಹಾಲಿಕ್ ಎಂದು ಹೇಳಿಕೊಂಡು ಚಿಕಿತ್ಸೆ ಪಡೆಯುತ್ತಾನೆ. ಹಾಗೆಯೇ ಒಬ್ಬ ರೇಪಿಸ್ಟ್ ಮನಸ್ಥಿತಿ ಇರುವವನು ನಾನು ರೇಪಿಸ್ಟ್ ಎಂದು ಹೇಳಿಕೊಂಡು ಚಿಕಿತ್ಸೆ ಪಡೆಯುತ್ತಾನಾ? ಅಥವಾ ನ್ಯಾಯಾಲಯಕ್ಕೆ ಹೋಗಿ ನನ್ನ ಮನಸ್ಥಿತಿ ಸರಿ ಇಲ್ಲ, ನಾನು ಹೀಗೆ ಮಾಡಬೇಕು ಎಂದೆನಿಸುತ್ತಿದೆ ಎಂದು ಹೇಳಿ ತನ್ನನ್ನು ತಾನು ಲಾಕ್‌ ಮಾಡಿಸಿಕೊಳ್ಳುವುದಕ್ಕೆ ಆಗುವುದಿಲ್ವಾ?

Kannada madhoo defines happydemic and addresses current issues in india vcs

ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿ ನಮ್ಮ ಸುತ್ತ ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡಿದ ನಟಿ ಮಧು ಜನರಲ್ಲಿ ಧೈರ್ಯ ತುಂಬಿದ್ದಾರೆ. ತೆರೆ ಮೇಲೆ ನಾವು ನೋಡುತ್ತಿದ್ದ ಮಧು ನಿಜವಲ್ಲ. ಇದು ನಿಜವಾದ ಮಧು ಎಂದು ಆಪ್ತರು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.

Latest Videos
Follow Us:
Download App:
  • android
  • ios