ಮೊದಲ ಸಿನಿಮಾದಿಂದ ಕೈಬಿಟ್ಟದ್ದಕ್ಕೆ 4 ದಿನ ಅತ್ತಿದ್ದರಂತೆ ಅಣ್ಣಯ್ಯ ನಟಿ
ಕ್ರೇಜಿ ಸ್ಟಾರ್ ರವಿಚಂದ್ರರಿಗೆ ಅಣ್ಣಯ್ಯ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ ಮಧು ನೆನಪಿದಿಯಾ? ಹಿಂದಿ ಹಾಗೂ ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ ನಟಿ ಮಧು. ತಮ್ಮ ಸಿನಿಮಾ ಜರ್ನಿಯ ಬಗ್ಗೆ ಮಾತನಾಡಿರುವ ಇವರು, ಮೊದಲ ಸಿನಿಮಾದಿಂದ ಅವರನ್ನು ಕೈ ಬಿಟ್ಟ ಅನುಭವ ಹಂಚಿಕೊಂಡಿದ್ದಾರೆ. ಆಗ 4 ದಿನ ಸತತವಾಗಿ ಅತ್ತಿದ್ದರಂತೆ. ಈ ನಟಿಯ ಈ ಹೇಳಿಕೆ ಬಾಲಿವುಡ್‌ನಲ್ಲಿ ನಡೆಯುತ್ತಿರುವ ಹಲವು ವಿವಾದಗಳ ಕಾರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ತಮಿಳು ನಟಿ ಮಧು ಸುಮಾರು 30ಕ್ಕೂ ಸುಮಾರು 30ಕ್ಕೂ ಹೆಚ್ಚು ಬಹು ಭಾಷಾ ಸಿನಿಮಾಗಳಲ್ಲಿ ನಟಿಸಿದ್ದಾರೆ.
1991ರ ಸೂಪರ್ ಹಿಟ್ ಫೂಲ್ ಔರ್ ಕಾಂಟೆ ಸಿನಿಮಾದ ಮೂಲಕ ಯಶಸ್ಸು ಗಳಿಸಿದರು.
ಆದರೆ ಮಧುಗೆ ಫೇಮ್ ತಂದುಕೊಟ್ಟಿದ್ದು ಮಣಿರತ್ನಂ ಅವರ ರೋಜಾ.
ಇತ್ತೀಚೆಗೆ ಮಧು ತಮ್ಮ ಸಿನಿ ಜರ್ನಿಯ ಬಗ್ಗೆ ಹೇಳಿಕೊಂಡಿದ್ದಾರೆ.
ತಮ್ಮ ಮೊದಲ ಚಿತ್ರದಿಂದ ಕೈಬಿಟ್ಟದ್ದಕ್ಕೆ ಹೇಗೆ ಖಿನ್ನತೆಗೆ ಒಳಾಗಿದ್ದರು ಎಂದು ಹಂಚಿಕೊಂಡಿದ್ದಾರೆ ಅಣಯ್ಯ ನಟಿ.
'ನಾನು ನನ್ನ ಮೊದಲ ಚಿತ್ರಕ್ಕೆ ಸಹಿ ಹಾಕಿದ್ದೇನೆ, ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ನನ್ನೊಂದಿಗೆ 4 ದಿನಗಳ ಕಾಲ ಚಿತ್ರೀಕರಣ ನಡೆಸಿದರು. ಆದರೆ, ಆಮೇಲೆ ನನ್ನನ್ನು ಆ ಚಿತ್ರದಿಂದ ಕೈ ಬಿಟ್ಟರು, ಎಂದಿದ್ದಾರೆ ರೋಜಾ ನಟಿ.
ನಿರಾಕರಣೆಗಳ ನೋವು ಮತ್ತು ಅಸ್ವಸ್ಥತೆ ನನ್ನ ಕಾಲೇಜು ಸ್ನೇಹಿತರು, ನನ್ನ ಸಹೋದರರು ಮತ್ತು ಕುಟುಂಬದಿಂದ ನನ್ನನ್ನು ದೂರಮಾಡಿತ್ತು. ನಾನು ರಾತ್ರಿ ನನ್ನ ಬೆಡ್‌ರೂಮ್ ಅಳುತ್ತಿದ್ದೆ, ಆದರೆ ಬೆಳಿಗ್ಗೆ ನಾನು ಕಾಲೇಜಿಗೆ ಹೋಗಬೇಕಾಗಿತ್ತು, ಜನರನ್ನು ಭೇಟಿ ಮಾಡಬೇಕಾಗಿತ್ತು ಮತ್ತು ಸಹೋದರ ಮತ್ತು ತಂದೆ ಜೊತೆ ಮಾತನಾಡಬೇಕಾಗಿತ್ತು ಹೀಗೆ ಸಮಯ ಕಳೆದುಹೋಗುತ್ತದೆ. ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಹೆಚ್ಚು ಯೋಚಿಸಲಿಲ್ಲ' ಎಂದು ಹೇಳಿದ್ದಾರೆ ರೋಜಾ ಚೆಲುವೆ.
'ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಚಿತ್ರದಿಂದ ಹೊರಬರಲು ಯಾವುದೇ ಕಾರಣವನ್ನು ಸಹ ನನಗೆ ಹೇಳಲಿಲ್ಲ, ಅದು ನನಗೆ ಬಹಳ ದುಃಖವಾಗಿತ್ತು. ನ್ಯೂಸ್ ಪೇಪರ್ ಮೂಲಕ ನನ್ನನ್ನು ರಿಪ್ಲೇಸ್ ಮಾಡಿಲಾಗಿದೆ ಎಂದು ತಿಳಿದುಕೊಂಡೆ' ಎಂದು ಹೇಳಿಕೊಂಡಿದ್ದಾರೆ ನಟಿ.
'ನಾನು ಇಂದು ಆ ಘಟನೆಯ ಬಗ್ಗೆ ಯೋಚಿಸುವಾಗ, ಆ ಘಟನೆ ಸಂಭವಿಸದಿದ್ದರೆ, ನಾನು ಇಂದು ಇಲ್ಲಿ ಇರುತ್ತಿರಲಿಲ್ಲ. ಚಲನಚಿತ್ರದಿಂದ ನನ್ನನ್ನು ಒಂದು ಸವಾಲಾಗಿ ತೆಗೆದುಕೊಂಡೆ. ಅದಕ್ಕೆ ಯಶಸ್ವಿಯಾದೆ.
ಯಶಸ್ಸು ಗಳಿಸು ಕಷ್ಟ ಪಟ್ಟೆ. ಪ್ರತಿಯೊಂದೂ ವಿಷಯದಲ್ಲೂ ನನ್ನನ್ನು ಉತ್ತಮಗೊಳಿಸಿ ಕೊಂಡೆ.